ಜೀವ ಯಾನದ ಯಾತ್ರೆ ಮುಗಿಸಿದ ಅಮೂಲ್ಯ ಜೀವ ಡಾ,ಸಿದ್ದಲಿಂಗೇಶ ಪಟ್ಟಣಶೆಟ್ಟರ ವಿಧಿವಶ
Dr. Siddalingesh Patanshet, a precious life-long journeyer, passes away
ಗದಗ 28 : ಶಿಕ್ಷಣ ಕ್ಷೇತ್ರದ ಅನನ್ಯ ಪರಿಚಾರಕ, ಶಿಕ್ಷಣ ತಜ್ಞ, ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಹಾಗೂ ಆಲಮಟ್ಟಿ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಶಿಕ್ಷಣ ಸಂಸ್ಥೆಗಳ ಕ್ರಿಯಾಶೀಲ ಕಾರ್ಯದರ್ಶಿಗಳಾದ ಪ್ರೋ,ಶಿವಾನಂದ ಪಟ್ಟಣಶೆಟ್ಟರ ಅವರ ಏಕೈಕ ಸುಪುತ್ರ ಡಾ, ಸಿದ್ದಲಿಂಗೇಶ ಎಸ್.ಪಟ್ಟಣಶೆಟ್ಟರ ಅವರು ಹೃದಯಾಘಾತದಿಂದ ಗುರುವಾರ ಬೆಳಿಗ್ಗೆ ನಿಧನರಾದರು.
ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದರು.36 ವಯಸ್ಸಿನ ಡಾ, ಸಿದ್ದಲಿಂಗೇಶ ಪಟ್ಟಣಶೆಟ್ಟರ ದಾವಣಗೆರೆ ಕಾಲೇಜೊಂದರಲ್ಲಿ ಎಂ.ಡಿ.ವ್ಯಾಸಂಗ ಮಾಡುತ್ತಿದ್ದರು. ಮೃತರ ತಂದೆ ಪ್ರೋ,ಶಿವಾನಂದ ಪಟ್ಟಣಶೆಟ್ಟರ ಅವರು ರಾಜ್ಯದ ಪ್ರತಿಷ್ಠಿತ ಮಠಗಳಲ್ಲೊಂದಾದ ಗದಗಿನ ಜಗದ್ಗುರು ತೋಂಟದಾರ್ಯ ಮಠದ ಹಾಗೂ ತೋಂಟದಾರ್ಯ ವಿದ್ಯಾಪೀಠದ ಮತ್ತು ಆಲಮಟ್ಟಿ ಎಸ್.ವಿ.ವಿಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾಗಿ ಕಳೆದ ಹಲ ದಶಕಗಳಿಂದ ಅಮೋಘ ಸೇವೆ ಸಲಿಸುತ್ತಿದ್ದಾರೆ.
ಅವರ ಅವಿರತ ಕಾಯಕ, ಕೈಂಕರ್ಯ ನಿಂದಲೇ ರಾಜ್ಯದ ವಿವಿಧೆಡೆ ನೂರಾರು ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ದಾಸೋಹದ ಕಾರ್ಯಗಳು ಅಚ್ಚುತನಿಂದ ನಿರ್ವಹಿಸುತ್ತಾ ಪ್ರಗತಿಯ ಪಥದಲ್ಲಿಂದು ಮುನ್ನಡೆಯುತ್ತಿವೆ. ಪ್ರೋ,ಶಿವಾನಂದ ಪಟ್ಟಣಶೆಟ್ಟರ ಅವರ ಸೇವಾ ಕಾಯಕದ ಹಿಂದೆ ಅಪಾರ ಬೆವರಿನ ಶ್ರಮ,ತ್ಯಾಗದ ಕಥೆ ಇದೆ. ಮೊನ್ನೆ ಕಾಯಕಯೋಗಿ ಸೇರಿದಂತೆ ರಾಜ್ಯ ಮಟ್ಟದ ಹಲವಾರು ಪ್ರಶಸ್ತಿಗಳು ಅವರ ಮುಡಿಗೆ ಸಲ್ಲಿವೆ. ಸೃಜನಕ್ರಿಯೆಯ ಪಾದರಸ ವ್ಯಕ್ತಿತ್ವದ ಚಹರೆ ಹೊಂದಿರುವ ಪ್ರೋ, ಶಿವಾನಂದ ಪಟ್ಟಣಶೆಟ್ಟರ ಅವರು ಹೆಸರಿಗೆ ತಕ್ಕಂತೆ ಆನಂದದ ಉಪಮೇಯಲ್ಲಿದ್ದಾಗಲೇ ಇಂದು ಪ್ರೀತಿಯ ಕುಡಿಯನ್ನು ಕಳೆದುಕೊಂಡಿರುವುದು ತೀವ್ರ ನೋವಿನ ಸಂಗತಿಯಾಗಿದೆ.
