ಹಿಟ್ನಾಳ್ ಪ್ರಗತಿ ಪರೀಶೀಲನೆ ಸಭೆ
ಕಾರಟಗಿ 03: ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರಟಗಿ ಹೋಬಳಿ ಮಟ್ಟದ ಪ್ರಗತಿ ಪರೀಶೀಲನೆ ಸಭೆಯಲ್ಲಿ ಜನಪ್ರಿಯ ಸಂಸದರಾದ ಕೆ ರಾಜಶೇಖರ್ ಹಿಟ್ನಾಳ್ ಭಾಗವಹಿಸಿ, ಹೋಬಳಿ ಮಟ್ಟದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರೀಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಯಾದವ್, ಯೋಜನಾಧಿಕಾರಿಗಳಾದ ರಾಘವೇಂದ್ರ, ಸಹಾಯಕ ನಿರ್ದೇಶಕರಾದ ವೈ.ವನಜಾ, ಕನಕಪ್ಪ, ಅನುಷ್ಠಾನ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾ.ಪಂ ಅಧ್ಯಕ್ಷರಾದ ಮಂಜಮ್ಮ ಭೀಮಣ್ಣ ಬೋವಿ, ವಿರೇಶ ತಳವಾರ, ರಾಘವೇಂದ್ರ ನಾಯಕ, ಪುಷ್ಪಾವತಿ ಗಾಧಿಲಿಂಗಪ್ಪ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಸೇರಿದಂತೆ ಇನ್ನಿತರ ಇಲಾಖೆಯ ಸಿಬ್ಬಂದಿಗಳಿದ್ದರು.