ರಾಜಾಜಿ ನಗರದ ಗಜಾನನ ತರುಣ ಮಂಡಳಿಯಲ್ಲಿ ದಾಸವಾಣಿ
Dasavani at Gajanan Taruna Mandala, Rajajinagar
ಲೋಕದರ್ಶನ ವರದಿ
ವಿಜಯಪುರ 17 : ರಾಜಾಜಿ ನಗರ ಗಜಾನನ ತರುಣ ಮಂಡಳಿಯಿಂದ ಆಂಜನೇಯ ದೇವಸ್ಥಾನದಲ್ಲಿ ರಾತ್ರಿ ಸುಮಾರು ಹೊತ್ತಿನವರೆಗೆ ಹರಿಣಿ ಸಂದೀಪ ಅರ್ಜುಣಗಿ ಅವರಿಂದ ದಾಸವಾಣಿ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ಜರುಗಿತು. ಈ ದಾಸವಾಣಿ ಕಾರ್ಯಕ್ರಮಕ್ಕೆ ಹಾರ್ಮೋನಿಯಂ ಬಿ.ಎಂ.ಪತ್ತಾರ, ತಬಲಾ ಸಾಥ ಜಗನ್ನಾಥ ಅಳ್ಳಗಿ ಹಾಗೂ ಶ್ರೀನಾಥ ಪತ್ತಾರ ತಾಳ ವಾದ್ಯ ಮಾಡಿದ್ದು ಒಂದು ವಿಶೇಷವಾಗಿತ್ತು.
ಇದಕ್ಕೂ ಪೂರ್ವದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ಚಂದ್ರು ಚೌದರಿ, ಮಲ್ಲು ತೊರವಿ ಹಾಗೂ ಪ್ರಸನ್ನ ಜಾಬನ್ನವರ ಅವರನ್ನು ಗಜಾನನ ತರುಣ ಮಂಡಳಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗುರುರಾಜ ಪೂಜಾರಿ, ಗುರುರಾಜ ಹಜೇರಿ, ಶರಣು ಮಾದನಶೆಟ್ಟಿ, ಗೋಪಾಲ ಹೊರ್ತಿ, ವೇಣು ಜೋಶಿ, ಮಂಜುನಾಥ ಮಲ್ಲಾಡಿ, ಶ್ರೀನಾಥ ಪತ್ತಾರ, ಉಮೇಶ ತೇಲಿ, ಮಹಾದೇವ ಕೋಲಕಾರ, ಸುಭಾಷ ಕನ್ನೂರ, ಮಂಜು ಬಿರಾದಾರ, ಸಿದ್ದು ಚವ್ಹಾಣ, ಸಂತೋಷ ಕುಲಕರ್ಣಿ ಹಾಗೂ ಬಡಾವಣೆಯ ಗಣ್ಯರು ಭಾವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 