ಚಿಕ್ಕೋಡಿ

ಚಾಲಕರಿಗೆ ಶಿಸ್ತು-ನಿಯಮ ಪಾಲನೆಯ ತರಬೇತಿ ಅಗತ್ಯ

ಚಾಲಕರಿಗೆ ಶಿಸ್ತು-ನಿಯಮ ಪಾಲನೆಯ ತರಬೇತಿ ಅಗತ್ಯ

ಚಿಕ್ಕೋಡಿ, 24 : ರಾಷ್ಟ್ರೀಯ ಚಾಲನಾ ಶಾಲಾ ದಿನಾಚರಣೆ ಪ್ರಯುಕ್ತ ಚಿಕ್ಕೋಡಿ ತಾಲೂಕಾ ವಾಹನ ಚಾಲನಾ ತರಬೇತಿ ಮಾಲಿಕರ ಸಂಘದ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು. 

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಾಜರಿದ್ದ ಟ್ರಾಫಿಕ್ ಪೊಲೀಸ್ ಠಾಣೆಯ ಪಿಎಸ್‌ಐ ಎ.ಐ. ಕಮತಗಿ ಮಾತನಾಡಿ ಚಾಲಕರಿಗೆ ಸರಿಯಾದ ತರಬೇತಿ ನೀಡುವುದು ಅತ್ಯಂತ ಮುಖ್ಯ. ಉತ್ತಮ ತರಬೇತಿ ನೀಡಿದಾಗ ಮಾತ್ರ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು. ತರಬೇತಿ ಅವಧಿಯಲ್ಲಿ ಶಿಸ್ತು, ನಿಯಮ ಪಾಲನೆ ಹಾಗೂ ಲೈಸನ್ಸ್‌ ಪ್ರಕ್ರಿಯೆಯನ್ನು ತಪ್ಪದೇ ಅನುಸರಿಸಬೇಕು ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕಾ ವಾಹನ ಚಾಲನಾ ತರಬೇತಿ ಮಾಲಿಕರ ಸಂಘದ ಅಧ್ಯಕ್ಷ ಎಂ.ಆರ್‌. ಮುನ್ನೊಳಿಕರ್ ವಹಿಸಿ, ಚಾಲನಾ ಶಾಲೆಗಳ ಸಾಮಾಜಿಕ ಜವಾಬ್ದಾರಿ ಹಾಗೂ ಸುರಕ್ಷಿತ ಸಂಚಾರದ ಮಹತ್ವವನ್ನು ಒತ್ತಿಹೇಳಿದರು.ಈ ಸಂದರ್ಭದಲ್ಲಿ ನಿಯಾಜ್ ಬುಡೇಖಾನ್, ವಿನಯ್ ಚೌಗಲಾ, ರಾಜು ಚಂದಗಡೆ, ಆಸಿಫ್ ಶೇಖ್, ಜಾವೀದ್ ಘಾಲವಾಡೆ, ಬಜರಂಗ್ ಮೊರೆ, ಸ್ವಪ್ನಿಲ್ ಅವಳೆಕರ್, ಅಮಿತ್ ಬಾಳ್ನಾಯಿಕ್, ಗೌರಿಶಂಕರ್ ಹಿರೇಮಠ್, ಸೂರಜ್ ನಾರೆ, ಮಾರುತಿ ಮಾಳಿ, ಸಾಗರ್ ಜನವಾಡೆ, ಶಫೀಕ್ ಕಂಕಣವಾಡಿ, ಸಂಜು ಲಠ್ಠೆ, ಪ್ರಶಾಂತ್ ಕುಷ್ಟಗಿ, ಮಾಂತೇಶ್ ಮಾಳಿ, ಸಚಿನ್ ಬುಬನಾಳೆ, ಜ್ಯೋತಿರಾಮ್ ಪವಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು. 

ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿ ವಿನಯ್ ಚೌಗಲಾ ವಂದಿಸಿ, ಖಜಾಂಚಿ ರಾಜು ಚಂದಗಡೆ ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