ವೀರಶೈವ ಲಿಂಗಾಯತ ಸಮಾಜದ ಮಕ್ಕಳಿಗೆ ಲೇಖನ ಸಾಮಗ್ರಿಗಳ, ವಸ್ತ್ರ ಧನ ಸಹಾಯ ವಿತರಣೆ
Distribution of stationery, clothing and financial assistance to children of Veerashaiva Lingayat co
ರಾಣೆಬೆನ್ನೂರು 14 : ವೀರಶೈವ ಲಿಂಗಾಯತ ಧರ್ಮಕ್ಕೆ ವೇದ ಇತಿಹಾಸ ಕಾರ್ಯಗಳಿಂದಲೂ ತನ್ನದೇ ಆದ ತತ್ವ ಸಿದ್ಧಾಂತದ ಪರಂಪರೆಯದೆ. ವ್ಯಕ್ತಿ ಆಧಾರಿತ ಅವಲಂಬಿಸದೆ ಧರ್ಮದ ಆಧಾರಿತ ಸಮಾಜವನ್ನು ಕಟ್ಟಲು ಎಲ್ಲರೂ ಮುಂದಾಗಬೇಕಾದ ಇಂದಿನ ಅಗತ್ಯವಿದೆ ಎಂದು ಜಗದ್ಗುರು ಶ್ರೀ ಫಕ್ಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಕರೆ ನೀಡಿದರು. ಅವರು ರವಿವಾರ ಇಲ್ಲಿನ ದೊಡ್ಡಪೇಟೆ ಪಂಚಾಚಾರ್ಯ ಗುರು ಕಾರುಣ್ಯ ಮಂಗಲ ಮಂದಿರದಲ್ಲಿ ವೀರಶೈವ ಲಿಂಗಾಯತ ಹಿತರಕ್ಷಣಾ ವೇದಿಕೆ, ವೀರಶೈವ ಲಿಂಗಾಯತ ನೌಕರರ ವೇದಿಕೆಯು,
ಆಯೋಜಿಸಿದ್ದ, ಸಮಾಜದ ಆರ್ಥಿಕ ಹಿಂದುಳಿದ 40 ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ, ಸಮವಸ್ತ್ರ- ಹಾಗೂ ಧನಸಹಾಯ ವಿತರಣಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ, ಮತ್ತು ಧರ್ಮದ ತತ್ವ ಸಿದ್ಧಾಂತದ ಅಡಿಯಲಿ ನಮ್ಮ ಪೂರ್ವಜ ಗುರುಗಳು ಮತ್ತು ಸಮಾಜದ ಅನುಯಾಯಿಗಳು ಬದುಕಿಬಾಳಿದ್ದಾರೆ. ಇಂದಿನ ಮಕ್ಕಳಲ್ಲಿ ಆ ಪರಂಪರೆ ಉಳಿದಿಲ್ಲ ಪರಿಣಾಮ ಸಮಾಜ ಒಂದುಗೂಡಿಸಲು ಹೊರಟಿದಷ್ಟು ಮತ್ತಷ್ಟು ಹೊಡೆಯುತ್ತಲೇ ಸಾಗಿದೆ ಎಂದು ಶ್ರೀಗಳು ವಿಷಾದಿಸಿದರು.
ವೀರಶೈವ ಲಿಂಗಾಯತ ಸಮಾಜವನ್ನು ಕಟ್ಟಲು ಅಂದಿನ ದೂರ ದೃಷ್ಟಿಯುಳ್ಳ ಲಿಂಗೈಕ್ಯ ಹಾನಗಲ್ಲ ಕುಮಾರ ಶಿವಯೋಗಿಗಳು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ, ಅವರ ಆಸೆ ಎಲ್ಲರೂ ಒಂದೇ ಅಡಿಯಲ್ಲಿ ಇರಬೇಕು ಎನ್ನುವುದಾಗಿತ್ತು ಆದರೆ ಇಂದು ಆಗುತ್ತಿರುವುದೇನು?. ಎಂದು ಪ್ರಶ್ನಿಸಿದರು. ವೀರಶೈವ ಲಿಂಗಾಯತ ವ್ಯಕ್ತಿ ಪ್ರಧಾನ ಧರ್ಮವಲ್ಲ. ತತ್ವ ಪ್ರಧಾನವಾಗಿದೆ. ಅಷ್ಟಾವರಣ, ಪಂಚಾಚಾರ, ಷಟ್ ಸ್ಥಳ. ಈ ಮೂರು ತತ್ವಗಳು ಗಮನದಲ್ಲಿರಿಸಿಕೊಂಡು ಸಮಾಜ ಕಟ್ಟಬೇಕು. ಎಂದರು.
