ಚಿಕ್ಕೋಡಿ

ಅಪಘಾತ ವಿಮೆಯಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ

ಅಪಘಾತ ವಿಮೆಯಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ

ಲೋಕದರ್ಶನ ವರದಿ 

ಮಾಂಜರಿ 23: ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ಸೇವೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಧ್ಯಕ್ಷ ಹಾಗೂ ಪದ್ಮಶ್ರೀ ಡಾ. ಪ್ರಭಾಕರ್ ಕೋರೆಯುವರು ಸಹಕಾರಿ ಸಂಘದಲ್ಲಿ ಸ್ಥಾಪಿಸಿರುವ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಡಾ ಪ್ರಭಾಕರ್ ಕೋರೆ ಕೋ ಆಪ್ ಕ್ರೆಡಿಟ್ ಸೊಸೈಟಿಯ ಮುಖಾಂತರ ಸದಸ್ಯರ ಹಿತಕ್ಕಾಗಿ ಹಲವಾರು ಜನಪರ ಯೋಜನೆಗಳನ್ನು ರೂಪಿಸಲಾಗಿದ್ದು ಈ ಯೋಜನೆಯ ಸುದೂಪಯೋಗ  ಪಡೆದುಕೊಂಡು ಸದಸ್ಯರು ಆರ್ಥಿಕವಾಗಿ ಬಲಿಷ್ಠರಾಗಬೇಕೆಂದು ಡಾ ಪ್ರಭಾಕರ್ ಕೋರೆ ಕೋ ಆಫ್  ಕ್ರೆಡಿಟ್ ಸೊಸೈಟಿಯ ಚಿಂಚಲಿ ಶಾಖೆಯ ಅಧ್ಯಕ್ಷರಾದ ಜಗನ್ನಾಥ್ ಪಾಟೀಲ್ ಹೇಳಿದರು. 

 ಅವರು ಶನಿವಾರದಂದು ಡಾ. ಪ್ರಭಾಕರ ಕೋರೆ ಕೋ ಆಪ್  ಕ್ರೆಡಿಟ್ ಸೊಸಾಯಿಟಿ.,ನಿಯಮಿತ ಅಂಕಲಿ. (ಬಹುರಾಜ್ಯ) ವತಿಯಿಂದ ಮಾಡಿಸಿದ ಸದಸ್ಯರ ಅಪಘಾತ ವಿಮೆಯಲ್ಲಿ ಮೃತರಾದ ಚಿಂಚಲಿ ಶಾಖೆಯ ಸದಸ್ಯರಾದ ದಿ. ಬಸಪ್ಪಾ ಮಾರುತಿ ಖಿಲಾರೆ ಇವರ ಸರಳ ವಾರಸದಾರರಿಗೆ ಸ್ಥಾನಿಕ ಸಲಹಾ ಸಮಿತಿ ಸಮ್ಮುಖದಲ್ಲಿ 100000.00 ರೂಪಾಯಿ ಅಪಘಾತ ವಿಮೆ ಪರಿಹಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಚಿಂಚಲಿ ಶಾಖಾ ಸಲಹಾ ಸಮಿತಿ ಅಧ್ಯಕ್ಷರು ಜಗನ್ನಾಥ ಪಾಟೀಲ, ವಸಂತ ಕರಾಕಾಯಿ, ಬಾಬು ನಿಂಗನೂರೆ, ಅಂಕುಶ ಜಾದವ, ಗುರುಲಿಂಗ ಕುಂಬಾರ, ಭಾಗಪ್ಪ ಚೌಗುಲೆ, ಜಾಕಿರಹುಸೇನ್ ಬಿಚ್ಚು, ವ್ಯವಸ್ಥಾಪಕ ನಿರ್ದೇಶಕರು ದೇವೇಂದ್ರ ಕರೋಶಿ, ವಿಮೆ ಅಧಿಕಾರಿ ರಾವಸಾಹೇಬ ಗುಂಡಕಲ್ಲೆ ಶಾಖಾ ವ್ಯವಸ್ಥಾಪಕ ಪ್ರದೀಪ ಬಿಳ್ಳೂರೆ ಅವರು ಉಪಸ್ಥಿತರಿದ್ದರು. 


ಸುದ್ದಿ ಓದಿ