ಡಾ. ಜ್ಯೋತಿ ಖೋದ್ನಾಪುರ, ಡಾ. ಲೀಲಾ ಹೂಗಾರಗೆ ಅತ್ಯುತ್ತಮ ಖಾಸಗಿ ವಿವಿ ಪ್ರಶಸ್ತಿ

Dr. Jyoti Khodnapura, Dr. Leela Hugara win Best Private University Award

ವಿಜಯಪುರ 15: ನಗರದ ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯಕ್ಕೆ ದೇಶದ ಪ್ರತಿಷ್ಠಿತ ಎಜುಕೇಶನ್ ವರ್ಲ್ಡ್‌ ಇಂಡಿಯಾ 2025-26ನೇ ವರ್ಷದ ಖಾಸಗಿ ವೈದ್ಯಕೀಯ ಮತ್ತು ಆರೋಗ್ಯ ವಿಜ್ಞಾನ ವಿವಿಗಳಲ್ಲಿ ರಾಜ್ಯದ 3ನೇ ಮತ್ತು ದೇಶದ 8ನೇ ಅತ್ಯುತ್ತಮ ಖಾಸಗಿ ವಿವಿ ಪ್ರಶಸ್ತಿ ನೀಡಿ ಗೌರವಿಸಿದೆ.  

ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಋಐ) ಚೇರಮನ್ ಅರುಣ ಧುಮಾಳ ಈ ಪ್ರಶಸ್ತಿ ಪ್ರಧಾನ ಮಾಡಿದರು.  ಬಿ.ಎಲ್‌.ಡಿ.ಇ ಡೀಮ್ಡ್‌ ವಿವಿ ಪರವಾಗಿ ಫಿಜಿಯಾಲಜಿ ವಿಭಾಗದ ಎಡಿಷನಲ್ ಪ್ರೊಫೆಸರ್ ಡಾ. ಜ್ಯೋತಿ ಖೋದ್ನಾಪುರ ಮತ್ತು ಫಾರ್ಮ್ಯಾಕಾಲಜಿ ವಿಭಾಗದ ಅಸೋಸಿಯೇಟ್ ಪ್ರೊಫೇಸರ್ ಡಾ. ಲೀಲಾ ಹೂಗಾರ ಪ್ರಶಸ್ತಿ ಸ್ವೀಕರಿಸಿದರು.  ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯವಾದಿ ಆದಿತ್ಯ ಸೋಂಧಿ ಉಪಸ್ಥಿತರಿದ್ದರು.   

ದೇಶಾದ್ಯಂತ ಉನ್ನತ ಶಿಕ್ಷಣ ಕ್ಶೇತ್ರದ 2100 ಪರಿಣಿತರು ಮತ್ತು ತಜ್ಞರ ಸಂದರ್ಶನ ನಡೆಸಿ ಈ ಯಾಂರ್ಕಿಂಗ್ ಆಯ್ಕೆ ಮಾಡಲಾಗಿದೆ.  ಅದರಂತೆ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬಿ.ಎಲ್‌.ಡಿ.ಇ ಡೀಮ್ಡ್‌ ವಿವಿ ನೀಡಿರುವ ಕೊಡುಗೆ ಮತ್ತು ಮಾಡಿರುವ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.   

ಈ ಪ್ರಶಸ್ತಿ ಲಭಿಸಿರುವುದಕ್ಕೆ ಬಿ.ಎಲ್‌.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ, ಡೀಮ್ಡ್‌ ವಿವಿ ಕುಲಾಧಿಪತಿ ಬಸನಗೌಡ ಎಂ. ಪಾಟೀಲ, ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಆರ್‌. ಎಸ್‌. ಮುಧೋಳ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ಕುಲಸಚಿವ ಡಾ. ಆರ್‌. ವಿ. ಕುಲಕರ್ಣಿ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ.