ರೋಗಿಗಳು ಮತ್ತು ವಿಶೇಷ ಅಂಧ ಮಕ್ಕಳೊಂದಿಗೆ ಶಾಸಕರ ಹೆಬ್ಬಾರ್ ಹುಟ್ಟುಹಬ್ಬ ಆಚರಿಸಿದ ಕಾಂಗ್ರೆಸ್ ಪಡೆ!
Congress party celebrates MLA Hebbar's birthday with patients and specially blind children!
ಮುಂಡಗೋಡ 04 ; ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಶಿವರಾಮ್ ಹೆಬ್ಬಾರ್ ಅವರ ಜನ್ಮದಿನದ ಅಂಗವಾಗಿ ಇಂದು ಮುಂಡಗೋಡಿನಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅರ್ಥಪೂರ್ಣ ಹಾಗೂ ಮಾನವೀಯ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶಿಷ್ಟವಾಗಿ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಎಚ್. ಹಿರೇಹಳ್ಳಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮುಂಡಗೋಡಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವ ಸಾರ್ವಜನಿಕರಿಗೆ ಹಣ್ಣು-ಹಂಪಲುಗಳನ್ನು ವಿತರಿಸಿದರು. ಕತ್ತಲ ಬಾಳಿಗೆ ಪ್ರೀತಿಯ ಬೆಳಕು: ಆಸ್ಪತ್ರೆಯ ಕಾರ್ಯಕ್ರಮದ ನಂತರ ಮುಂಡಗೋಡಿನ ಪ್ರಸಿದ್ಧ ‘ಜ್ಞಾನ ಪ್ರಜ್ಞಾ’ ಅಂಧ ಮಕ್ಕಳ ಶಾಲೆಗೆ ಭೇಟಿ ನೀಡಿದ ತಂಡ, ಅಲ್ಲಿನ ದಿವ್ಯಾಂಗ ಮಕ್ಕಳಿಗೆ ಮಧ್ಯಾಹ್ನದ ವಿಶೇಷ ಊಟದ ವ್ಯವಸ್ಥೆ ಮಾಡಿತು.
ಅಷ್ಟೇ ಅಲ್ಲದೆ, ಪ್ರತಿಯೊಂದು ಮಗುವಿಗೂ ಹೊಸ ಉಡುಪುಗಳನ್ನು (ಬಟ್ಟೆ) ವಿತರಿಸುವ ಕೇಕ್ ಕತ್ತರಿಸುವ ಮೂಲಕ ಮಕ್ಕಳ ಮೊಗದಲ್ಲಿ ದೀಪಾವಳಿಯಂತಹ ಸೆಂಭ್ರಮ ಮೂಡಿಸಲಾಯಿತು. ಈ ಸದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕಷ ಕೃಷ್ಣ ಹಿರೇಹಳ್ಳಿ ಅವರು, “ಶಾಸಕ ಶ್ರೀ ಶಿವರಮ್ ಹೆಬ್ಬಾರ್ ಅವರು ಈ ಕ್ಷೇತ್ರದ ಬಡವರ ಬಂಧು ಮತತು ಅಭಿವೃದ್ಧಿಯ ಹರಿಕಾರರು. ಅವರ ಜನ್ಮದಿನವನ್ನು ಸೇವಾ ದಿನವನ್ನಾಗಿ ಆಚರಿಸುವ ಮಲಕ ತಾಲೂಕಿನ ಸಮಸ್ತ ಜನತೆಯ ಪರವಾಗಿ ಹೃದಯಪೂರ್ವಕ ಶುಭಾಶಯಗಳನ್ನು ಅರ್ಿಸುತ್ತೇನೆ.
ಅವರ ನೇತೃತ್ವದಲ್ಲಿ ಮುಂಡಗೋಡ ತಾಲೂಕು ಮಾದರಿ ಕ್ಷೇತರವಾಗಿ ಬೆಳೆಯಲಿ” ಎಂದು ಹೇಳಿದರು. ಈ ವೇಳೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಎಚ್. ಹಿರೇಹಳ್ಳಿ, ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ರವಿ ಗೌಡ ಪಾಟೀಲ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ವೈ.ಪಿ. ಭುಜಂಗಿ, ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿ ನಿರ್ದೇಶಕ ಪರಶುರಾಮ ತಹಶೀಲ್ದಾರ್, ರಜಾ ಖಾನ್ ಪಠಾಣ್, ಮಹಮ್ಮದ್ ಗೌಸ್,ಗುಡ್ಡಪ ಕಾತೂರ, ಕಿರಣ್ ಶೇರಖಾನೆ,ಶೇಖರ ಲಮಾಣಿ, ರಾಜು ಗುಬಕ್ಕನವರ, ರಾಜು ಕುಟ್ರಿ, ಬಿ.ಕೆ.ಪಾಟೀಲ, ಡಿ.ಕೆ. ನಡಿಗೇರ, ಸಲ್ಮಾಂ ಶೇರಖಾನೆ,ರಾಜು ಕೊರವರ, ಹುಲಿಗೆಪ್ಪಾ ಭೋವಿ, ಕಾಂಗ್ರೆಸ್ ಪಕ್ಷದ ಅನೇಕ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 