ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮತ್ತು ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪತ್ರ

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮತ್ತು ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪತ್ರ  Certificates of merit for talented students and excellent teachers

ಲೋಕದರ್ಶನ ವರದಿ 

ಕಂಪ್ಲಿ29 ;  ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪಟ್ಟಣದ  ವಿದ್ಯಾಸಾಗರ ವಸತಿ ಇಂಟರ್‌ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶನಿವಾರ ಏರ​‍್ಾಡಿಸಿದ ಉಡುಪಿ ಪದ್ಮಾವತೆಮ್ಮ  ಸ್ಮರಣಾರ್ಥದ  ದತ್ತಿ ಕಾರ್ಯಕ್ರಮ ನಡೆಯಿತು.  ವಿದ್ಯಾಸಾಗರ ಶಾಲೆಯ ಶಿಕ್ಷಕ ದೊಡ್ಡಬಸಪ್ಪ ‘ಪಂಪ ಸಾಹಿತ್ಯ ಹಾಗೂ ಜನಪದ ಸಾಹಿತ್ಯ’ ಕುರಿತು ಉಪನ್ಯಾಸ ನೀಡಿ, ಪಂಪನ ಸಾಹಿತ್ಯವು ಮೇರು ಸಾಹಿತ್ಯವಾಗಿದ್ದು ಧರ್ಮವೇ ಎಲ್ಲದಕ್ಕಿಂತ ಮುಖ್ಯ ಎಂದು ಸಾರುತ್ತದೆ. ಜೊತೆಗೆ ಧರ್ಮದ ಚೌಕಟ್ಟಿನಲ್ಲಿ ಮನುಷ್ಯ ಸುಂದರ ಬದುಕನ್ನು ಸಾಗಿಸಬೇಕು. ಪಂಪನ ಸಾಹಿತ್ಯವು ಲೌಕಿಕ ಮತ್ತು ಆಧ್ಯಾತ್ಮ ಎರಡನ್ನು ಸಮನ್ವಯಗೊಳಿಸಿದ್ದಾನೆ. ಜನಸಾಮಾನ್ಯರ ಬಾಯಿಂದ ಬಾಯಿಗೆ ಹರಿದು ಬಂದ ಜನಪದ ಸಾಹಿತ್ಯವು ಕನ್ನಡ ಸಾಹಿತ್ಯದ ಪ್ರಮುಖ ಭಾಗವಾಗಿದೆ.

ಜನಪದ ಗೀತೆ, ಗಾದೆ, ಒಗಟು, ಕತೆ, ನಂಬಿಕೆ ಮೊದಲಾದ ಮನುಷ್ಯನ ಜೀವನ ಪದ್ಧತಿಗಳನ್ನು ಸಾರುತ್ತದೆ. ಜನಪದ ಸಾಹಿತ್ಯವು ಮನುಷ್ಯನ ಜೀವನದ ಹೆಜ್ಜೆಗುರುತುಗಳನ್ನು ಮೂಡಿಸುತ್ತದೆ ಎಂದರು. ನವಭಾರತ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ನಾಗೇಶ್ವರರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಪಠ್ಯದ ಜೊತೆಗೆ ಸಾಹಿತ್ಯ ಕೃತಿಗಳ ಅಧ್ಯಯನ ಮಾಡುವಲ್ಲಿ ಮುಂದಾಗಬೇಕು ಎಂದರು.  ಪ್ರತಿಭಾನ್ವಿತ ವಿದ್ಯಾರ್ಥಿಗಳು, ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.  ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಅಧ್ಯಕ್ಷತೆವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷ ಅಯ್ಯೋದಿ ವೆಂಕಟೇಶ, ಪರಿಷತ್ ಪದಾಧಿಕಾರಿಗಳಾದ ಎಸ್‌.ಡಿ.ಬಸವರಾಜ, ಎಸ್‌.ಶಾಮಸುಂದರರಾವ್, ಎಲಿಗಾರ ವೆಂಕಟರೆಡ್ಡಿ, ಅಶೋಕ ಕುಕನೂರು, ಹಾದಿಮನಿ ಕಾಳಿಂಗವರ್ಧನ, ಬಂಗಿ ದೊಡ್ಡ ಮಂಜುನಾಥ ಸೇರಿ ಅನೇಕರಿದ್ದರು .