ಸಾರ್ವಜನಿಕರು, ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ಸು ಲೋಕಾರೆ್ಣ : ಶಾಸಕ ಪಠಾಣ
Buses will be public for the convenience of the public and passengers: MLA Pathana
ಲೋಕದರ್ಶನ ವರದಿ
ಶಿಗ್ಗಾವಿ 19 : ಗ್ರಾಮಸ್ಥರ ಹಾಗೂ ಶಾಲಾ ವಿಧ್ಯಾರ್ಥಿಗಳ ಬಹು ದಿನದ ಬೇಡಿಕೆಯ ಅನ್ವಯ ಇಂದು 8 ಬಸ್ಸುಗಳಿಗೆ ಚಾಲನೆಯನ್ನು ನೀಡುತ್ತಿದ್ದು ಅಲ್ಲದೇ ಇನ್ನೂ 15 ದಿನದಲ್ಲಿ ಮತ್ತೆ 15 ಬಸ್ಸುಗಳಿಗೆ ಚಾಲನೆ ನೀಡುತ್ತೇವೆ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು. ಪಟ್ಟಣದ ಹೊಸ ಬಸ್ಸ ನಿಲ್ದಾಣದಲ್ಲಿ ಸದರಿ 8 ಹೊಸ ಬಸ್ಸುಗಳನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಲೋಕಾರೆ್ಣಗೊಳಿಸಿ ಮಾತನಾಡಿದ ಅವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಾಯುವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಕಾಗೆ, ಉಪಾಧ್ಯಕ್ಷ ಸುನೀಲ ಹನುಮಣ್ಣವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು. ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿ ಯಾವುದೇ ಕಾರಣಕ್ಕೂ ಗ್ರಾಮಸ್ಥರಿಗೆ ಹಾಗೂ ವಿಧ್ಯಾರ್ಥಿಗಳಿಗೆ ತೊಂದರೆ ಆಗದೇ ರೀತಿಯಲ್ಲಿ ತಾಲೂಕಿನ ಎಲ್ಲ ಮಾರ್ಗಗಳಿಗೆ ಬಸ್ಸುಗಳನ್ನು ಬೀಡಲು ಹಾಗೂ ಕೆಲವೊಂದು ಮಾರ್ಗಗಳನ್ನು ನಾನು ಹೇಳುತ್ತೇನೆ ಆ ಮಾರ್ಗಗಳಿಗೆ ಬಸ್ಸುಗಳನ್ನು ಬೀಡಲು ಸೂಚಿಸಿದರು. ನಂತರ ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಹಾವೇರಿ ವಿಭಾಗದ ಸಾರಿಗೆ ಅಧಿಕಾರಿ ಅಶೋಕ ಪಾಟೀಲ, ಸವಣೂರ ಘಟಕ ವ್ಯವಸ್ಥಾಪಕ ಮುನ್ನಾಸಾಬ್ ಟಿ ಎಸ್, ಸಂಚಾರ ನೀರೀಕ್ಷಕ ದೇವರಾಜ ಲಮಾಣಿ, ಶಿಗ್ಗಾವಿ ಸಂಚಾರ ನಿಯಂತ್ರಕ ಆರ್ ಪಿ ನದಾಫ್, ಶೇಖಪ್ಪ ಮಣಕಟ್ಟಿ, ಗುಡ್ಡಪ್ಪ ಜಲದಿ, ಗೌಸಖಾನ ಮುನಶಿ, ಮುನ್ನಾ ಲಕ್ಷ್ಮೇಶ್ವರ, ಶಂಭುಲಿಂಗಪ್ಪ ಆಜೂರ, ವಸಂತಾ ಬಾಗೂರ, ಮಂಜುನಾಥ ತಿಮ್ಮಾಪೂರ, ಆಶೀಫ್ ಕಣವಿ, ಬಾಬರ ಬಾವೋಜಿ ಸೇರಿದಂತೆ ಶಿಗ್ಗಾವಿ ಘಟಕದ ಚಾಲನಾ, ತಾಂತ್ರಿಕ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 