ರಾಣೆಬೆನ್ನೂರಿನಲ್ಲಿ ಕಂದಾಯ ಅಧಿಕಾರಿ ಪಿ. ವಸಂತರಿಗೆ ಭಾವಪೂರ್ಣ ಬೀಳ್ಕೊಡುಗೆ

ರಾಣೆಬೆನ್ನೂರಿನಲ್ಲಿ ಕಂದಾಯ ಅಧಿಕಾರಿ ಪಿ. ವಸಂತರಿಗೆ ಭಾವಪೂರ್ಣ ಬೀಳ್ಕೊಡುಗೆ Emotional farewell to Revenue Officer P. Vasanth in Ranebennur

ರಾಣೆಬೆನ್ನೂರು 23 :  ನೌಕರರು ಯಾವುದೇ ಒಂದು ಹುದ್ದೆಗೆ ಯಾವುದೇ ಒಂದು ಊರಿಗೆ ಯಾವುದೇ ಒಂದು ಇಲಾಖೆಗೆ ಸೀಮಿತವಾಗಿರಲು ಸಾಧ್ಯವಾಗುವುದಿಲ್ಲ ಅವಕಾಶ ಸಿಕ್ಕಾಗ ತಮ್ಮ, ತಮ್ಮ ಕರ್ತವ್ಯಗಳನ್ನು ಮಾಡುವುದರ ಮೂಲಕ ಜನರ ಪ್ರೀತಿ ವಿಶ್ವಾಸ ಗಳಿಸಬೇಕು ಅದೇ ನಿಜವಾದ ಸೇವೆ ಎಂದು ಆದೇಶವನ್ನು ನಗರಸಭೆ  ಪೌರಾಯುಕ್ತ ಎಫ್‌. ಐ. ಇಂಗಳಗಿ ಹೇಳಿದರು.   ಅವರು ಇತ್ತೀಚೆಗೆ ನಗರಸಭೆ ಸರ್‌.ಎಂ. ವಿಶ್ವೇಶ್ವರಯ್ಯ ಸಭಾಭವನದಲ್ಲಿ ಕರ್ನಾಟಕ ರಾಜ್ಯ  ಪೌರ ಸೇವಾ ನೌಕರರ ಸಂಘದ ತಾಲೂಕ ಘಟಕವು ಆಯೋಜಿಸಿದ್ದ, ದಾವಣಗೆರೆ ಜಿಲ್ಲೆ  ಚನ್ನಗಿರಿ ತಾಲೂಕು ನಗರಸಭೆಗೆ  ವರ್ಗಾವಣೆಗೊಂಡ ಕಂದಾಯ ಅಧಿಕಾರಿ ಪಿ. ವಸಂತ ಅವರ ಬೀಳ್ಕೊಡುಗೆ ಅಂಗವಾಗಿ ನಡೆದ, ಅಭಿನಂದನಾ ಸನ್ಮಾನ, ಸಮಾರಂಭದಲ್ಲಿ   ಪಾಲ್ಗೊಂಡು ಮಾತನಾಡಿದರು.  

 ನಗರಸಭೆ ಅತ್ಯುತ್ತಮ ಕಾರ್ಯ ನಿರ್ವಹಿಸಬೇಕಾದರೆ ಅಲ್ಲಿನ ಎಲ್ಲಾ ಹಂತದ ನೌಕರರ ಸಹಾಯ, ಸಹಕಾರ ಅತ್ಯಂತ ಅಗತ್ಯವಾಗುತ್ತದೆ ಆ ನಿಟ್ಟಿನಲ್ಲಿ ವಸಂತ ಅವರು ಜನರ ಪ್ರೀತಿ, ವಿಶ್ವಾಸ ಗಳಿಸುವುದರ ಜೊತೆಗೆ ಕಾನೂನಾತ್ಮಕವಾಗಿ, ಕಾನೂನಿನ ಚೌಕಟ್ಟಿನಲ್ಲಿ  ಅತ್ಯುತ್ತಮ ಸೇವೆ ಸಲ್ಲಿಸಿ ನಗರದ ಜನರ ಪ್ರೀತಿ, ವಿಶ್ವಾಸ, ಅಭಿಮಾನ ಗಳಿಸಿದವರಾಗಿದ್ದಾರೆ ಎಂದರು. ಪೌರ ಸೇವಾ ನೌಕರರ ಮತ್ತು ಅಭಿಮಾನಿಗಳ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ, ಪಿ. ವಸಂತ ಅವರು, ನಗರಸಭೆ ಸಾರ್ವಜನಿಕರ ಸೇವೆಯಲ್ಲಿ ಸದಾ ಕ್ರಿಯಾ ಶೀಲವಾಗಬೇಕಾಗುತ್ತದೆ.

