ರಾಜ್ಯದ 19 ಜಿಲ್ಲೆಗಳ ವಿದ್ಯುತ್ ಸರಬರಾಜನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ

ರಾಜ್ಯದ 19 ಜಿಲ್ಲೆಗಳ ವಿದ್ಯುತ್ ಸರಬರಾಜನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ Oppose the privatization of electricity supply in 19 districts of the state

ರಾಯಬಾಗ 22: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದವರು ರಾಜ್ಯದ 19 ಜಿಲ್ಲೆಗಳ ವಿದ್ಯುತ್ ಸರಬರಾಜನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಪ್ರೋ.ಎಂ.ಡಿ.ನಂಜುಡಸ್ವಾಮಿ ರೈತ ಸಂಘ ತಾಲೂಕಾ ಘಟಕ ಹಾಗೂ ಪದಾಧಿಕಾರಿಗಳು ತಹಶೀಲದಾರ ಮಹಾದೇವ ಸನ್ಮೂರಿಯವರಿಗೆ ಮನವಿ ಪತ್ರ ಸಲ್ಲಿಸಿದರು.ಟಾಟಾ ಪವರ ಕಂಪನಿ ಲಿ., ಇವರು ಕೆ.ಇ.ಆರಿ​‍್ಸ ಗೆ ಅರ್ಜಿ ಸಲ್ಲಿಸಿ ರಾಜ್ಯದ 5 ಹೆಸ್ಕಾಂಗಳ 19 ಜಿಲ್ಲೆಗಳಲ್ಲಿ ಸಮಾನಾಂತರ ವಿದ್ಯುತ ವಿತರಣಾ ಪರವಾಣಿಗೆ ಕೇಳಿದೆ.

60 ವರ್ಷಗಳಿಂದ ಗ್ರಾಹಕರಿಂದ, ರೈತರಿಂದ, ಕೈಗಾರಿಕೆಗಳಿಂದ, ತೆರಿಗೆಯಲ್ಲಿ ಲಕ್ಷಾಂತರ ಕೋಟಿ ಹಣ ಸಂಗ್ರಹಿಸಿ ಸ್ಥಾಪಿಸಿದ ಸಂಸ್ಥೆಗಳನ್ನು ಮಾರಲು ಹೊರಟಿರುವುದು ತುಂಬಾ ಅನ್ಯಾಯ. ಖಾಸಗೀಕರಣದಿಂದಾಗುವ ತೊಂದರೆಗಳನ್ನು ಜನ ಸಾಮಾನ್ಯರು, ರೈತರು, ಕೈಗಾರಿಕೆಗಳು ಇಷ್ಟೇ ಅಲ್ಲದೇ ಇಂದೇ ದುಡಿದು ಇಂದೇ ತಿನ್ನುವ ಬಡವರಿಗೂ ಹೊರೆಯಾಗುತ್ತದೆ. ಇವರೆಲ್ಲರೂ ಭಾರಿ ನಷ್ಟ ಅನುಭವಿಸಬೇಕಾಗುತ್ತದೆ. 

ಜಿಲ್ಲೆಯಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಕೃಷಿ ಪಂಪಸೆಟ್ಗಳು, ಭಾಗ್ಯಜ್ಯೋತಿ, ಕಟೀರ ಜ್ಯೋತಿ ಯೋಜನೆಗಳ ಫಲಾನುಭವಿಗಳು ಉಚಿತ ವಿದ್ಯುತ್ ಬಳಸಿ ಹೇಗೋ ಬದುಕಿದ್ದಾರೆ. ಹೀಗಾಗಿ ಖಾಸಗಿ ಕಂಪನಿಗಳ ದೌರ್ಜನ್ಯ ಮತ್ತು ದರ​‍್ಪಕಕೆ ರೈತರು, ಬಡವರೇ ಬಲಿಯಾಗಬೇಕಾಗುತ್ತದೆ.  ರೈತರ ಪಂಪಸೆಟ್ಗಳ ಉಚಿತ ವಿದ್ಯುತ್ ಸರಬರಾಜು ನಿಲ್ಲಿಸಿದರೆ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗದೆ, ಪ್ರಕೃತಿ ವಿಕೋಪಗಳ ಜೊತೆ ಹೋರಾಡಿ ತಮ್ಮ ಜೀವನೋಪಾಯಕ್ಕೆ ಬೆಳೆದ ಬೆಳೆಯನ್ನು ಸಹ ಮಾರಾಟ ಮಾಡಿ ವಿದ್ಯುತ ಬಿಲ್ಲ ಕಟ್ಟಿದರೂ ತೀರುವುದಿಲ್ಲ. ವರ್ಷದಿಂದ ವರ್ಷಕ್ಕೆ ರಾಸಾಯನಿಕ ಗೊಬ್ಬರ, ಕೃಷಿ ಕಾರ್ಮಿಕರ ಕೂಲಿ ವೆಚ್ಚ ಹೆಚ್ಚುತ್ತ ಹೊರಟಿದೆ.