ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕಾಗಿ ಖಚರ್ು ಮಾಡಿದ ಹಣವೆಷ್ಟು ಗೊತ್ತೇ...?
ನವದೆಹಲಿ,29: ಪ್ರಧಾನಿ ನರೇಂದ್ರ ಮೋದಿಯವರು 2014 -2018ರ ಅವಧಿಯಲ್ಲಿ ವಿದೇಶ ಪ್ರವಾಸಕ್ಕಾಗಿ ಬರೋಬ್ಬರಿ 2.021 ಕೋಟಿಗಿಂತಲೂ ಹೆಚ್ಚು ಖಚರ್ು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ವಿ.ಕೆ ಸಿಂಗ್, 2014ರಿಂದ 2018ರ ಅವಧಿಯಲ್ಲಿ ಪ್ರಧಾನಿ ಮೋದಿಯವರು ಭೇಟಿ ನೀಡಿದ ರಾಷ್ಟ್ರಗಳ ಬಗ್ಗೆ ಪಟ್ಟಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಯಾವ ರಾಷ್ಟ್ರಗಳಿಂದ ಹೆಚ್ಚಿನ ವಿದೇಶಿ ನೇರ ಬಂಡವಾಳ (ಎಫ್ಡಿಐ) ಹರಿದುಬಂದಿದೆ ಎಂದು ಟಾಪ್ 10 ರಾಷ್ಟ್ರಗಳ ಪಟ್ಟಿಯನ್ನೂ ಮಾಡಿದ್ದಾರೆ.
2014ರಲ್ಲಿ 30,930.5 ಮಿಲಿಯನ್ ಅಮೆರಿಕನ್ ಡಾಲರ್ ಇದ್ದ ವಿದೇಶಿ ನೇರ ಬಂಡವಾಳ 2017ರ ಹೊತ್ತಿಗೆ 43478.27 ಅಮೆರಿಕನ್ ಡಾಲರ್ ಆಗಿ ಏರಿಕೆ ಆಗಿದೆ ಎಂದು ವಿ ಕೆ ಹೇಳಿದ್ದಾರೆ.
ಸಚಿವರು ನೀಡಿದ ಮಾಹಿತಿ ಪ್ರಕಾರ 2009-10 ಮತ್ತು 2013-14 ಯುಪಿಎ- ಅಧಿಕಾರವಧಿಯಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಚಾಟರ್ೆಡ್ ಫ್ಲೈಟ್ (ವೈಯಕ್ತಿಕವಾಗಿ ಜೆಟ್) , ವಿಮಾನಗಳ ದುರಸ್ಥಿ ಮತ್ತು ಹಾಟ್ ಲೈನ್ ಸೌಲಭ್ಯಕ್ಕಾಗಿ 1,346 ಕೋಟಿ ಖಚರ್ಾಗಿತ್ತು. 2019ರಿಂದ 2014ರ ವರೆಗೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರ ವಿದೇಶ ಪ್ರವಾಸ ಮತ್ತು 2014ರ ನಂತರ ಮೋದಿ ವಿದೇಶ ಪ್ರವಾಸದ ಖಚರ್ು ಎಷ್ಟು ಎಂದು ಕೇಳಿದಕ್ಕೆ ಸಿಂಗ್ ರಾಜ್ಯಸಭೆಯಲ್ಲಿ ಉತ್ತರಿಸಿದ್ದಾರೆ.
ಖಚರ್ು ವೆಚ್ಚದ ಮಾಹಿತಿ ಪ್ರಕಾರ ಪ್ರಧಾನಿಯವರ ವಿಮಾನದ ನಿರ್ವಹಣೆಗಾಗಿ ಒಟ್ಟು 1,583.18 ಕೋಟಿ ಖಚರ್ು ಮಾಡಲಾಗಿದೆ. ಜೂನ್ 15, 2014ರಿಂದ ಡಿಸೆಂಬರ್ 3, 2018ರ ವರೆಗೆ ಚಾಟರ್ೆಡ್ ಫ್ಲೈಟ್ ಗಳಿಗಾಗಿ 429.25 ಕೋಟಿ ಖಚರ್ಾಗಿದೆ. ಹಾಟ್ ಲೈನ್ಗಾಗಿ ಖಚರ್ು ಆಗಿದ್ದು 9.11 ಕೋಟಿ. ಮೋದಿಯವರು ಮೇ 2014ರಲ್ಲಿ ಪ್ರಧಾನಿಯಾದ ನಂತರ 48 ವಿದೇಶ ಪ್ರಯಾಣಗಳನ್ನು ಕೈಗೊಂಡಿದ್ದು 55 ದೇಶಗಳಿಗೆ ಭೇಟಿ ನೀಡಿದ್ದಾರೆ. ಕೆಲವೊಂದು ದೇಶಗಳಿಗೆ ಅವರು ಒಂದಕ್ಕಿಂತ ಹೆಚ್ಚು ಬಾರಿ ಪ್ರಯಾಣ ಕೈಗೊಂಡಿದ್ದಾರೆ .
ವಿ.ಕೆ. ಸಿಂಗ್ ಅವರು ನೀಡಿದ ಮಾಹಿತಿಯಲ್ಲಿ ಮೋದಿಯವರು 2017-18 ಮತ್ತು 2018-19ರಲ್ಲಿ ವಿದೇಶ ಪ್ರಯಾಣ ಕೈಗೊಂಡಾಗ ಹಾಟ್ ಲೈನ್ ಸೌಲಭ್ಯಕ್ಕಾಗಿ ಖಚರ್ು ಮಾಡಿದ ಹಣ ಇದರಲ್ಲಿ ಲೆಕ್ಕ ಹಾಕಿಲ್ಲ ಎಂದಿದ್ದಾರೆ. 2014-2015ರಲ್ಲಿ ವಿದೇಶಕ್ಕೆ ಚಾಟರ್ೆಡ್ ಫ್ಲೈಟ್ ಪ್ರಯಾಣಕ್ಕಾಗಿ ಖಚರ್ಾದ ಹಣ 93.76 ಕೋಟಿ. ಏತನ್ಮಧ್ಯೆ 2015 -16ರಲ್ಲಿ ಖಚರ್ಾದ ಹಣ 117.89 ಕೋಟಿ, 2016 - 17ರ ಅವಧಿಯಲ್ಲಿ ಅದು 76.27 ಕೋಟಿ ಮತ್ತು 2017-18ರಲ್ಲಿ 99.32 ಕೋಟಿ ಆಗಿದೆ.
2018-19 ಡಿಸೆಂಬರ್ 3ರವರೆಗೆ ವಿದೇಶ ಪ್ರಯಾಣಕ್ಕಾಗಿ ಚಾಟರ್ೆಡ್ ಫ್ಲೈಟ್ ಖಚರ್ು 42.01 ಕೋಟಿಯಾಗಿದೆ. ಮೋದಿ ಭೇಟಿ ನೀಡಿದ ವಿದೇಶ ರಾಷ್ಟ್ರಗಳಿಂದ ಎಷ್ಟು ಹೂಡಿಕೆ ಲಭಿಸಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂಗ್, 2014- 2018 ಜೂನ್ ಅವಧಿಯಲ್ಲಿ 136,077.75 ಮಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ನೇರ ಬಂಡವಾಳ ಹರಿದುಬಂದಿದೆ. 2011 - 2014ರ ಅವಧಿಯಲ್ಲಿ ವಿದೇಶಿ ನೇರ ಬಂಡವಾಳ 81,843.71 ಮಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 