ಸಮಸ್ಯೆಗಳಿದ್ದಾಗ ಸಾರ್ವಜನಿಕರೊಂದಿಗೆ ಆ ಕುರಿತು ಮಾಹಿತಿ ಒದಗಿಸಿ, ಮನವರಿಸಿ, ಸರಳ ಪರಿಹಾರ ನೀಡಬೇಕು ಅದು ಪ್ರತಿಯೊಬ್ಬ ನೌಕರರ ಕರ್ತವ್ಯವಾಗಬೇಕು. ವಾಣಿಜ್ಯ ನಗರದ ಜನತೆ ಶಾಂತಿ ಪ್ರಿಯರು, ಸಹಕಾರದ ಮನೋಭಾವ ವುಳ್ಳವರು, ಯಾವುದೇ ಸಮಸ್ಯೆಗಳ ವಿಚಾರವಾಗಿ ಅವರಿಗೆ  ತಿಳಿಸಿ ಹೇಳಿದರೆ ಅರ್ಥಮಾಡಿಕೊಳ್ಳುವ ಗುಣ ಧರ್ಮದವರಾಗಿದ್ದಾರೆ. ಇಲ್ಲಿ ಸೇವೆ ಸಲ್ಲಿಸುವುದೇ ನಿಜವಾದ ಅದೃಷ್ಟ. ಎಂದು ನಾನು ಭಾವಿಸಿದ್ದೇವೆ. ವರ್ಗಾವಣೆ ಆದೇಶ ಪರಿಪಾಲಿಸಲೇಬೇಕು. ನೌಕರರಿಗೆ ಇದು  ಅನಿವಾರ್ಯ ಎಂದು ತಮ್ಮ ಸೇವಾ ಅವಧಿಯಲ್ಲಿ  ಸಹಕರಿಸಿದ, ಸಹಕಾರ ನೀಡಿದೆ ಆಡಳಿತಕ್ಕೂ ಸಾರ್ವಜನಿಕರಿಗೂ  ತಮ್ಮ ಕೃತಜ್ಞತೆ ಸಲ್ಲಿಸಿದರು.  

   ಸಂಘದ ತಾಲೂಕ ಅಧ್ಯಕ್ಷ ನಿಂಗಪ್ಪ ಮುದಿ ಕರಿಯಪ್ಪನವರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪಿ. ವಸಂತ ಅವರ ಸ್ಥಾನವನ್ನು ಅಲಂಕರಿಸಿದ   ವಿನಾಯಕ್ ಆರ್ . ಅವರನ್ನು ಸ್ವಾಗತಿಸಿ, ಅಭಿನಂದಿಸಲಾಯಿತು.  ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಕೋಟೆಪ್ಪ ಗೋಣಿಬಸಮ್ಮನವರ, ಪ್ರಧಾನ ಕಾರ್ಯದರ್ಶಿ ಪ್ರಭು ಬಾಲೆಹೊಸೂರ, ಕೋಶಾಧ್ಯಕ್ಷ   ಅರುಣಕುಮಾರ ಪಿ,. ತಾಲೂಕ ಘಟಕದ ಗೌರವಾಧ್ಯಕ್ಷ  ಶ್ರೀಮತಿ ವಾಣಿಶ್ರೀ, ವ್ಯವಸ್ಥಾಪಕ ಮಂಜುನಾಥ ಎಂ. ಆರ್‌., ಪ್ರಧಾನ ಕಾರ್ಯದರ್ಶಿ ಮಧು ಸಾತೇನಹಳ್ಳಿ, ಮಹೇಶ್ ಕೊಡಬಾಳ, ಹರೀಶಕುಮಾರ, ಗುಡ್ಡಪ್ಪ ವಿಭೂತಿ, ನಾಗರಾಜ ಹರಿಜನ, ಸಂತೋಷ್ ಗಾವಡೆ, ನಾಗರತ್ನ ಕೋರಿ, ಗಾಯತ್ರಾ ಬಿಳಚಿ, ಪುಷ್ಪಲತಾ ಸೇರಿದಂತೆ ನಗರಸಭೆಯ ಸಿಬ್ಬಂದಿ ಮತ್ತಿತರ ನೌಕರರು ಉಪಸ್ಥಿತರಿದ್ದರು.