ಮನ ಕರಗುವ ಈ ವಿದ್ಯಮಾನದಿಂದ ನೂರಾರು ಮನಗಳು ವಿಚಲಿತಗೊಂಡಿವೆ. ಪಟ್ಟಣಶೆಟ್ಟರ ಅವರ ಕುಟುಂಬ ಪರಿವಾರ ಹಾಗೂ ನೌಕರರ ಸಮೂಹದಲ್ಲಿಗ ಸೂತಕದ ಛಾಯೇ ಅವರಿಸಿದೆ. ಮೃತರ ಪ್ರಾಥಿ9ವ ಶರೀರವನ್ನು ಬೆಂಗಳೂರಿನಿಂದ ಗದುಗಿಗೆ ಕರೆತರಲಾಗುತ್ತಿದೆ. ಸಂಜೆ ಅಥವಾ ರಾತ್ರಿ ವೇಳೆ ಗದಗ ತಲುಪುವ ಸಾಧ್ಯತೆ ಇದೆ. ಶುಕ್ರವಾರ ಅಂತ್ಯಯಾತೆ ಬಳಿಕ ಅಂತ್ಯಕ್ರಿಯೆ : ಗುರುವಾರ ಬೆಳಗಿನ ಜಾವ ಅಸ್ತಂಗತರಾಗಿರುವ ಡಾ.ಸಿದ್ದಲಿಂಗೇಶ ಪಟ್ಟಣಶೆಟ್ಟರ ಅವರ ಪ್ರಾಥಿ9ವ ಶರೀರದ ಅಂತ್ಯಯಾತ್ರೆಯು ಶುಕ್ರವಾರ ಮಧ್ಯಾಹ್ನ 11 ಗಂಟೆಗೆ ಗದಗಿನ ಸಿದ್ದಲಿಂಗ ನಗರದ ಅವರ ಸ್ವಗೃಹದಿಂದ ಹೊರಟು ಮುಳಗುಂದ ರಸ್ತೆಯಲ್ಲಿರುವ ಅಂಜುಮನ್ ಪಾಲಿಟೆಕ್ನಿಕ್ ಕಾಲೇಜು ಹತ್ತಿರದ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಆಪ್ತಮೂಲಗಳು ತಿಳಿಸಿವೆ.
ಮೃತರ ತಂದೆ ಶಿವಾನಂದ ಪಟ್ಟಣಶೆಟ್ಟರ, ತಾಯಿ ಶ್ರೀಮತಿ ಶಾರದಾ ಎಸ್. ಪಟ್ಟಣಶೆಟ್ಟರ ತಮ್ಮ ಪ್ರೀತಿ ಪಾತ್ರದ ಜೀವ ಕುಡಿಯನ್ನು ಕಳೆದುಕೊಂಡು ರೋಧನೆಯ ಕಟ್ಟೆಯಲ್ಲಿ ಮಮ್ಮಲ ಮರಗುತ್ತಿದ್ದಾರೆ. ಸಹೋದರಿ ಶ್ರೀಮತಿ ಪೂಜಾ ಶ್ರೀಕಾಂತ ಕುಂಬಾರಿಶೆಟ್ಟರ ಸೇರಿದಂತೆ ಅಪಾರ ಬಂಧು ಬಳಗ, ಹಿತೈಷಿಗಳು ಕಂಬನಿ ಧಾರೆಯಲ್ಲಿ ಶೋಕತಪ್ತರಾಗಿ ದುಃಖದ ಮಡುವಿನಲ್ಲಿ ರೋಧಿಸುತ್ತಿದ್ದಾರೆ. ಒಡನಾಡಿ ಮೊಗಭಾವಗಳು ಇದೀಗ ಶೋಚನೀಯ ಪರಿಸ್ಥಿತಿಯಲ್ಲಿವೆ ಭಾವಪೂರ್ಣ ಶ್ರದ್ಧಾಂಜಲಿ : ಡಾ, ಸಿದ್ದಲಿಂಗೇಶ ಎಸ್ ಪಟ್ಟಣಶೆಟ್ಟರ ಅವರ ಆಕಾಲಿಕ ನಿಧನಕ್ಕೆ ಆಲಮಟ್ಟಿ ಎಸ್.ವಿ.ವಿ.ಸಂಸ್ಥೆಯ ಗುರು ಬಳಗ ತೀವ್ರ ಸಂತಾಪ ಸೂಚಿಸಿದ್ದಾರೆ.
