ಚಿಕ್ಕೋಡಿ

ಬಂಜಾರ ಫೌಂಡೇಶನ್ ವತಿಯಿಂದ ಸಂತ ಸೇವಾಲಾಲ ಜಯಂತಿ ಆಚರಣೆ

ಬಂಜಾರ ಫೌಂಡೇಶನ್ ವತಿಯಿಂದ ಸಂತ ಸೇವಾಲಾಲ ಜಯಂತಿ ಆಚರಣೆ

ಚಿಕ್ಕೋಡಿ, 16 : ಇಲ್ಲಿನ ಬಂಜಾರ ಫೌಂಡೇಶನ್ ವತಿಯಿಂದ ಪಟ್ಟಣದ ಮರಡಿ ಬಸವಣ್ಣ ದೇವಸ್ಥಾನ ಸಭಾಭವನದಲ್ಲಿ ಸಂತ ಸೇವಾಲಾಲ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. 

ಸಮಾರಂಭದ ಮುಖ್ಯ ಅತಿಥಿಯಾಗಿ ನಿವೃತ್ತ ಶಿಕ್ಷಕ ಎನ್‌.ಪಿ. ಲಮಾಣಿ ಮಾತನಾಡಿ, ಸಂತ ಸೇವಾಲಾಲರ ಜೀವನ ಸಂದೇಶವು ಸಮಾಜಕ್ಕೆ ಶಾಂತಿ, ಸೌಹಾರ್ದತೆ ಹಾಗೂ ಸತ್ಯದ ಮಾರ್ಗವನ್ನು ತೋರಿಸುತ್ತದೆ ಎಂದು ಹೇಳಿದರು.ಚಿಕ್ಕೋಡಿ ತಾಲೂಕಾ ಬಂಜಾರ ಫೌಂಡೇಶನ್ ಅಧ್ಯಕ್ಷ ಎಂ.ಬಿ. ನಾಯಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಎಂ.ಜಿ. ನಾಯಿಕ ಸ್ವಾಗತಿಸಿದರು. ಶಂಕರ ಬೊಮ್ಮನ್ನವರ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು ಹಾಗೂ ಬಂಜಾರ ಸಮುದಾಯದ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