ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿ, ಗಾಂಜಾ ದಂಧೆ, ನಕಲಿ ಗೋರಕ್ಷಕರ ಹಾವಳಿ ಹಾಗೂ ರೌಡಿಸಂ ಅನ್ನು ಮಟ್ಟಹಾಕಿ, ಸಮಾಜಘಾತುಕ ಶಕ್ತಿಗಳನ್ನು ಗಡಿಪಾರಿಗೆ ಆಗ್ರಹ

ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿ, ಗಾಂಜಾ ದಂಧೆ, ನಕಲಿ ಗೋರಕ್ಷಕರ ಹಾವಳಿ ಹಾಗೂ ರೌಡಿಸಂ ಅನ್ನು ಮಟ್ಟಹಾಕಿ, ಸಮಾಜಘಾತುಕ ಶಕ್ತಿಗಳನ್ನು ಗಡಿಪಾರಿಗೆ ಆಗ್ರಹ Demand to curb the moral policing, ganja racket, fake cow vigilantes and rowdiness in the state and

ಕೊಪ್ಪಳ  12: ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿ, ಗಾಂಜಾ ದಂಧೆ, ನಕಲಿ ಗೋರಕ್ಷಕರ ಹಾವಳಿ ಹಾಗೂ ರೌಡಿಸಂ ಅನ್ನು ಮಟ್ಟಹಾಕಿ, ಸಮಾಜಘಾತುಕ ಶಕ್ತಿಗಳನ್ನು ಗಡಿಪಾರು ಮಾಡುವ ಮೂಲಕ ನಾಗರಿಕರು ಮತ್ತು ರೈತರು ನೆಮ್ಮದಿಯಿಂದ ಜೀವಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ ಅವರ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಗುರುವಾರ ಮನವಿ ಸಲ್ಲಿಸಲಾಯಿತು.   ಮನವಿಯಲ್ಲಿ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಈ ಪತ್ರದ ಮೂಲಕ ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ನಾಗರಿಕರ ಮುಕ್ತ ಜೀವನಕ್ಕೆ ಧಕ್ಕೆಯಾಗುತ್ತಿರುವ ಕೆಲವು ಗಂಭೀರ ವಿದ್ಯಮಾನಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ.

ಕರ್ನಾಟಕದಲ್ಲಿ ಸೌಹಾರ್ದಯುತ ಮತ್ತು ಪಾರದರ್ಶಕ ಆಡಳಿತವನ್ನು ನೀರೀಕ್ಷಿಸುತ್ತಿರುವ ಜನತೆಗೆ ಪ್ರಸಕ್ತ ವಿದ್ಯಮಾನಗಳು ತೀವ್ರ ಆತಂಕ ಮೂಡಿಸಿವೆ.  ಕೆಲವು ತಿಂಗಳುಗಳ ಹಿಂದೆ ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಗೋ ಸಾಗಾಟದ ನೆಪದಲ್ಲಿ ಪೊಲೀಸರ ಸಮ್ಮುಖದಲ್ಲೇ ಮಾರಕಾಸ್ತ್ರಗಳನ್ನು ಪ್ರದರ್ಶಿಸುತ್ತಾ, ವಾಹನಗಳನ್ನು ತಡೆದು ದಾಂಧಲೆ ನಡೆಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಗುಂಪು ಹಲ್ಲೆಗಳು ಹಾಗೂ "ನೈತಿಕ ಪೊಲೀಸ್ ಗಿರಿ"  ಘಟನೆಗಳು ಇಡೀ ರಾಜ್ಯಕ್ಕೆ ಕೆಟ್ಟ ಮಾದರಿಯಾಗುತ್ತಿವೆ. ಪೊಲೀಸರ ಭಯವಿಲ್ಲದೆ ಕಾನೂನನ್ನು ಕೈಗೆತ್ತಿಕೊಳ್ಳುವ ಇಂತಹ ದುಷ್ಕರ್ಮಿಗಳು, ವ್ಯವಸ್ಥಿತ ರೌಡಿಗಳಾಗಿ ಪರಿವರ್ತನೆಗೊಂಡು ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿದ್ದಾರೆ.ಇದರೊಂದಿಗೆ, ರಾಜ್ಯಾದಾದ್ಯಂತ ಗಾಂಜಾ ಮಾರಾಟ ಮತ್ತು ಸೇವನೆ ಅವ್ಯಾಹತವಾಗಿ ನಡೆಯುತ್ತಿದ್ದು, ಯುವ ಪೀಳಿಗೆ ಹಾದಿತಪ್ಪುತ್ತಿದೆ.