ಕಾರವಾರ

ಯುವಕರ ನಡುವೆ ಘರ್ಷಣೆ ಠಾಣೆಯಲ್ಲಿ ದೂರು ದಾಖಲು

ಯುವಕರ ನಡುವೆ ಘರ್ಷಣೆ  ಠಾಣೆಯಲ್ಲಿ ದೂರು ದಾಖಲು

ಕಾರವಾರ 23: ಬೈಕ್ ಓವರ್ ಟೇಕ್ ಮಾಡುವಾಗ ಮತ್ತೊಂದು ಬೈಕ್ ಗೆ ತಾಗಿದ ಕಾರಣಕ್ಕೆ ಯುವಕರು ಹೊಡೆದಾಡಿಕೊಂಡ ಘಟನೆ ಶಿರಸಿಯ ಸಿಂಪಿಗಲ್ಲಿಯಲ್ಲಿ  ನಡೆದಿದೆ.  ಬೈಕ್ ತಾಗಿದ ವಿಚಾರವಾಗಿ  ಯುವಕರ ಗುಂಪಿನ ಮಧ್ಯೆ ನಡು ರಸ್ತೆಯಲ್ಲೇ ಹೊಡೆದಾಡಿಕೊಂಡ ಘಟನೆ  ಶಿರಸಿ  ನಗರದ ದೇವಿಕೆರೆ ಸಮೀಪದ ಸಿಂಪಿಗಲ್ಲಿಯಲ್ಲಿ ನಡೆದಿದೆ. ಮೇ.21 ರ ರಾತ್ರಿ ಇಬ್ಬರು  ಯುವಕರು ಬೈಕ್ ನಲ್ಲಿ  ಮತ್ತೊಂದು ಬೈಕ್ ನಲ್ಲಿದ್ದ ಯುವಕರ ವಾಹನವನ್ನು ಚೇಜ್  ಮಾಡುವಾಗ ಬೈಕ್ ಗೆ ಟಚ್ ಆಗಿದೆ.ಈ ವಿಷಯವಾಗಿ  ಯುವಕರ ನಡುವೆ ವಾಗ್ವಾದ ನಡೆದು  ಯುವಕರ ಒಂದು ಗುಂಪು ಇನ್ನೊಂದು ಗುಂಪಿನ  ಮೇಲೆ ಹಲ್ಲೆ ಮಾಡಿದರು ಎನ್ನಲಾಗಿದೆ.ಯುವಕರು ಹೊಡೆದಾಡುವ  ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ನಂತರ ಈ ಸಿಸಿ ಟಿವಿ ದೃಶ್ಯವನ್ನ ಸ್ಥಳೀಯರೊಬ್ಬರು ಶಿರಸಿ ನಗರ ಠಾಣೆ ಪೊಲೀಸರಿಗೆ ನೀಡಿದ್ದಾರೆ.  

ಈ ದೃಶ್ಯ ಆಧರಿಸಿ ತನಿಖೆ ಮಾಡಿದ  ಪೊಲೀಸರು  ಪ್ರಕರಣ ದಾಖಲಿಸಿದ್ದಾರೆ  ಶಿರಸಿಯ ಅಯಾನ್  ಟಿನಮೇಕರ್ , ಸರಾ​‍್ರಜು ಟಿನಮೇಕರ್ ,ಆದಿಲ್ ಸಕ್ಕರ್ ಖಾನ್ ,  ಶಿರಸಿಯ  ಗೋಲ್ ಗೇರಿ ಓಣಿಯ ಅಭಯ್ ಪ್ರಕಾಶ್  ಹುದಾರ್,  ಶಿರಸಿ ಸಿಂಪಿಗಲ್ಲಿಯ ಸರ್ವೇಶ್ ಮಾಲ್ತೇಶ್  ಹಿರೇಮಠ್ ಹಾಗೂ ಸಿಂಪಿಗಲ್ಲಿಯ  ಆಕಾಶ್ ಗೋಪಾಲ  ಕುಂದಣಗಾರ  ಸೇರಿದಂತೆ ಒಟ್ಟು ಆರು ಯುವಕರ ವಿರುದ್ಧ ಶಿರಸಿ ನಗರ ಠಾಣೆಯಲ್ಲಿ ಇಂದು ಪ್ರಕರಣ ದಾಖಲಿಸಿದ್ದಾರೆ. 


ಸುದ್ದಿ ಓದಿ