ರುದ್ರ​‍್ಪ ಲಮಾಣಿ ರವರಿಗೆ ಉನ್ನತ ಖಾತೆ ನೀಡಲು ಒತ್ತಾಯ

ರುದ್ರ​‍್ಪ ಲಮಾಣಿ ರವರಿಗೆ ಉನ್ನತ ಖಾತೆ ನೀಡಲು ಒತ್ತಾಯ Demand to give Rudrapa Lamani a higher portfolio

ದೇವರಹಿಪ್ಪರಗಿ 08 : ಹಾವೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಏಕೈಕ ಶಾಸಕರು ಹಾಗೂ ಲಂಬಾಣಿ (ಬಂಜಾರ) ಸಮಾಜದ ಮತ್ತು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಹಿರಿಯ ನಾಯಕರು ಮತ್ತು ವಿಧಾನಸಭೆ ಉಪ ಸಭಾಪತಿಗಳಾದ ರುದ್ರ​‍್ಪ ಲಮಾಣಿ ರವರಿಗೆ ಸಮಾಜದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.  ಅವರಿಗೆ  ಕ್ಯಾಬಿನೇಟ್ ಸಚೀವ ಸ್ಥಾನವನ್ನು   ನೀಡುವದರೊಂದಿಗೆ ಉನ್ನತ ಖಾತೆ ಸಚೀವಸ್ಥಾನ ನೀಡಿ ರಾಜ್ಯದ ಸರ್ವತೋನ್ಮುಖ ಅಭಿವೃದ್ಧಿಗೆ ಕಾಂಗ್ರೇಸ್ ಪಕ್ಷದ ಹೈಕಮಾಂಡ ಸಹಕರಿಸಬೇಕೆಂದು ಕರ್ನಾಟಕ ಸರ್ಕಾರದ  ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ದೇವರಹಿಪ್ಪರಗಿ ತಾಲೂಕು ಸಮಿತಿ ಸದಸ್ಯರು ಹಾಗೂ ಹೂವಿನ ಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರು ಕುಮಾರ ರಾಠೋಡ ಅವರು ಒತ್ತಾಯಿಸಿದ್ದಾರೆ.