ಬ್ಯಾಡಗಿಯಲ್ಲಿ ವಾಲ್ಮೀಕಿ ವೃತ್ತ ನಾಮಕರಣಕ್ಕೆ ಆಗ್ರಹ

ಬ್ಯಾಡಗಿಯಲ್ಲಿ ವಾಲ್ಮೀಕಿ ವೃತ್ತ ನಾಮಕರಣಕ್ಕೆ ಆಗ್ರಹ Demand for naming Valmiki Circle in Byadgi

ಬ್ಯಾಡಗಿ 06 : ರಾಮಾಯಣ ಮಹಾಕಾವ್ಯದ ಕರ್ತೃ ಆದಿಕವಿ ಮಹರ್ಷಿ ವಾಲ್ಮೀಕಿಯವರ ಸ್ಮರಣಾರ್ಥ ಹಾಗೂ ಸಮಾಜಕ್ಕೆ ಅವರ ಸಂದೇಶಗಳನ್ನು ಪಸರಿಸಲು ವೃತ್ತಗಳ ನಿರ್ಮಾಣ ಅಗತ್ಯವಿದ್ದು,ಪಟ್ಟಣದ ಹಳೆ ಪುರಸಭೆಯ ಕಾರ್ಯಾಲಯದ ಎದುರು ಇರುವ ವೃತ್ತಕ್ಕೆ ಮಹರ್ಷಿ  ವಾಲ್ಮೀಕಿ ವೃತ್ತವೆಂದು ನಾಮಕರಣ ಮಾಡುವಂತೆ ಆಗ್ರಹಿಸಿ ತಾಲೂಕಾ ವಾಲ್ಮೀಕಿ ಸಂಘದ ವತಿಯಿಂದ ತಾಲೂಕಾ ಪದಾಧಿಕಾರಿಗಳು ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು. ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಬಸವರಾಜ ಶಿವಣ್ಣನವರ ವಾಲ್ಮೀಕಿಯವರ ಸಂಪೂರ್ಣ ಜೀವನವು ದುಷ್ಟ ಕಾರ್ಯಗಳನ್ನು ತ್ಯಜಿಸಲು, ಒಳ್ಳೆಯ ಕಾರ್ಯಗಳು ಹಾಗೂ ಭಕ್ತಿಯ ಮಾರ್ಗವನ್ನು ಅನುಸರಿಸಲು ದಾರಿ ಮಾಡಿಕೊಡುತ್ತದೆ. ಈ ಮಹಾನ್ ವ್ಯಕ್ತಿಯ ಸಂದೇಶವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕಾದರೆ ಇಂತಹ ಮಹಾನ್ ವ್ಯಕ್ತಿಗಳ ವೃತ್ತಗಳು, ಕಂಚಿನ ಪುತ್ಥಳಿಗಳಾಗಬೇಕಿದೆ.  ತಮ್ಮ ಸಂಘಟನೆಯು  ನೀಡಿರುವ ಮನವಿಯನ್ನು ಪರೀಶೀಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಸಮಾಜ ಧುರೀಣರಾದ ಹೊನ್ನೂರ​‍್ಪ ಕಾಡಸಾಲಿ, ರಾಮಣ್ಣ ಕೋಡಿಹಳ್ಳಿ, ಹನುಮಂತಪ್ಪ ಮ್ಯಾಗೇರಿ, ರಮೇಶ ಕೋಟಿಯವರ,  ಸುರೇಶ ಯಮನಕ್ಕನವರ, ಕುಮಾರ ಮ್ಯಾಗೇರಿ, ಸಿ.ಎಚ್‌.ಮೋಹನಕುಮಾರ, ಪರಶುರಾಮ ಓಲೇಕಾರ ಸೇರಿದಂತೆ ಇತರರಿದ್ದರು.