ಸೃಷ್ಟಿಕ್ರಿಯೆ ಎನ್ನುವುದು ಕಾವ್ಯದ ಮೂಲಗುಣ
Creativity is the essence of poetry
ಲೋಕದರ್ಶನ ವರದಿ
ಹಾವೇರಿ 13 : ಸೃಷ್ಟಿಕ್ರಿಯೆ ಎನ್ನುವುದು ಕಾವ್ಯದ ಮೂಲಗುಣ. ಸಿಟ್ಟು, ಆಕ್ರೋಶ, ನೋವು, ನಲಿವು ಉಂಟಾದಾಗ ಕಾವ್ಯ ಹುಟ್ಟಿಕೊಳ್ಳುತ್ತದೆ. ಲೋಕದ ಸಂಕಟ ತಲ್ಲಣ ಅನುಭವಗಳನ್ನು ಕಾವ್ಯಮಯವಾಗಿಸುವನೇ ಕವಿ ಎಂದು ಸಿಗ್ಗಾವಿಯ ಹಿರಿಯ ಸಾಹಿತಿ ಶಕುಂತಲಾ ಹೇಳಿದರು. ರಾಣೆಬೆನ್ನೂರು ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾವೇರಿ ಜಿಲ್ಲಾ ಚಕೋರ ಸಾಹಿತ್ಯ ವಿಚಾರ ವೇದಿಕೆಯು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದಲ್ಲಿ ಏರಿ್ಡಸಿದ್ದ ಜಿಲ್ಲಾಮಟ್ಟದ ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕವಿ ಅಂತರಂಗದಲ್ಲಿ ತನ್ನೊಳಗೆ ತಾನೆ ಜಗಳ ಮಾಡಿಕೊಂಡರೆ ಕವಿತೆ ಹುಟ್ಟುತ್ತದೆ, ಸುಮ್ಮನೆ ಬರೆದ ಸಾಲುಗಳು ಕವಿತೆಯಾಗಲಾರವು ಕವಿತೆ ಬರೆಯುವುದು ಒಂದು ಕಲೆ , ಬರೆದ ಕವಿತೆಯನ್ನು ವಾಚನ ಮಾಡುವ ಮೂಲಕ ಕೇಳುವರಿಗೆ ಮುಟ್ಟಿಸುವುದು ಒಂದು ಕಲೆ ಇಂಥ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳ ಬೇಕೆಂದು ಸಲಹೆ ನೀಡಿದರು. ಕವಿಗಳು ತಮ್ಮ ಸೃಜನಶೀಲತೆಯ ಮೂಲಕ ಸಮಾಜದ ಸಮಸ್ಯೆಗಳು, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಜನರಿಗೆ ತಲುಪಿಸುವ ಮಹತ್ವದ ಹೊಣೆಗಾರಿಕೆಯನ್ನು ಹೊಂದಿದ್ದಾರೆ.
ಇಂದಿನ ಕಾಲಘಟ್ಟದಲ್ಲಿ ಸಾಹಿತ್ಯವು ಕೇವಲ ಮನರಂಜನೆಗೆ ಸೀಮಿತವಾಗದೇ, ಸಮಾಜ ಪರಿವರ್ತನೆಗೆ ದಾರೀದೀಪವಾಗಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯ ಸಂಚಾಲಕರಾದ ಡಾ ಮಲ್ಲಿಕಾರ್ಜುನ ಬಿ ಮಾನ್ಪಡೆ ಅವರು ಕರೆ ನೀಡಿದರು. ಸಾಹಿತ್ಯವು ಸಮಾಜದ ಮನಸ್ಸಿನ ಪ್ರತಿಬಿಂಬವಾಗಿದ್ದು, ಕವಿತೆ ಮಾನವನ ಭಾವನೆಗಳನ್ನು ಸೂಕ್ಷ್ಮವಾಗಿ ಅಭಿವ್ಯಕ್ತಿಸುವ ಶಕ್ತಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮಾನ್ಪಡೆ ಅವರು ಹಾವೇರಿ ಜಿಲ್ಲಾ ಮಟ್ಟದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಹಾವೇರಿ ಜಿಲ್ಲಾ ಚಕೋರ ಸಾಹಿತ್ಯ ವಿಚಾರ ವೇದಿಕೆ ಜಿಲ್ಲಾ ಸಂಚಾಲಕ ಮಾರುತಿ ತಳವಾರ ಪ್ರಾಸ್ತಾವಿಕ ನುಡಿ ನೀಡಿದರು.ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ರಾಣೆಬೆನ್ನೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರೈತ ಮುಖಂಡ ರವೀಂದ್ರ ಗೌಡ ಪಾಟೀಲ್. ರಾಣೆಬೆನ್ನೂರು ಅಂಬೇಡ್ಕರ್ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಧರ್ ಚಲವಾದಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು ಕಸಾಪ ತಾಲೂಕ ಅಧ್ಯಕ್ಷ ಪ್ರಭಾಕರ್ ಶಿಗ್ಲಿ, ಶಿವಕುಮಾರ ಚನ್ನಪ್ಪನವರ ಶೇಖರ್ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲೆಯ 25ಕವಿಗಳು ಕವಿತೆಗಳನ್ನು ವಾಚನ ಮಾಡಿದರು. ದ್ರಾಕ್ಷಾಯಿಣಿ ಉದಗಟ್ಟಿ ಅವರು ನಿರೂಪಿದರು, ರೇಖಾ ರಮಾಳದ ಸ್ವಾಗತಿಸಿದರು, ವಿನಾಯಕ ಬಾರ್ಕಿ ವಂದಿಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 