ಸಮಾಜದ ಜಾಗೃತಿ ಕೇವಲ ವೇದಿಕೆಗಳಿಗೆ ಮಾತ್ರ ಸೀಮಿತವಾಗಬಾರದು, ಅಂತರಂಗದ ಜಾಗೃತಿ ಯಾಗಿರಬೇಕು. ಮನೆ ಮನಗಳಲ್ಲಿ ಸಂಘಟನೆಯಾಗಬೇಕು ಮತ್ತೊಂದು ಸಮಾಜವು ತುಳಿದು ಬೆಳೆಯುವುದು ಬೇಡ. ತಿಳಿದು ಬೆಳೆಯುವ ಸಿದ್ಧಾಂತವನ್ನು ಅಳವಡಿಸಿಕೊಳ್ಳಬೇಕು ಎಂದರು. ಸಮಾಜ ಕಟ್ಟುವ ನಿಟ್ಟಿನಲ್ಲಿ ಅಂದು1904 ರಲ್ಲಿ ಅಂದಿನ ಪುಣ್ಯ ಪುರುಷರು ಮಾಡಿದ ಅಧ್ಯಕ್ಷೀಯ ಪೂರ್ಣ ಮಾರ್ಗದರ್ಶನದ ಭಾಷಣದ ಪ್ರತಿಗಳು ಇಂದಿಗೂ ಮಾರಾಟಕ್ಕಿವೆ ಅವುಗಳ ಅಧ್ಯಯನ ನಡೆಯಬೇಕಾಗಿದೆ ಅಂದಾಗ ಮಾತ್ರ ಸಮಾಜ ಯಾವ ನಿಟ್ಟಿನಲ್ಲಿ ಸಾಗಬೇಕಾಗಿತ್ತು?. ಸಾಗಿದೆಯೇ? ಎನ್ನುವ ಚಿಂತನೆ ಎಲ್ಲರಲ್ಲಿ ಮೂಡಲಿದೆ ಎಂದರು.
ಮಠ ಪೀಠಗಳು ಇತಿಹಾಸದಲ್ಲಿನ ತಮ್ಮ ಕರ್ತವ್ಯಗಳು ಏನು ಸಮಾಜ ಸಂಘಟನೆ ಹೇಗೆ? ಎನ್ನುವುದನ್ನು ಮರೆತು ತಮಗೆ ಬೇಕಾದ ಹಾಗೆ ಅನುಕೂಲ ಸಿಂಧು ವ್ಯವಸ್ಥೆಯಲ್ಲಿ ಸಾಗುತ್ತಿರುವುದು ಈ ನಾಡಿನ ಬಹುದೊಡ್ಡ ದುರಂತದ ಸಂಗತಿ ಎಂದು ಕಿಡಿಕಾರಿದರು. ನೇತೃತ್ವದಲ್ಲಿದ್ದ ಆವರಗೊಳ್ಳಪುರ ವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳವರು, ಇದ್ದವರು ಇಲ್ಲದವರಿಗೆ ಸಹಾಯ ಹಸ್ತ ನೀಡುವುದೇ ನಿಜವಾದ ಮಾನವೀಯ ಧರ್ಮವಾಗಿದೆ.
ಮಾನವೀಯ ನೆಲಗಟ್ಟಿನಲ್ಲಿ ನಮ್ಮ ಬಡ ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕೆಲಸ ನಡೆಯಬೇಕಾಗಿದೆ ಎಂದರು. ಪ್ರತಿಭಾ ಪುರಸ್ಕಾರ ಯೋಜನೆಗೆ 25000 ರೂಪಾಯಿಗಳ ದೇಣಿಗೆ ಘೋಷಿಸಿದ ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರು ವೀರಶೈವ ಲಿಂಗಾಯತರು ಅಖಿಲ ಭಾರತ ಮಟ್ಟದಲ್ಲಿ ಒಂದೇಯಾಗಬೇಕು. ಭವಿಷ್ಯದ ಮಕ್ಕಳಿಗೆ ನಮ್ಮ ಸಂಸ್ಕೃತಿ ವಿಚಾರ ತತ್ವ ತಿಳಿಸುವ ಮಹತ್ವದ ಕೆಲಸ ಎಲ್ಲರೂ ಸೇರಿ ಮಾಡಬೇಕಾಗಿದೆ ಎಂದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 