ಎಂಎಚ್‌ಎಂ ಪದವಿ, ಪಪೂ ಕಾಲೇಜಿನ ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ, ಯುವಜೀವದ ಈ ಅನೀರೀಕ್ಷಿತ ಕಣ್ಮರೆ ನಮ್ಮೆಲ್ಲರ ಹೃದಯ ಭಾರವಾಗಿಸಿದೆ. ಸರಳತೆಗೆ ಹೆಸರಾದ ಪ್ರೋ,ಶಿವಾನಂದ ಪಟ್ಟಣಶೆಟ್ಟರ ಅವರಿಗೆ ಹಾಗೂ ಅವರ ಪರಿವಾರಕ್ಕೆ ದುಃಖ ಸಹಿಸುವ ಶಕ್ತಿ ಶಿವಶರಣ ಬಸವಾದಿ ಪ್ರಮಥ ದೇವಗಣಗಳು ಕರುಣಿಸಲಿ. ಹಾಗೆಯೇ ಮೃತರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿವೆಂದು ಶೋಕ ಸಂದೇಶದಲ್ಲಿ ಪ್ರಾಥಿ9ಸಿದ್ದಾರೆ. ಕಾಲೇಜಿನ ಉಪನ್ಯಾಸಕರಾದ ಎಚ್.ಎನ್.ಕೆಲೂರ, ಪ್ರಕಾಶ ಧನಶೆಟ್ಟಿ, ಎಂ.ಎಸ್.ಸಜ್ಜನ, ಟಿ.ಬಿ.ಕರದಾನಿ, ಮಮತಾ ಕರೇಮುರಗಿ, ಧನರಾಜ ಸಿಂಗಾರಿ, ತಿಮ್ಮಣ್ಣ ದಾಸರ,
ಶಿಕ್ಷಣ ಅಭಿಮಾನಿ ಬಸಯ್ಯ ಶಿವಯೋಗಿಮಠ, ಹೈಸ್ಕೂಲಿನ ಮುಖ್ಯ ಶಿಕ್ಷಕ ಎಸ್.ಐ.ಗಿಡ್ಡಪ್ಪಗೋಳ,ಜಿ.ಎಂ.ಕೋಟ್ಯಾಳ, ಎಸ್.ಎಚ್.ನಾಗಣಿ, ಆರ್.ಎಂ.ರಾಠೋಡ, ಎನ್.ಎಸ್.ಬಿರಾದಾರ, ದಶವಂತ,ಸಿಂಧೆ,ಶ್ರೀಧರ, ಸಚೀನ ಹೆಬ್ಬಾಳ, ಜಿ.ಆರ್.ಜಾಧವ, ಯು.ಎ.ಹಿರೇಮಠ, ಎಂ.ಎಚ್.ಬಳಬಟ್ಟಿ,ಮಹೇಶ್ ಗಾಳಪ್ಪಗೋಳ, ಕೆ.ಜಗದೇವಿ, ಸರಸ್ವತಿ ಈರಗಾರ, ಸಚೀನ ರಾಠೋಡ, ಜ್ಯೋತಿ ದೊಡ್ಡೆಣ್ಣವರ, ರಿಯಾನಾ ಕಾಲೇಖಾನ, ಪ್ರಾಧ್ಯಾಪಕಿ ಅಂಬಿಕಾ ಇಟಗಿ, ಲಿದ್ಗಮ್ಮ ಪಾಟೀಲ, ಸಾವಿತ್ರಿಬಾಯಿ ಕಲ್ಯಾಣಿ, ಆಶಾ ಬಿರಾದಾರ, ರೇಣುಕಾ ಮಾದರ, ಪ್ರಾಧ್ಯಾಪಕ ಪ್ರಭು ಕಲಗೊಂಡ, ಸಿ.ಎಸ್ಹೊಸಮನಿ, ತೀರ್ಥಲಿಂಗ ಮೇಟಿ, ಈರಣ್ಣ ಕುಮಟಗಿ ಮೊದಲಾದವರು ಶೋಕ ಸಂತಾಪ ಸೂಚಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ 