ಖ್ಯಾತ ಉರ್ದು ಲೇಖಕ ಪದ್ಮಶ್ರೀ ಮುಜ್ತಾಬ ಹುಸೇನ್ ನಿಧನ
ಹೈದರಾಬಾದ್, ಮೇ 27,ಖ್ಯಾತ ಉರ್ದು ಲೇಖಕ ಮತ್ತು ಹಾಸ್ಯಗಾರ ಮುಜ್ತಾಬ ಹುಸೇನ್ ಬುಧವಾರ ಇಲ್ಲಿನ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಉರ್ದು ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಹುಸೇನ್ ಅವರಿಗೆ 2007 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅವರ ಕೃತಿಗಳನ್ನು ಇಂಗ್ಲಿಷ್, ರಷ್ಯನ್ ಮತ್ತು ಜಪಾನೀ ಭಾಷೆಗಳಲ್ಲದೆ ಅನೇಕ ಭಾರತೀಯ ಭಾಷೆಗಳಿಗೆ ಅನುವಾದಿಸಲಾಗಿದೆ.ಉರ್ದು ದಿನ ಪತ್ರಿಕೆಗಳಲ್ಲಿ ಹುಸೇನ್ ಕೃತಿಗಳು ಮತ್ತು ಅಂಕಣಗಳು ತುಂಬಾ ಜನಪ್ರಿಯವಾಗಿದ್ದವು.ಹುಸೇನ್ ಅವರು ಹಾಸ್ಯಗಾರರಾಗಿದ್ದು, ಅನೇಕ ಹಾಸ್ಯ ಲೇಖನಗಳನ್ನು ಬರೆದಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 