ಇಂಡಿ ತಹಶೀಲ್ದಾರ್ ಬಿಎಸ್ ಕಡಕಭಾವಿಗೆ ಬೀಳ್ಕೊಡುಗೆ
Farewell to Indi Tahsildar BS Kadakbhai
ಲೋಕದರ್ಶನ ವರದಿ
ಇಂಡಿ 12 : ಇಂಡಿ ತಹಶೀಲ್ದಾರ್ ಬಿಎಸ್ ಕಡಕಭಾವಿ ಅವರಿಗೆ ಗುರುವಾರ ತಾಲ್ಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ ನೌಕರರು ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಿ ಅದ್ಧೂರಿಯ ಬೀಳ್ಕೊಡುಗೆ ನೀಡಿಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಇಂಡಿ ಉಪವಿಭಾಗಾಧಿಕಾರಿ ಗುರುಸ್ವಾಮಿ ಅವರು ಮಾತನಾಡಿ ಬಿಎಸ್ ಕಡಕಭಾವಿ ಅವರು ಇಂಡಿ ತಹಶೀಲ್ದಾರ್ ಆಗಿ ಒಳ್ಳೆಯ ಕೆಲಸ ಮಾಡಿದ್ದಾರೆ, ಇಂಡಿ ವಿಭಿನ್ನವಾದ ವಿಶಿಷ್ಟವಾದ ದೊಡ್ಡ ತಾಲೂಕು ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿ ಭಾಗವನ್ನು ಹಂಚಿಕೊಂಡಿದೆ.
ಹಕ್ಕು ಪತ್ರ ವಿತರಣೆ ಮಾಡಿರುವುದು ಆಗಿರಬಹುದು ಹಾಗೂ ಅತಿವೃಷ್ಟಿ ಮತ್ತು ನೆರೆ ಹಾವಳಿಗೆ ಸೇರಿದಂತೆ ಅನೇಕ ಕೆಲಸಗಳು ಬಂದಾಗಿನಿಂದಲೂ ಅಚ್ಚು ಕಟ್ಟಾಗಿ ಮಾಡಿದ್ದಾರೆ ಎಂದು ಹೇಳಿದರು.ಇಂಡಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ ರಾವೂರ ಮಾತನಾಡಿ ಬಿ ಎಸ್ ಕಡಕಭಾವಿ ಅವರು ಹೆಚ್ಚು ಹೆಚ್ಚು ಜನರನ್ನು ಸೇರಿಸಿ, ಶಾಸಕರ ಜೊತೆಗೂಡಿ ಸಭೆ-ಸಮಾರಂಭಗಳನ್ನು ನಡೆಸುವ ಮೂಲಕ ಇಂಡಿ ತಾಲ್ಲೂಕಿನಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ.
ಅವರ ಕೈಯಲ್ಲಿ ಕೆಲಸ ಮಾಡಿರುವ ನಾನು ಅನೇಕ ಅನುಭವಗಳನ್ನು ಮತ್ತು ಸಲಹೆಗಳು ನನಗೆ ಸಿಕ್ಕಿವೆ ಹಾಗೂ ಮಾಧ್ಯಮಗಳಲ್ಲಿ ಬಿಎಸ್ ಕಡಕಭಾವಿ ಅವರು ಹೆಚ್ಚಿನ ಪ್ರಚಾರ ಪಡೆದಿದ್ದರು ಎಂದು ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಬಿಎಸ್ ಕಡಕಭಾವಿ ಅವರು ನಾನು ಸುಮಾರು ಮೂರು ವರ್ಷಗಳ ಕಾಲ್ ಇಂಡಿ ತಾಲೂಕು ತಹಶೀಲ್ದಾರ್ ಕಾರ್ಯನಿರ್ವೆಸಿದ್ದು ಸಂತಸ ತಂದಿದೆ. ಈ ಬಾಗದ ಜನರು ತುಂಬಾ ಒಳ್ಳೆಯವರು ಹಾಗೂ ನಾನು ಮೂರು ವರ್ಷಗಳ ಕಾಲ್ ಸೇವೆ ಮಾಡಲು ನನಗೆ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಒಳ್ಳಯ ರೀತಿಯ ಸಹಕಾರ ನೀಡಿದ್ದರು.
ಅವರ ಸಾಹಯ ಸಹಕಾರ ಎಂದು ಮರೆಯಲಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಚಡಚಣ ತಹಶೀಲ್ದಾರ್ ಸಂಜಯ ಇಂಗಳೆ ಸಮಾಜ ಕಲ್ಯಾಣ ಇಲಾಖೆ ಸಾಹಯಕ ನಿರ್ದೇಶಕರಾದ ಉಮೇಶ್ ಲಮಾಣಿ, ಎಡಿಎಲ್‌ಆರ್ ಕಾಂಬಳೆ, ಇಂಡಿ ಪ್ರಾದೇಶಿಕ ಅರಣ್ಯ ಇಲಾಖೆ ಎಸ್‌ಜಿ ಸಂಗಾಲ ಬಿಸಿಎಮ್ ಅಧಿಕಾರಿ ಎಸ್‌ಎಸ್ ಗದ್ಯಾಳ ಹಾಗೂ ಈ ಪ್ರಾದೇಶಿಕ ಗ್ರಾಮಿಣ ಅರಣ್ಯ ಇಲಾಖೆ ಅಧಿಕಾರಿ ಮಂಜುನಾಥ ದೂಳೆ ಸೇರಿದಂತೆ ಅನೇಕರು ಮಾತನಾಡಿದರು. ಹಾಗೂ ಇಂಡಿ ತಾಲೂಕಿಗೆ ನಿಯೋಜನೆಗೊಂಡ ನೂತನ ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿ ಅವರನ್ನು ಕೂಡಾ ಆತ್ಮಿಯವಾಗಿ ಬರಮಾಡಿಕೊಂಡು ಅವರನ್ನು ಕೂಡಾ ಸನ್ಮಾನಿಸಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಶೀರಸದ್ದಾರರಾದ ಆರ್‌ಬಿ ಮೂಗಿ ಎಸ್‌ಆರ್ ಮುಜಗೊಂಡ ಬಳ್ಳೊಳ್ಳಿ ಕಂದಾಯ ನೀರೀಕ್ಷಕ ಪಿಜೆ ಕೊಡವನ ಹಾಗೂ ಹುಸೇನಿ ಗುನ್ನಾಪೂರ ಶಶಿ ಕರಕಟ್ಟಿ ಸಂತೋಷ ಹೋಟಗಾರ ಎಮ್ ಕೆ ಕೊಡತೆ ಶೃತಿ ಖೇಡಗಿ ಎಲ್‌ಎಸ್ ಬಗಲಿ ವಿವಿ ಕೊಳರಗಿ ಬಿಎ ಗುನ್ನಾಪೂರ ವಾಯ್ ಎಲ್ ಪೂಜಾರಿ ಕೆ ಎಸ್ ಚೌಧರಿ ಬಿಎಸ್ ಅವಜಿ ಮಾಹಾತೇಶ ಗುರಬಟ್ಟೆ ಸಿದ್ದು ಪೂಜಾರಿ ಪಿಎಸ್ ಚವಹಡಿಹಾಳ ಎಮ್ ಆರ್ ರಾಠೋಡ ಸೇರಿದಂತೆ ಕಂದಾಯ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಹಾಗೂ ಕಾರ್ಯಕ್ರಮವನ್ನು ಶಿಕ್ಷಕರಾದ ಬಸವರಾಜ ಗೋರನಾಳ ನಿರೂಪಿಸಿದರು.
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 