ಜಾತಿ ಸರ್ವೇ: ಸರ್ವೇ ಕಾಲಾವಧಿ ವಿಸ್ತರಿಸಲು ಆಗ್ರಹ

Caste Survey: Demand to extend the survey period

ಸಂಬರಗಿ 15: ರಾಜ್ಯ ಸರಕಾರದ ಆದೇಶದ ಪ್ರಕಾರ ಒಳ ಮೀಸಲಾತಿ ಜಾತಿ ಸರ್ವೇ ಪ್ರಾರಂಭ ಇದ್ದು, ಗಡಿ ಭಾಗದ ಗ್ರಾಮಗಳಲ್ಲಿ ಸರಿಯಾಗಿ ನೆಟವರ್ಕ್‌ ಇಲ್ಲದ ಕಾರಣ ಪ್ರತಿ ದಿನಕ್ಕೆ 5 ರಿಂದ 7 ಕುಂಟುಂಬಗಳ ಸರ್ವೇ ಮಾಡುತ್ತಿದ್ದು, ನಿಗದಿತ ಅವಧಿಯಲ್ಲಿ ಸರ್ವೇ ಪೂರ್ಣಗೋಳ್ಳಲು ಅಸಾಧ್ಯ. ಸರ್ವೇ ಕಾಲಾವಧಿಯನ್ನು ವಿಸ್ತಾರ ಮಾಡಬೇಕೆಂದು ದಲಿತರು ಆಗ್ರಹಿಸಿದ್ದಾರೆ.  

ಗಡಿ ಭಾಗದ ಮೂವತ್ತು ಗ್ರಾಮಗಳಲ್ಲಿ ಯಾವುದೇ ಗ್ರಾಮಕ್ಕೆ ಸರಿಯಾಗಿ ನೆಟವರ್ಕ ಇಲ್ಲದ ಕಾರಣ ಸರ್ವೇ ಮಾಡಲು ವಿಳಂಬವಾಗುತ್ತಿದ್ದೆ. ಸರ್ಕಾರದ ಆದೇಶದ ಪ್ರಕಾರ ಮೇ.17ರ ವರೆಗೆ 60 ರಿಂದ 70 ಪ್ರತಿಶತ ಸರ್ವೇ ಆಗುವ ಸಾಧ್ಯತೆ ಇದೆ. ಇನ್ನೂ 30 ಪ್ರತಿಶತ ಸರ್ವೇ ಹಿಂಪಡುವ ಸಾಧ್ಯತೆ ಇದೆ. ಸಂಬರಗಿ, ಶಿರೂರ, ಪಾಂಡೇಗಾಂವ, ಆಜೂರ, ಜಂಬಗಿ ಇನ್ನೀತರ ಗ್ರಾಮಗಳು ತೆಗ್ಗಿನ ಪ್ರದೇಶದಲ್ಲಿ ಬಿ.ಎಸ್‌.ಎನ್‌.ಎಲ್, ಎರ್ಟೆಲ್ ಯಾವುದೇ ನೆಟವರ್ಕ್‌ ಸರಿಯಾಗಿ ಬರುತ್ತಿಲ್ಲ. ಸರ್ವೇ ಮಾಡುವ ಶಿಕ್ಷಕರು ಎತ್ತರದ ಪ್ರದೇಶದಲ್ಲಿ ನಿಂತು ಸರ್ವೇ ಮಾಡುವ ಪರಿಸ್ಥಿತಿ ಬಂದಿದೆ. ಆ ಕಾರಣ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ಸರಿಯಾಗ ಒಳ ಮೀಸಲಾತಿ ಜನಗಣತಿ ಸರ್ವೇ ಅವಧಿಯನ್ನು ವಿಸ್ತರಿಸಬೇಕೆಂದು ಜನರು ಅಗ್ರಹಿಸಿದ್ದಾರೆ.  

ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಸರ್ವೇ ಕಾರ್ಯ ಪ್ರಾರಂಭವಿದ್ದು, ಬಿಸಿಲಿನಲ್ಲಿ ಶಿಕ್ಷಕರು ತತ್ತರಿಸಿ ಹೋಗಿದ್ದಾರೆ. ಬೆಳಿಗ್ಗೆ 8 ರಿಂದ ಸಾಯಂಕಾಲ 5ರ ವರೆಗೆ ಸುಡು ಬಿಸಿಲಿನಲ್ಲಿ ಸರ್ವೇ ಮಾಡಿದರು ಸಹ ಅರ್ವೇ ಮಾಡುವುದು ಅಸಾಧ್ಯವಾಗುತ್ತಿದೆ. ಪ್ರತಿ ಕುಟುಂಬದ ಪ್ರತಿಯ ಹೆಸರನ್ನು ಆ್ಯಪ್‌ನಲ್ಲಿ ಮೂಡಿಸಿ, ಅಪ್ಲೋಡ್ ಮಾಡಬೇಕಾದರೆ ಎತ್ತರದ ಸ್ಥಳದಲ್ಲಿ ಹೋಗಿ ಅಪ್ಲೋಡ ಮಾಡುವ ಪರಿಸ್ಥಿತಿ ಬಂದಿದೆ. 

ಈ ಕುರಿತು ಬೆಳಗಾವಿ ಜಿಲ್ಲಾ ದಲಿತ ಸಂಘರ್ಷ ಸಮೀತಿ ಜಿಲ್ಲಾ ಸಂಚಾಲಕರಾದ ಸಂಜಯ ತಳವಳಕರ ಇವರನ್ನು ಸಂಪರ್ಕಿಸಿದಾಗ ಗಡಿ ಭಾಗದಲ್ಲಿ ಹಲವಾರು ಗ್ರಾಮಗಳು ತಗ್ಗಿನ ಪ್ರದೇಶದಲ್ಲಿದ್ದು, ಯಾವುದೇ ನೆಟವರ್ಕ್‌ ಬರದ ಕಾರಣ ಸರ್ವೇ ಮಾಡಲು ತೊಂದರೆಯಾಗುತ್ತಿದೆ. ಜಿಲ್ಲಾ ಆಡಳಿತ ಗಮನ ಹರಿಸಿ ಒಳ ಮೀಸಲಾತಿ ಸರ್ವೇ ಅವಧಿಯನ್ನು ವಿಸ್ತಾರ ಮಾಡಬೇಕೆಂದು ಅವರು ಸರ್ಕಾರಕ್ಕೆ ವಿನಂತಿಸಿದರು.