ಚಿಕ್ಕೋಡಿ

ಮಕ್ಕಳಲ್ಲಿ ಸಂಸ್ಕಾರ ಗುಣ ಬೆಳೆಸಿ

ಮಕ್ಕಳಲ್ಲಿ ಸಂಸ್ಕಾರ ಗುಣ ಬೆಳೆಸಿ

ಮಾಂಜರಿ  13: ಮಕ್ಕಳಲ್ಲಿ ಸಂಸ್ಕಾರ ಗುಣ ಬೆಳೆಸಿ ದೇಶವನ್ನ ಧಾರ್ಮಿಕ ಸಂಸ್ಕೃತಿಯ ನೆಲೆಗಟ್ಟಿನ ಮೇಲೆ ಕಟ್ಟಲಾಗಿದೆ ಹಾಗಾಗಿ ಇಂದಿನ ಯುವಕರು ಸಂಸ್ಕಾರವಂತರಾಗಿ ಬೆಳೆದು ದೇಶದ ಪರಂಪರೆಯನ್ನು ಮುಂದು ನಡೆಸಿಕೊಂಡು ಹೋಗಬೇಕೆಂದು ಜಮಖಂಡಿಯ ಸಹಜಾನಂದ ಅವಧೂತರು   ಹೇಳಿದರು 

      ಅವರು ಸಮೀಪದ  ಅಂಕಲಿ ಗ್ರಾಮದಲ್ಲಿ  ಗುರುವಾರ ರಂದು  ಅಯೋಜಿಸಲದ    ರುದ್ರಾವಧೂತ ಮಠದ ವಾರ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಅವರು  ಸಂಸ್ಕಾರದ ಕೊರತೆಯಿಂದಾಗಿ ಯುವಕರು ದಾರಿತಪ್ಪಿ, ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ ಕಾರಣ ಧಾರ್ಮಿಕ ಚಿಂತನೆಗಳು ಪದೇ ಪದೇ ಜರುಗುವುದರಿಂದ ಯುವಕರನ್ನ  ಸನ್ಮಾರ್ಗದಲ್ಲಿ ಕೊಂಡೊಯ್ಯಲು ಸಾಧ್ಯ ಎಂದು ಹೇಳಿದರು 

          ಜಮಖಂಡಿಯ ರುದ್ರಾವಧೂತ ಮಠದ ಶ್ರೀ ಕೃಷ್ಣಾನಂದ ಅವಧೂತರು ಮಾತನಾಡುತಾ ಗುರುವಿನ ಗುಲಾಮನಾಗುವ ತನಕ ದೊರೆಯದನ ಮುಕುತಿ ಗುರುಸೇವ ಮಾಡಿ ಜೀವನ ಪಾವನ ಮಾಡಿಕೊಳ್ಳಬೇಕೆಂದು ಹೇಳಿದರು ಕಾರ್ಯಕ್ರಮದಲ್ಲಿ ಈರ​‍್ಪ ಮಾಳಿಗೆ ತುಕಾರಾಂ ಕುರಣೆ.    ಅನಿಲ್ ಬಡಿಗೇರ್‌. ಬಾಳು ಕುರೆ.ಚಂದ್ರಕಾಂತ್ ಕುರೆ.ಅಮರ್ ನಡುಮನಿ.  ಪಿಂಟು ಮಾಳಗೆ. ರಾಕೇಶ ತಳಕೇರಿ.  ಗಜಾನನ ವಗ್ಗೆ.ಸುಕುಮಾರ ಚಲವಾದಿ. ವಿಶ್ವನಾಥ ಘಟ್ಟೆ . ಸೇರಿದಂತೆ ಅಂಕಲಿಯ   ರುದ್ರಾವಧೂತ ಮಠದ ಸರ್ವ ಭಕ್ತರು  ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು 


ಸುದ್ದಿ ಓದಿ