ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಿ: ನ್ಯಾ.ರೇಣುಕಾದೇವಿ

ಹಾವೇರಿ07: ಆಧುನಿಕ ಭರಾಟೆಯಲ್ಲಿ  ಕಾಡುಗಳು ನಾಶವಾಗುತ್ತಿದೆ,  ಇದರಿಂದ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತಿದೆ. ನಾವು ಪರಿಸರವನ್ನು ಕಾಪಾಡಿದರೆ, ಪರಿಸರ ನಮ್ಮನ್ನು ಕಾಪಾಡುತ್ತದೆ.  ಹಾಗಾಗಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಎಚ್.ರೇಣುಕಾದೇವಿ ಅವರು ಹೇಳಿದರು.

ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,  ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ  ಜರುಗಿದ  ವಿಶ್ವ ಪರಿಸರ ದಿನಾಚರಣೆ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ನಾಶದಿಂದ ಅನೇಕ ದುಷ್ಪರಿಣಾಮಗಳು ಉಂಟಾಗುತ್ತಿವೆ. ಮಾಲಿನ್ಯ ರಹಿತ ಪರಿಸರ ನಿಮರ್ಾಣ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಪರಿಸರ ಉಳಿವಿಗೆ ಅಧಿಕ ಸಂಖ್ಯೆಯಲ್ಲಿ ಗಿಡ-ಮರಗಳನ್ನು ಬೆಳೆಸಬೇಕು. ಉತ್ತಮ ಪರಿಸರವನ್ನು ಉಳಿಸಿ ಬೆಳೆಸಿದಾಗ ಆರೋಗ್ಯವಂತ ಸಮಾಜ ನಿಮರ್ಾಣ ಸಾಧ್ಯ. ಮಕ್ಕಳು ತಮ್ಮ ಮನೆಯ ಅಂಗಳ ಅಥವಾ ಶಾಲೆ ಆವರಣದಲ್ಲಿ  ಸಸಿ ನೆಟ್ಟು ಮರವಾಗಿ ಬೆಳೆಸಬೇಕು. ಈ ಕಾರ್ಯ ನಿರಂತರವಾಗಿ ನಡೆದಾಗ ಮಾತ್ರ ಅರ್ಥಪೂರ್ಣ ಕಾರ್ಯಕ್ರಮವಾಗುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಮಾತನಾಡಿ, ನಮಗೆ ಬೇಕಾದುದನ್ನು ನಮ್ಮ ಸುತ್ತಲಿನ ಪರಿಸರದಿಂದ ಪಡೆದುಕೊಳ್ಳುತ್ತೇವೆ ಹಾಗೆ ಪರಿಸರ ಸಂರಕ್ಷಣೆ ಮಾಡಬೇಕು. ಒಟ್ಟು ಭೂ ಭಾಗದಲ್ಲಿ ಶೇ.33 ರಷ್ಟು ಅರಣ್ಯವಿರಬೇಕು. 

  ಇಂದು ದೇಶದಲ್ಲಿ ಅರಣ್ಯ ಪ್ರದೇಶ ಶೇ.20ಕ್ಕಿಂತಲೂ ಕಡಿಮೆ ಇದೆ. ಪರಿಸರ ಸಂರಕ್ಷಣೆ ಕೇವಲ ಸಕರ್ಾರ, ಅರಣ್ಯ ಇಲಾಖೆ  ಕೆಲಸವಷ್ಟೇ ಅಲ್ಲ, ಪರಿಸರ ಸಂರಕ್ಷಣೆ ನಮ್ಮೆಲರ ಹೊಣೆಯಾಗಿದೆ.  ಆರೋಗ್ಯವಂತ ಜೀವನ ನಡೆಸಲು ಹಾಗೂ ಮುಂದಿನ ಪೀಳಿಗೆಗೆ ಪರಿಸರ ಉಳಿಸಿ ಬೆಳೆಸುವುದು ಅತ್ಯವಶ್ಯಕವಾಗಿದೆ. ವಿದ್ಯಾಥರ್ಿಗಳು ಪರಿಸರ ರಕ್ಷಣೆಗೆ ಹೆಚ್ಚಿನ ಒಲವು ತೋರಿಸಬೇಕು ಹಾಗೂ  ಗಿಡಗಳನ್ನು  ಬೆಳೆಸಬೇಕು ಎಂದು ಹೇಳಿದರು.

ಪರಿಸರವಾದಿ ಮಾಧುರಿ ದೇವಧರ ಅವರು ಮಾತನಾಡಿ, ಪರಿಸರ ಸಂರಕ್ಷಣೆ ಕಾರ್ಯದಲ್ಲಿ ವಯಸ್ಕರ ಜೊತೆಗೆ ವಿದ್ಯಾಥರ್ಿಗಳು ತೊಡಗಿಕೊಳ್ಳಬೇಕು. ಮಕ್ಕಳು ಮನಸ್ಸುಮಾಡಿದರೆ ಸಮಾಜದಲ್ಲಿ ಮಕ್ಕಳು ಬದಲಾವಣೆ ತರಬಹುದು ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದಶರ್ಿ ಕೆ.ಶ್ರೀವಿದ್ಯಾ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎ.ವಿ.ಪಾಟೀಲ,  ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ.ಆರ್.ಗುಡಿ,  ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮೀ ಎನ್.ಗರಗ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎಸ್.ಎಂ.ಧನುರಾಜ, ಜಿ.ಪಂ.ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಕೆ.ಲೀಲಾವತಿ,  ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ, ಕಾರ್ಯದಶರ್ಿ ಪಿ.ಎಂ.ಬೆನ್ನೂರ,  ಸಹಾಯಕ ಅರಣ್ಯಾಧಿಕಾರಿ ಅಶೋಕ ಗೊಂಡೆ, ವಲಯ ಅರಣ್ಯಾಧಿಕಾರಿ ಎನ್.ಕೆ.ಉಮರಬಾಶಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನೆಪ್ಪ ವಡಗೇರಿ, ಲಯನ್ಸ್ ಶಿಕ್ಷಣ ಸಂಸ್ಥೆ  ಅಧ್ಯಕ್ಷ ಎಸ್.ಕೆ.ಮುದಗಲ್, ಡಾ.ಎಸ್.ಆರ್.ಗೊಡ್ಡೆಮ್ಮಿ, ಲಯನ್ಸ್ ಶಿಕ್ಷಣ ಸಂಸ್ಥೆ  ನಿದರ್ೆಶಕ ಎ.ಎಸ್.ಹೆರೂರ, ಮುಖ್ಯೋಪಾಧ್ಯಾಯರಾದ  ಪಿ.ಎಸ್.ಹಲಸೂರ, ಪಾರ್ವತಿ ಆರ್.ಪಾಟೀಲ ಹಾಗೂ ಡಾ.ಶಿವಲಿಂಗಪ್ಪ ಅವರು ಉಪಸ್ಥಿತರಿದ್ದರು.