ಬಳ್ಳಾರಿ: ಉಪಚುನಾವಣೆ: 24 ನಾಮಪತ್ರಗಳ ಸಲ್ಲಿಕೆ

ಬಳ್ಳಾರಿ 18: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಸೋಮವಾರದವರೆಗೆ 24 ನಾಮಪತ್ರಗಳು ಸಲ್ಲಿಕೆ ಆಗಿವೆ ಎಂದು ವಿಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಶೇಖ್ ತನ್ವೀರ್ ಅಸೀಫ್ ತಿಳಿಸಿದ್ದಾರೆ.

ನಾಮ ಪತ್ರ ಸಲ್ಲಿಸಿದವರ ವಿವರ:

ಎನ್.ರಾಮಕೃಷ್ಣ ಮತ್ತು ಎಸ್.ಸುವರ್ಣ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ತಲಾ 1 ನಾಮಪತ್ರ, ಎನ್.ಎಂ.ನಬೀ ಅವರು -2 ನಾಮಪತ್ರ ಸಲ್ಲಿಕೆ (ಜೆಡಿಎಸ್), ವೆಂಕಟ್ ರಾವ್ ಘೋರ್ಪಡೆ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಆನಂದ್ ಸಿಂಗ್-2 ನಾಮಪತ್ರ (ಬಿಜೆಪಿ), ಶಬ್ಬಿರ್.ಹೆಚ್ (ಬಹುಜನ ಸಮಾಜ ಪಕ್ಷ), ಲಂಬಾಣಿ ಮಹೇಶ್ (ಉತ್ತಮ ಪ್ರಜಾಕೀಯ ಪಕ್ಷ), ಪ.ಯ.ಗಣೇಶ್ (ಕನರ್ಾಟಕ ರಾಷ್ಟ್ರ ಸಮಿತಿ), ಮಮತಾ (ನ್ಯಾಷನಲಿಸ್ಟ್ ( ರಾಷ್ಟ್ರವಾದಿ) ಕಾಂಗ್ರೆಸ್ ಪಕ್ಷ),  ಪಕ್ಷೇತರ ಅಭ್ಯಥರ್ಿಗಳಾಗಿ ಕಿಚಿಡಿ ಕೊಟ್ರೇಶ್ -2 ನಾಮಪತ್ರ, ಕವಿರಾಜು-2 ನಾಮಪತ್ರ, ರಾಮಕೃಷ್ಣ - 2 ನಾಮಪತ್ರ, ಕಂಡಕ್ಟರ್ ಪಂಪಾಪತಿ, ಮಲ್ಲಪ್ಪ ಪೂಜಾರಿ, ಪರಶುರಾಮ್ ಕಲಾಲ್, ಕೆ.ಉಮೇಶ್, ಮಾರ್ಕಂಡಪ್ಪ, ಸಿ.ಎಂ.ಮಂಜುನಾಥ್, ಅಲಿ  ಹೊನ್ನೂರ್ ತಲಾ 1 ನಾಮಪತ್ರಗಳು ಸಲ್ಲಿಸಿದ್ದಾರೆ.