ಭಗವದ್ಗೀತೆ, ಶರಣ ಸಾಹಿತ್ಯಕ್ಕೆ ಒಲವಿನ ನಂಟಿದೆ: ಮಲ್ಲಯ್ಯ ಸ್ವಾಮಿಜಿ

ಗೋಕಾಕ 03: ಸುಮಾರು ಐದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಭಗವದ್ಗೀತೆ ಹಾಗೂ ಶರಣ ಸಾಹಿತ್ಯದಲ್ಲಿ ಸಾಮ್ಯತೆ ಇದೆ. ಸಮಾಜದ ಓರೆ-ಕೊರೆಗಳನ್ನು ಶರಣರು ಸಾತ್ವಿಕ ಭಾವದಲ್ಲಿ ವಚನಗಳ ಮೂಲಕ ಪ್ರಸ್ತುತ ಪಡಿಸಿದರೆ ಭಗವದ್ಗೀತೆ ಕರ್ಮಮಾರ್ಗ, ಉಪಾಸನಮಾರ್ಗ ಹಾಗೂ ಜ್ಞಾನಮಾರ್ಗಗಳ ಮುಖಾಂತರ ಸಮಾಜವನ್ನು ತಿದ್ದಿ ಧರ್ಮ ಪ್ರವೃತ್ತರಾಗಲು ಸೂಚಿಸುತ್ತದೆ. ಭಗವದ್ಗೀತೆ ಹಾಗೂ ಶರಣ ಸಾಹಿತ್ಯಕ್ಕೆ ಒಲವಿನ ನೆಂಟಿದೆ ಎಂದು ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿಯವರು ಅಭಿಪ್ರಾಯಿಸಿದರು. 

ಅವರು ಗೋಕಾಕ ನಗರದ ರೋಟರಿ ರಕ್ತ ಭಂಡಾರದಲ್ಲಿ ಆಯೋಜಿಸಿದ ಬಿ.ಎಸ್.ಎನ್.ಎಲ್.ದ ನಿವೃತ್ತ ಅಧಿಕಾರಿ ಹಾಗೂ ರಂಗಕಲಾವಿದ ಈಶ್ವರಚಂದ್ರ ಬೆಟಗೇರಿ ರಚಿಸಿದ ಹದಿನೈದನೇ ಸಾಹಿತ್ಯ ಕೃತಿ "ಕರುಣಾಮಯಿ ಶ್ರೀಕೃಷ್ಣ" ಕೃತಿಯನ್ನು ಲೋಕಾರ್ಪಣೆ ಮಾಡಿ ತಮ್ಮ ಆಶೀರ್ವಚನದಲ್ಲಿ ಅರವತ್ತು ವಸಂತಗಳನ್ನು ಪೂರ್ಣಗೊಳಿಸಿದ ಈಶ್ವರಚಂದ್ರ ಬೆಟಗೇರಿಯವರ ವೃತ್ತಿ-ಪ್ರವೃತ್ತಿಯಲ್ಲಿ ಸಾಮ್ಯತೆ ಇರುವದು ಶ್ಲ್ಯಾಘನೀಯವೆಂದು ನುಡಿದರು.

ಸಾನ್ನಿಧ್ಯ ವಹಿಸಿದ್ದ ಶೂನ್ಯಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು, ಬೆಟಗೇರಿಯವರು ಅಪರೂಪದ ಸಾಹಿತ್ಯ ಕೃತಿ ನೀಡುವದರೊಂದಿಗೆ 'ಶ್ರೀಕೃಷ್ಣ ಪಾರಿಜಾತ'ದಂತಹ ಗ್ರಾಮೀಣ ಕಲೆಗಳನ್ನು ಸುಮಾರು 50 ವರ್ಷಗಳಿಂದ ನಾಡಿನಾದ್ಯಂತ ಪಸರಿಸಿರುವುದು ಅಭಿನಂದನೀಯವೆಂದು, ನುಡಿದು ಶ್ರೀಯುತರ ಕುರಿತು ಅಭಿನಂದನಾ ಗ್ರಂಥವು ಇಷ್ಟರಲ್ಲಿಯೇ ಹೊರಬರಲೆಂದು ಆಶಿಸಿದರು.

