ರಂಗಭೂಮಿ ಪರಂಪರೆಗೆ ಬಳ್ಳಾರಿ ಜಿಲ್ಲೆಯ ಕೊಡುಗೆ ಅನನ್ಯವಾದದ್ದು: ಶ್ರೀಮರಿ ಕೊಟ್ಟೂರು
Bellary district's contribution to theater heritage is unique: Srimari Kottoor
ಲೋಕದರ್ಶನ ವರದಿ
ಬಳ್ಳಾರಿ 13: ರಂಗಭೂಮಿ ಪರಂಪರೆಗೆ ಬಳ್ಳಾರಿ ಜಿಲ್ಲೆಯ ಕೊಡುಗೆ ಅನನ್ಯವಾದದ್ದು. ಬಳ್ಳಾರಿ ರಾಘವರು ಸೇರಿದಂತೆ ಅನೇಕ ಮಹನೀಯರು ಈ ಜಿಲ್ಲೆಯ ರಂಗ ಐತಿಹ್ಯವನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ ಎಂದು ಶ್ರೀಧರಗಡ್ಡೆ ಕೊಟ್ಟೂರುಸ್ವಾಮಿ ಮಠದ ಶ್ರೀಮರಿ ಕೊಟ್ಟೂರು ದೇವರು ತಿಳಿಸಿದರು. ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ರಂಗತೋರಣ ಸಾಂಸ್ಕೃತಿಕ ಸಂಘಟನೆ ಹಮ್ಮಿಕೊಂಡಿದ್ದ "ಕಪ್ಪಗಲ್ಲು ನಾಟಕೋತ್ಸವ"ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಳ್ಳಾರಿ ರಾಘವರು ರಂಗಭೂಮಿಯ ಮೂಲಕ ಕನ್ನಡ ಹಾಗೂ ತೆಲುಗು ಭಾಷೆಯ ಸೌಹಾರ್ದತೆಗೆ ಸೇತುವೆಯಂತೆ ಕಾರ್ಯನಿರ್ವಹಿಸಿದವರು. ಜೋಳದರಾಶಿ ದೊಡ್ಡನಗೌಡರು, ಸುಭದ್ರಮ್ಮ ಮನ್ಸೂರು, ಬೆಳಗಲ್ಲು ವೀರಣ್ಣ ಸೇರಿದಂತೆ ಅನೇಕರು ರಂಗಭೂಮಿ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದರು. ಗ್ರಾಮೀಣ ಪರಿಸರದಲ್ಲಿ ನಾಟಕೋತ್ಸವ ಹಮ್ಮಿಕೊಳ್ಳುವ ಮೂಲಕ ರಂಗತೋರಣ ಸಂಸ್ಥೆಯ
ರಂಗಕಾಳಜಿಯ ಕಾರ್ಯನಿರ್ವಹಿಸಿದೆ. ಯಾವುದೇ ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಗಳು ನಗರ ಪ್ರದೇಶಕ್ಕೆ ಸೀಮಿತಗೊಳ್ಳದೆ ಹಳ್ಳಿಹಳ್ಳಿಗೆ ಪಸರಿಸುವಂತಾಗಬೇಕು. ಗ್ರಾಮೀಣರಲ್ಲಿ ಸಾಂಸ್ಕೃತಿಕ ಪರಿಸರ ಬೆಳೆಸುವ ದಿಸೆಯ ಕೆಲಸವನ್ನು ಎಲ್ಲ ರಂಗ ಸಂಸ್ಥೆಗಳು ಸಹ ಮಾಡಬೇಕು. ಅನೇಕ ವರ್ಷಗಳಿಂದ ರಂಗಸಂಸ್ಕೃತಿಯನ್ನು ಬಿತ್ತುತ್ತಿರುವ ರಂಗತೋರಣ ಸಂಸ್ಥೆ ಸೇವಾ ಕಾರ್ಯ ಶ್ಲಾಘನೀಯವಾದದ್ದು. ನಾಡಿನ ಅನೇಕ ರಂಗಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುವ ಮೂಲಕ ರಂಗಭೂಮಿಯ ಬೆಳವಣಿಗೆಗೆ ರಂಗತೋರಣ ಸಂಸ್ಥೆ ಶ್ರಮಿಸುತ್ತಿದೆ ಎಂದು ಸ್ಮರಿಸಿದ ಶ್ರೀಗಳು, ಕಪ್ಪಗಲ್ಲು ಗ್ರಾಮದಲ್ಲಿ ನಿರಂತರವಾಗಿ ನಾಟಕೋತ್ಸವ ನಡೆಯುವಂತಾಗಲಿ.
ಗ್ರಾಮಸ್ಥರು ಸಾಂಸ್ಕೃತಿಕ ಕಾರ್ಯಗಳಿಗೆ ಸಹಕರಿಸುವ ಮನೋಗುಣವನ್ನು ಬೆಳಸಿಕೊಳ್ಳಲಿ ಎಂದು ಆಶಿಸಿದರು. ಪ್ರಾಸ್ತಾವಿಕ ಮಾತನಾಡಿದ ರಂಗತೋರಣ ಸಂಸ್ಥೆಯ ಅಡವಿಸ್ವಾಮಿ, ಸಂಸ್ಥೆಯ ಈವರೆಗೆ ನಡೆಸಿರುವ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ತಿಳಿಸಿದರು. ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು, ಗ್ರಾಮದ ಮುಖಂಡರಾದ ಕೋರಿ ಬಸವರಾಜ್, ಕೆ.ಎಂ ಮಂಜುನಾಥಸ್ವಾಮಿ, ಬುಶ್ಯಪ್ಪ, ಉಪ್ಪಾರ ಬಸವರಾಜ್, ದ್ಯಾವಣ್ಣ ಉಪಸ್ಥಿತರಿದ್ದರು. ಚಂದ್ರಶೇಖರ ಆಚಾರ್ ಕಪ್ಪಗಲ್ಲು ಹಾಗೂ ಮೆಹತಾಬ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಜೇವರ್ಗಿ ರಾಜಣ್ಣ ರಚನೆ-ನಿರ್ದೇಶನದ "ಮುತ್ತಿನಂತ ಅತ್ತಿಗೆ" ನಾಟಕ ಪ್ರದರ್ಶನಗೊಂಡಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 