ಜೂ.30 ರಿಂದ ಮನೆ ಮನೆ ಭೇಟಿ- ಶುದ್ಧ ಹಾಗೂ ಆರೋಗ್ಯಕರ ಮತದಾರರ ಪಟ್ಟಿ ತಯಾರಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ
Door-to-door visits from June 30 - Preparation of clean and healthy voter list by Deputy Commissione
ಲೋಕದರ್ಶನ ವರದಿ
ಹಾವೇರಿ 04 : ದೋಷರಹಿತ ಶುದ್ಧ ಹಾಗೂ ಆರೋಗ್ಯಕರ ಮತದಾರರ ಪಟ್ಟಿ ತಯಾರಿಕೆ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026ರ ಉದ್ದೇಶವಾಗಿದೆ. ಜೂ.30 ರಿಂದ ಜು.29ರವರೆಗೆ ಬೂತ ಮಟ್ಟದ ಅಧಿಕಾರಿಗಳು(ಬಿಎಲ್ಒ) ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಎಸ್.ಐ.ಆರ್ ಕುರಿತು ಮತದಾರರು ಯಾವುದೇ ಗೊಂದಲಗಳಿಗೆ ಒಳಗಾಗದೇ ಅಗತ್ಯ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೋರ್ಟ್ ಹಾಲ್ನಲ್ಲಿ ಗುರುವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅನರ್ಹರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುವುದು ಹಾಗೂ ಅರ್ಹರು ಮತದಾರರ ಪಟ್ಟಿಯಲ್ಲಿ ಮುಂದುವರೆಯಲಿದ್ದಾರೆ. ಈ ಕಾರ್ಯದಲ್ಲಿ ಬಿ.ಎಲ್.ಒ.ಗಳ ಪಾತ್ರ ಬಹಳ ಮುಖ್ಯವಾಗಿದ್ದು, ಈಗಾಗಲೇ ಬಿಎಲ್ಒಗಳನ್ನು ಮತ್ತು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಹಾಗೂ ತರಬೇತಿ ಸಹ ನೀಡಲಾಗುತ್ತಿದೆ ಎಂದರು.
ಒಬ್ಬ ಮತದಾರರ ಹೆಸರು ಎರಡು ಮತಗಟ್ಟೆಗಳಲ್ಲಿ ಇರಬಾರದು, ವರ್ಗಾವಣೆ ಹಾಗೂ ಮೃತ ಮತದಾರರ ಹೆಸರು ಕುರಿತು ಪರೀಶೀಲನೆ ನಡೆಸಲಾಗುವುದು. 2002ರಲ್ಲಿ ಎಸ್ಐಆರ್ಗೆ ಒಳಪಟ್ಟವರು ಹಾಗೂ 2025ರಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದವರು ಮುಂದುವರೆಯಲಿದ್ದಾರೆ. ತದನಂತರ ಮತದಾರರ ಪಟ್ಟಿಗೆ ಸೇರೆ್ಡಯಾದ ಮತದಾರರ ಕುರಿತು ಪರೀಶೀಲನೆ ಮಾಡಲಾಗುವುದು. 2002ರಲ್ಲಿ ಎಸ್ಐಆರ್ಗೆ ಒಳಪಟ್ಟ ತಂದೆ-ತಾಯಿ, ತಾತ-ಅಜ್ಜಿ ಸೇರಿದಂತೆ ರಕ್ತ ಸಂಬಧಿಗಳ ಆಧಾರದ ಮೇಲೆ ಅಗತ್ಯ ದಾಖಲೆ ಸಲ್ಲಿಸಬೇಕು. ಈ ಬಗ್ಗೆ ಎಲ್ಲ ಮತದಾರರು ಜಾಗೃತಿ ಹೊಂದಬೇಕು ಎಂದು ತಿಳಿಸಿದರು.
ಭಾರತ ಚುನಾವಣಾ ಆಯೋಗದ ಆದೇಶದನ್ವಯ ಭಾರತದ ಸಂವಿಧಾನದ 324 ನೇ ವಿಧಿ ಮತ್ತು ಪ್ರಜಾ ಪ್ರಾತಿನಿಧ್ಯ ಕಾಯ್ದೆ, 1950 (ಖಕಂ 1950) ರನ್ವಯ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಿಗೆ ಚುನಾವಣೆಗಳನ್ನು ನಡೆಸುವ ಮತ್ತು ಮತದಾರರ ಪಟ್ಟಿಗಳ ತಯಾರಿಕೆಯ ಮೇಲ್ವಿಚಾರಣೆ. ನಿರ್ದೇಶನ ನೀಡುವ ಮತ್ತು ನಿಯಂತ್ರಣವನ್ನು ಚುನಾವಣಾ ಆಯೋಗಕ್ಕೆ ವಹಿಸಲಾಗಿದೆ. ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸಲು ಮತದಾರರ ಪಟ್ಟಿಯ ಸಮಗ್ರತೆಯನ್ನು
ಕಾಪಾಡಿಕೊಳ್ಳುವುದು ಅವಶ್ಯವಾಗಿದೆ. ಪ್ರಜಾ ಪ್ರಾತಿನಿಧ್ಯ ಕಾಯ್ದೆ, 1950 ಮತ್ತು ಮತದಾರರ ನೋಂದಣಿ ನಿಯಮಗಳು, 1960 ರ ಅಡಿಯಲ್ಲಿ, ಚುನಾವಣಾ ಸಿಬ್ಬಂದಿ ನೇಮಕಾತಿ, ಮತದಾರರ ಅರ್ಹತೆ, ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ವಿಧಾನ ಮತ್ತು ಕಾರ್ಯವಿಧಾನ ಕುರಿತು ತಿಳಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಅರ್ಹತಾ ದಿನಾಂಕ 01-01-2002 ವನ್ನು ಆಧರಿಸಿ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆಯನ್ನು ಕೈಗೊಳ್ಳಲಾಗಿರುತ್ತದೆ. ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಾಗ, ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ಸೇರೆ್ಡಗೊಳಿಸಿದ ಬಗ್ಗೆ ಮತ್ತು ಅಂತಹ ಅರ್ಹ ನಾಗರಿಕರು ಮತದಾರ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 