ಷಷ್ಠಬ್ದಿ ಕಾರ್ಯಕ್ರಮ ಉದ್ಘಾಟಿಸಿದ ರಾಜಕೀಯ ಮುಖಂಡರಾದ ಅಶೋಕ ಪೂಜಾರಿಯವರು ಜಾನಪದ ಕಲೆಗಳನ್ನು ಆರಾಧಿಸುವ ಕಲಾವಿದರು ದೈವಸ್ವರೂಪಿಗಳು, ಸಾಕ್ಷಾತ ಗಂಧರ್ವ ಸ್ವರೂಪಿಗಳೆ ಕಲಾವಿದರಾಗಿ ಬ್ರಹ್ಮಸಾಕ್ಷಾತ್ಕಾರ ಮಾಡಿಸುವರೆಂಬುದಕ್ಕೆ ಈಶ್ವರಚಂದ್ರರೇ ನಿದರ್ಶನರೆಂದು ನುಡಿದರು.

ಅಧ್ಯಕ್ಷತೆಯನ್ನು ಬೆಳಗಾವಿ ಬಿ.ಎಸ್.ಎನ್.ಎಲ್. ಆಡಳಿತ ವಿಭಾಗದ ಉಪ ಮಹಾಪ್ರಬಂಧಕ ಆರ್.ವ್ಹಿ. ದತ್ತವಾಡವರು ವಹಿಸಿದ್ದರು. ವೇದಿಕೆಯ ಮೇಲೆ ಹಿರಿಯರಾದ ನರೇಂದ್ರ ಪುರಂದರೆ, ಬಿ.ಬಿ. ಪಟ್ಟಣಶೆಟ್ಟಿ, ಮಲ್ಲಿಕಾಜರ್ುನ ಕಲ್ಲೋಳಿ, ಪುಂಡಲೀಕಪ್ಪ ಪಾರ್ವತೇರ, ಮಂಗಲಾದೇವಿ ಈಶ್ವರಚಂದ್ರ ಬೆಟಗೇರಿ ಮುಂತಾದವರು ಉಪಸ್ಥಿತರಿದ್ದರು.

ಜಾನಪದ ತಜ್ಞ ಡಾ. ಸಿ.ಕೆ. ನಾವಲಗಿಯವರು ಮಾತನಾಡುತ್ತ ಜಾನಪದ ಕಲೆಯ ಆಕರ ಸಂಪತ್ತಾಗಿ ಈಶ್ವರಚಂದ್ರ ಬೆಟಗೇರಿಯವರು ಕಂಡುಬರುತ್ತಾರೆ. ಮೂರು ತಲೆಮಾರುಗಳ ರಂಗ ಕಲಾವಿದರ ಜಾನಪದ ಕೊಂಡಿಯಾಗಿ ಸೇವೆಗೈಯ್ಯುತ್ತಲಿರುವ ಶ್ರೀಯುತರಿಗೆ 'ರಾಜ್ಯೋತ್ಸವ' ಮುಂತಾದ ಪ್ರಶಸ್ತಿ ಲಭಿಸಲೆಂದು ಹಾರೈಸಿದರು.

ಶ್ರೀಯುತರ ಷಷ್ಠಿಪೂತರ್ಿ ಸಮಾರಂಭದ ಪ್ರಯುಕ್ತ ನಗರದ ವಿವಿಧ ಸಂಘ ಸಂಸ್ಥೆಗಳ ಸಾಹಿತಿ ಕಲಾವಿದರು, ಬಂದು-ಬಳಗದರು ಬೆಟಗೇರಿ ದಂಪತಿಗಳನ್ನು ಸನ್ಮಾನಿಸಿದರು. ವಿದ್ಯಾ ಸೋಮಶೇಖರ ಮಗದುಮ್ಮ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರೊ. ಚಂದ್ರಶೇಖರ ಅಕ್ಕಿ ಸ್ವಾಗತಿಸಿದರು. ಪ್ರಾಚಾರ್ಯ ಜಯಾನಂದ ಮಾದರ ನಿರೂಪಿಸಿದರು. ಬಿ.ಎಸ್.ಎನ್.ಎಲ್. ಮನರಂಜನಾ ಕೂಟದ ಕಾರ್ಯದಶರ್ಿ ಶಿವಾನಂದ ಹಡಪದ ವಂದಿಸಿದರು.