ಭೀಮನಭಾವಿ ಸ್ವಚ್ಛತಾ ಕಾರ್ಯಕ್ರಮ
Bhimanabhavi Cleanliness Drive
ತಾಳಿಕೋಟಿ 25: ಪಟ್ಟಣದಲ್ಲಿ ನಡೆಯುತ್ತಿರುವ ಐತಿಹಾಸಿಕ ಖಾಸ್ಗತೇಶ್ವರ ಜಾತ್ರೆಯ ನಿಮಿತ್ಯವಾಗಿ ರಾಜವಾಡೆಯಲ್ಲಿರುವ ಭೀಮನಭಾವಿಯಲ್ಲಿ ಜಾತ್ರೆಯ ವಿಶೇಷ ಕಾರ್ಯಕ್ರಮಗಳಲ್ಲಿ ಒಂದಾದ ಗಂಗಾಸ್ಥಳದ ಪೂಜಾ ವಿಧಿ ವಿಧಾನಗಳು ನಡೆಯಲಿರುವುದರಿಂದ ಶುಕ್ರವಾರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗಳು ಭಾಗವಹಿಸಿ ಭಾವಿಯ ಸ್ವಚ್ಛತೆಯನ್ನು ಮಾಡಿದರು. ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ, ಪುರಸಭೆ ಮಾಜಿ ಸದಸ್ಯ ಜೈಸಿಂಗ್ ಮೂಲಿಮನಿ, ಶ್ರೀಪಾದ ಜೋಶಿ, ಹಿರಿಯ ಆರೋಗ್ಯ ನೀರೀಕ್ಷಕ ಶಿವು ಜುಮನಾಳ, ಕಿರಿಯ ಆರೋಗ್ಯ ನೀರೀಕ್ಷಕ ಫಿರೋಜ ಮುಲ್ಲಾ, ರಂಗನಾಥ ಅಜಮನಿ, ಲೆಕ್ಕಿಗ ಸಿದ್ದಲಿಂಗ ಚೊಂಡಿಪಾಟೀಲ, ವ್ಯವಸ್ಥಾಪಕ ಎಸ್ ಎಸ್ ಇಂಜಿಗನೇರಿ, ಆರ್.ಐ.ಶರಣಗೌಡ ಪಾಟೀಲ ಹಾಗೂ ಪೌರ ಕಾರ್ಮಿಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 