ಮಡಿಕೇರಿ, ಫೆ 8: ಮಾರಣಾಂತಿಕ ಹೊಸ ಕೊರೋನಾ ವೈರಾಣು ಸೋಂಕು ಹರಡದಂತೆ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಕೊಡಗು ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೊಡಗಿಗೆ ಆಗಮಿಸುವ ಎಲ್ಲಾ ಪ್ರವಾಸಿಗರು, ವಿಶೇಷವಾಗಿ ಚೀನಾದಿಂದ ಆಗಮಿಸುವವರ ಆರೋಗ್ಯ ಸ್ಥಿತಿಗತಿಯ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ಪರಿಶೀಲನೆ ನಡೆಸುತ್ತಿದೆ. ಈ ವಿವರಗಳನ್ನು ಗೌಪ್ಯವಾಗಿಡುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಮೋಹನ್ ಭರವಸೆ ನೀಡಿದ್ದಾರೆ.
ಮಡಿಕೇರಿಯಲ್ಲಿ ಕೊರೋನಾವೈರಸ್ ಸೋಂಕಿನ ಕುರಿತು ಅರಿವು ಮೂಡಿಸುವ ಪೋಸ್ಟರ್ ಗಳನ್ನು ಜಿಲ್ಲಾಧಿಕಾರಿ ಅನೀಸ್ ಕನ್ಮಣಿ ಬಿಡುಗಡೆಗೊಳಿಸಿದರು. ಈ ಪೊಸ್ಟರ್ ಗಳನ್ನು ನಗರಾದ್ಯಂತ ಲಗತ್ತಿಸಿ ಜರನಗಿಎ ಅರಿವು ಮೂಡಿಸಲಾಗುವುದು.
ಜೊತೆಗೆ, ಕೇರಳದ ಗಡಿಗೆ ಹೊಂದಿಕೊಂಡಿರುವ ಕರಿಕೆ, ಕುಟ್ಟ ಮತ್ತು ಮಕುಟ್ಟ ಪಟ್ಟಣಗಳಲ್ಲಿ ಕಣ್ಗಾವಲು ಇರಿಸಲಾಗಿದೆ.