ಶಾಸಕ ಶಿವಣ್ಣವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ

ಶಾಸಕ ಶಿವಣ್ಣವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ  Demand to give ministerial position to MLA Shivanna

ಲೋಕದರ್ಶನ ವರದಿ 

ಶಿಗ್ಗಾವಿ 07 : ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ ಅವರಿಗೆ ಸಚಿವ ಸ್ಥಾನ ನೀಡುವಂತೆ ತಾಲೂಕಾ ಕುರುಬ ಸಮಾಜದ ಅಧ್ಯಕ್ಷ ಚಂದ್ರಶೇಖರ ಮಾಯಣ್ಣವರ ಒತ್ತಾಯಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ಕುರುಬ ಸಮಾಜದ ಹಿರಿಯ ನಾಯಕರಾಗಿ ನಾಲ್ಕು ಬಾರಿ ಶಾಸಕರಾಗಿ ಈ ಹಿಂದೆ ಸಚಿವರಾದ ಅನುಭವ ಬಸವರಾಜ ಶಿವಣ್ಣವರ ಅವರಿಗೆ ಇದ್ದು ಅಹಿಂದ ಸಮಾಜವನ್ನು ಗುರಿತಿಸಲು ಇದೊಂದು ಅವಕಾಶ ಇದೆ ಆದ್ದರಿಂದ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಜಿಲ್ಲೆಯ ಕುರುಬ ಸಮಾಜ ಕಾಂಗ್ರೇಸ್ ಪಕ್ಷದ ಹೈಕಮಾಂಡಗೆ ಒತ್ತಾಯಿಸಿದ್ದಾರೆ.