ಹುಬ್ಬಳ್ಳಿ ಬಸವ ಸಂಸ್ಕೃತಿ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಕಾರ್ಯಕ್ರಮ

 ಹುಬ್ಬಳ್ಳಿ ಬಸವ ಸಂಸ್ಕೃತಿ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಕಾರ್ಯಕ್ರಮ Computer lab inauguration program at Basava Sanskriti School, Hubli

ಲೋಕದರ್ಶನ ವರದಿ 

ಹುಬ್ಬಳ್ಳಿ 08: ಗೋಕುಲ ರಸ್ತೆ, ಮುರಾರ್ಜಿನಗರ 2ನೇ ಹಂತ, ಬಸವ ಕೇಂದ್ರದ  ವಿ. ಎಂ ಕೊಟಗಿ ಬಸವ ಸಂಸ್ಕೃತಿ ಶಾಲೆಯಲ್ಲಿ ಶೈಕ್ಷಣಿಕ ವರ್ಷ 2026-2027 ಪ್ರಾರಂಭೋತ್ಸವ ಮತ್ತು ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಸವ ಸಂಸ್ಕೃತಿ ಶಾಲೆಯ ಸಮಿತಿಯ ಸದಸ್ಯರು ಹಾಗೂ ಶಿಕ್ಷಕರು ಮಕ್ಕಳನ್ನು ಪುಷ​‍್ಾರೆ್ಪಣ ಗೈದು, ಸಿಹಿ ಪದಾರ್ಥ ನೀಡಿ ಹೃದಯ ಸ್ಪರ್ಶಿ ಯಾಗಿ, ಪ್ರೀತಿ, ಮಮತೆ, ಕರುಣೆ, ವಾಸ್ತಲ್ಯ, ಸಂತೋಷ, ಸಡಗರ, ಉತ್ಸಾಹದಿಂದ ಸ್ವಾಗತಿಸಲಾಯಿತು. ಬಸವಾಭಿಮಾನಿಗಳಿಂದ ದಾಸೋಹ ರೂಪದಲ್ಲಿ  ಪಡೆದ  ಕಂಪ್ಯೂಟರ್ ಗಳನ್ನು ಒಂದಡೆ  ಸೇರಿಸಿ    ಕಂಪ್ಯೂಟರ್ ಲ್ಯಾಬ್ ನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ​‍್ಾರೆ್ಪಣ ಮಾಡುವ ಮೂಲಕ ಉದ್ಘಾಟಿಸಲಾಯಿತು.  

  ಬಸವ ಕೇಂದ್ರದ  ವಿ.ಎಂ ಕೊಟಗಿ  ಬಸವ ಸಂಸ್ಕೃತಿ ಶಾಲೆಯ ಸಮಿತಿಯ ಅಧ್ಯಕ್ಷರು, ದಾಸೋಹಿಗಳಾದ ಎಸ್‌.ವಿ ಕೊಟಗಿ, ಕಾರ್ಯದರ್ಶಿಗಳು, ನಿವೃತ್ತ ಪ್ರಾಧ್ಯಾಪಕ ಡಾ. ಪ್ರಕಾಶ್ ಮುನ್ನೊಳ್ಳಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಶಾಲೆಯ  ಶಿಕ್ಷಕಿಯರಾದ ಶಶಿಕಲಾ ವಾಲಿ, ಮಾಲಾ ರಮೇಶ್, ಮಧು ಕಂಠಿ, ನೇಹಾ ಕಂಠಿ, ರೋಹಿಣಿ, ಶ್ರುತಿ ಇಬ್ರಾಹಿಂಪುರ, ಪ್ರೀತಿ ಪಾಡಾ, ಈಶ್ವರಿ ಬೆಸ್ತ, ಸುಜಾತ ಹಕ್ಕಲ್, ಯಶೋಧ ಗಾಯಕ್ವಾಡ್, ಪ್ರಿಯಾ ಸಂಕನಗೌಡರ, ಆರತಿ ಜಮ್ಯಾಲ್,   ಶಾಲೆಯ ಮಕ್ಕಳು, ಪಾಲಕರು, ಮುಂತಾದವರು ಭಾಗವಹಿಸಿದ್ದರು.