ತೆರೆಗೆ ಅಪ್ಪಳಿಸಿದ “ಫೈಜು ಮತ್ತು ಹುಂಜ” ಘರ್ಜನೆ
ಕೊಪ್ಪಳ 03: ಇತ್ತೀಚಿಗಷ್ಟೇ ತೆರೆಗೊಂಡಿರುವ ಕನ್ನಡ ಚಲನಚಿತ್ರ ಫೈಜು ಮತ್ತು ಹುಂಜ ಈ ಚಿತ್ರವು ಸಮಾಜಕ್ಕೆ ಉತ್ತಮ ಸಂದೇಶ ಸಾರಿದೆ, ರಾಷ್ಟ್ರೀಯ ಭಾವೈಕ್ಯತೆ ಸಾರುವ ಇಂತಹ ಕನ್ನಡ ಚಲನ ಚಿತ್ರದಲ್ಲಿ ಪುಟಾಣಿ ಮಕ್ಕಳು ತಮ್ಮ ಪ್ರತಿಭೆಗಳನ್ನು ಉತ್ತಮವಾಗಿ ಪ್ರದರ್ಶನ ಮಾಡಿದ್ದಾರೆ.
ಒಟ್ಟಾರೆ ಕುಟುಂಬ ಪರಿವಾರ ಸಮೇತ ಕುಳಿತುಕೊಂಡು ನೋಡುವಂತಹ ಉತ್ತಮ ಮನರಂಜನೆ ಜೊತೆಗೆ ಒಳ್ಳೆಯ ಸಂದೇಶ ಸಮಾಜಕ್ಕೆ ನೀಡಿದ ಫೈಜು ಮತ್ತು ಹುಂಜ ಎಂಬ ಕನ್ನಡ ಚಲನಚಿತ್ರಉತ್ತಮವಾಗಿ ಮೂಡಿ ಬಂದಿದೆ ಇದರಲ್ಲಿರುವ ಎಲ್ಲಾ ಕಲಾವಿದರು ಹೊಸಬರು ಇದ್ದರೂ ಸಹ ಅವರೆಲ್ಲರೂ ತಮ್ಮತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ ಉತ್ತಮವಾಗಿ ನಟನೆ ಮಾಡಿ ಒಳ್ಳೆಯ ಸದಭಿರುಚಿಯ ಚಿತ್ರವನ್ನು ಕನ್ನಡ ಕಲಾಪೇಕ್ಷಕರಿಗೆ ನೀಡಿದ್ದಾರೆ ಎಂದು ಹೇಳಿದರೆ ಅತಿಶೋಕ್ತಿಯಾಗದು.
ಇಂತಹ ಚಿತ್ರಗಳಿಗೆ ಕಲಾಪಕ್ಷಕರ ಪ್ರೋತ್ಸಾಹ ಅಗತ್ಯವಾಗಿದೆ ಸದರಿ ಕನ್ನಡ ಚಲನಚಿತ್ರ ಶಾಲಾ ಮಕ್ಕಳಿಗೆ ತೋರಿಸುವುದು ಒಳ್ಳೆಯದು. ಈಗ ಬೇಸಿಗೆ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ಮಕ್ಕಳಿಗೆ ಚಿತ್ರವು ತೋರಿಸಲು ಕಷ್ಟ ಸಾಧ್ಯ ವಾದರೂ ಕೂಡ ಪಾಲಕರು ತಮ್ಮ ಮಕ್ಕಳಿಗೆ ಕನ್ನಡ ಚಲನ ಚಿತ್ರ ತೋರಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂತಹ ಚಿತ್ರಗಳಿಗೆ ಸರ್ಕಾರ ಸಂಪೂರ್ಣ ರಿಯಾಯಿತಿ ನೀಡಿ ಸರ್ಕಾರವೇ ಶುಲ್ಕ ಭರಿಸಿ ಶಾಲಾ ಮಕ್ಕಳಿಗೆ ಮತ್ತು ಅಪೇಕ್ಷೆ ಪಟ್ಟ ಕಲಾ ಪ್ರೆಕ್ಷಕರಿಗೆ ತೋರಿಸುವಂತಹ ಕೆಲಸ ಮಾಡಿದರೆ ಒಳ್ಳೆಯದು ಎಂದು ಪ್ರೇಕ್ಷಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.