ಸಾರ್ಥಕ ಜೀವನಕ್ಕೆ ಕ್ರಿಯಾಶೀಲ ಬದುಕು ಅಗತ್ಯ

ಸಾರ್ಥಕ ಜೀವನಕ್ಕೆ ಕ್ರಿಯಾಶೀಲ ಬದುಕು ಅಗತ್ಯ  An active life is essential for a meaningful life

ಲೋಕದರ್ಶನ ವರದಿ 

  ರಾಣೆಬೆನ್ನೂರು 08: ಶಿವಶರಣರ ವಚನಗಳು ಬದುಕನ್ನ ರೂಪಿಸುವ ದಿಕ್ಸೂಚಿಗಳು, ಮನುಷ್ಯನ ಬದುಕಿನಲ್ಲಿ ಪ್ರತಿಯೊಂದು ಹಂತವನ್ನು ಸರಿ ದಾರಿಗೆ ತರಲು ಶರಣರ ವಚನಗಳು ದಾರಿ ದೀಪವಾಗಿವೆ ಎಂದು ಹಿರೇಕೆರೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಕಾಂತೇಶರೆಡ್ಡಿ ಗೋಡಿಹಾಳ ಹೇಳಿದರು. 

ಅವರು ರವಿವಾರ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಕಸಾಪ,ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಆಯೋಜಿಸಿದ್ದ, ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ತಾಲೂಕ ಅಧ್ಯಕ್ಷ, ಶರಣ ಸಾ. ಪ.ಗೌರವಾಧ್ಯಕ್ಷ  ವಾಸಪ್ಪ ಯಲ್ಲಪ್ಪ ಕುಸಗೂರಅವರ 85ನೇ ವರ್ಷದಜನ್ಮ ದಿನಾಚರಣೆಯ ಅಭಿನಂದನಾ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯಕ್ಕೆ  ಶಿವ ಶರಣೆಯರ ಕೊಡುಗೆ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಉನ್ನತಿ ಪದವಿ ಪೂರ್ವಕಾಲೇಜಿನ ಸಂಸ್ಥಾಪಕ ಬಸವರಾಜ್  ಪಾಟೀಲ್  ವಾಸಣ್ಣ ಅವರು ರಾಣೇಬೆನ್ನೂರು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಭವನವನ್ನು ನಿರ್ಮಾಣ ಮಾಡುವಲ್ಲಿ ಹೆಚ್ಚು ಶ್ರಮವಹಿಸಿದ್ದಾರೆ ಅವರಅವಿರತ ಪ್ರಯತ್ನದಿಂದ ತಾಲೂಕಿನ ಎಲ್ಲರ ಸಹಕಾರ ಪಡೆದು ಈ ಭವನವನ್ನು ನಿರ್ಮಿಸಿದ್ದು ಇಂದು ಸಾಹಿತ್ಯ ಚಟುವಟಿಕೆಗಳಿಗೆ ದಾರೀದೀಪವಾಗಿದೆಎಂದರು.  

ಮುಖ್ಯ ಅತಿಥಿಗಳಾಗಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಅವರು ಇಂತಹ ಇಳಿ ವಯಸ್ಸಿನಲ್ಲಿಯೂ ಸಾಹಿತ್ಯದ ಅಭಿಮಾನವನ್ನು ಇಟ್ಟುಕೊಂಡು ಎಲ್ಲರಿಗೂ ಮಾರ್ಗದರ್ಶನ ಮಾಡುತ್ತಿರುವ ವಾಸಣ್ಣ ಅವರಿಗೆ ಅಭಿನಂದನೆಗಳು ಎಂದರು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪುರ ಅವರು ಮಾತನಾಡಿ ಶರಣರ ಚಿಂತನೆಗಳು ಇಂದಿಗೂ ಕೂಡಜೀವಂತವಾಗಿರುವುದು ವಾಸಣ್ಣ ಕುಸಗೂರ ಅವರಂತ ಶರಣರಿಂದ ಎಂದರು. ಕಸಾಪ ಅಧ್ಯಕ್ಷ   ಪ್ರಭಾಕರ್‌ಎನ್ ಶಿಗ್ಲಿ,  

ಶ.ಸಾ.ಪ ಅಧ್ಯಕ್ಷ ರಾಜೇಶ್ವರಿ ಪಾಟೀಲ್, ಉಪನ್ಯಾಸಕಿಕಸ್ತೂರಮ್ಮ ಪಾಟೀಲ್, ವರ್ತಕ ಗದಿಗೆಪ್ಪ ಹೊಟ್ಟಿಗೌಡರ, ಶರಣೆ ಗಾಯತ್ರಮ್ಮ ಕುರುವತ್ತಿ, ನಂದಾ ಕುಸಗೊರ, ಎ.ಬಿ. ರತ್ನಮ್ಮ  ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.