ಬಣಜಿಗ ಸಮಾಜದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ! ಪ್ರಸ್ತುತ ಉನ್ನತ ಶಿಕ್ಷಣ ಲಭ್ಯ,ಆದರೆ ಸಮ್ಮಂಧಗಳು ದೂರವಾಗುತ್ತಿವೆ - ವೃತ್ತ ನೀರೀಕ್ಷಕ ಪಾಟೀಲ್

ಬಣಜಿಗ ಸಮಾಜದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ! ಪ್ರಸ್ತುತ ಉನ್ನತ ಶಿಕ್ಷಣ ಲಭ್ಯ,ಆದರೆ ಸಮ್ಮಂಧಗಳು ದೂರವಾಗುತ್ತಿವೆ - ವೃತ್ತ ನೀರೀಕ್ಷಕ ಪಾಟೀಲ್  Banajiga Samaj's Talent Award Program! Currently higher education is available, but connections are

ಲೋಕದರ್ಶನ ವರದಿ 

ಮಹಾಲಿಂಗಪುರ  04: ಇವತ್ತಿನ ಶಿಕ್ಷಣ ಉನ್ನತವಾಗಿರಬಹುದು, ಆದರೆ ನಮ್ಮದು ತಮ್ಮದು ಎನ್ನುವ ಭ್ರಾತೃತ್ವದ ಭಾವ ಕಡಿಮೆಯಾಗಿ ಸಂಬಂಧಗಳು ದೂರವಾಗುತ್ತ ನಡೆದಿರುವುದು ಸೌಹಾರ್ದ ಬದುಕಿಗೆ ಮಾರಕ ಎಂದು ರಬಕವಿ/ ಬನಹಟ್ಟಿ ತಾಲೂಕಿನ ವೃತ್ತ ನೀರೀಕ್ಷಕರಾದ ಆರ್‌.ಆರ್‌.ಪಾಟೀಲ್ ಸಮಾಜದ ವರ್ತಮಾನದಲ್ಲಾಗುತ್ತಿರುವ ಬೆಳವಣಿಗೆ ಕುರಿತು ಬೇಸರ ವ್ಯಕ್ತಪಡಿಸಿದರು. 

ಪಟ್ಟಣದ ಟೊಣಪಿನಾಥ ಸಾಂಸ್ಕೃತಿಕ ಭವನದಲ್ಲಿ ಸ್ಥಳೀಯ ಬಣಜಿಗ ಸಮಾಜದಿಂದ ಸೋಮವಾರ ನಡೆದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನ ಅಲಂಕರಿಸಿ ಮಾತನಾಡಿದ ಅವರು.ಕ್ಷಣಿಕ ಸುಖದ ಹಿಂದೆ ಬಿದ್ದಿರುವ ಮನುಷ್ಯ ಇಂದು ತನ್ನ ಸಹವರ್ತಿಗಳನ್ನು ಆದರದಿಂದ ಕಾಣುವುದನ್ನು ಬಿಟ್ಟು ವಸ್ತುಗಳ ಕಡೆಗೆ ವಾಲುತ್ತಿರುವುದು ಇದು ಒಳ್ಳೆಯ ಬೆಳವಣಿಗೆ ಅಲ್ಲ.ನಮ್ಮಲ್ಲಿ ಸಹಜ ಪ್ರೀತಿ ಬಂದಲ್ಲಿ ಮಾತ್ರ ನಾವು ಪಡೆಯುವ ಶಿಕ್ಷಣಕ್ಕೊಂದು ಅರ್ಥ ಇರುತ್ತದೆ ಎಂದರು. 

ಇನ್ನೋರ್ವ ಅತಿಥಿ ಜಮಖಂಡಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಯಶವಂತ ಕೊಕ್ಕನವರ ಮಾತನಾಡಿ, ನಾವು ಸಮಾಜದಿಂದ ಪ್ರತಿ ಫಲ ಆಶೀಸದೆ ಸಮಾಜಕ್ಕಾಗಿ, ದೇಶಕ್ಕಾಗಿ ನಮ್ಮಿಂದ ಏನು ಕೊಡುಗೆ ಸಾಧ್ಯವಿದೆ ಎಂಬ ಚಿಂತನೆ ಮಾಡಬೇಕು. ಆಗ ನಮ್ಮ ಪ್ರತಿಭೆಗೆ ಸಮ್ಮಾನ ದೊರೆಯುತ್ತದೆ.ನಾಡಿನ ಉತ್ತಮ ಪ್ರಜೆ ಆಗಲು ಉತ್ತಮ ಶಿಕ್ಷಣದ ಅವಶ್ಯಕತೆ ಇದೆ. 

ಆದ್ದರಿಂದ ವಿದ್ಯಾರ್ಥಿಗಳು ತಮ್ಮಲ್ಲಿಯ ಕೀಳರಿಮೆಯನ್ನು ತೊಡೆದು ಹಾಕಿ ಬಲವಾದ ಆತ್ಮವಿಶ್ವಾಸ ಮತ್ತು ಛಲವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಯಾವುದೇ ಅಡೆತಡೆ ಇಲ್ಲದೆ ತಾವು ಕಂಡ ಸ್ಪರ್ಧಾತ್ಮಕ ಗುರಿಯನ್ನು ತಲುಪಬಹುದು.ಇತ್ತಿಚಿನ ದಶಕದಲ್ಲಿ ಅಶ್ಲೀಲ ಸಾಹಿತ್ಯ ಒಳಗೊಂಡ ಹಾಡುಗಳು ಹಾಗೂ ದ್ವೇಷ ಕಾರುವ ಸಿನಿಮಾಗಳ ಪ್ರಭಾವ ಯುವಕರನ್ನು ದಾರಿತಪ್ಪುತ್ತಿದ್ದು, ಇವುಗಳಿಂದ ದೂರ ಇರಬೇಕು.ಇಲ್ಲವಾದಲ್ಲಿ ತಮ್ಮ ಬದುಕು ಅಂಧಕಾರದಲ್ಲಿ ಮುಳುಗಿ ಹೋಗುವ ಆತಂಕವಿದೆ ಎಂದು ವಾಸ್ತವ ಕಟು ಸತ್ಯವನ್ನು ಯುವ ಮಿತ್ರರಿಗೆ ತಿಳಿಸಿದರು. 

ಹೊಳಬಸು ಬಾಳಶೆಟ್ಟಿ, ರಮೇಶ ಹರಕಂಗಿ ಮಾತನಾಡಿದರು. ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಕ್ಕೊಂಡ ವಿದ್ಯಾರ್ಥಿಗಳನ್ನು, ಹಾಗೂ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಕುಳ್ಕೊಳ್ಳಿ ಅಧ್ಯಕ್ಷತೆ ವಹಿಸಿದ್ದರು,ವೇದಿಕೆ ಮೇಲೆ ಮೂಲ ಕಸುಬು ಬಿಂಬಿಸುವ ತಕ್ಕಡಿ ರಾರಾಜಿಸುತ್ತಿತ್ತು. 

ಈ ಸಂದರ್ಭದಲ್ಲಿ .ಯಉಪಾಧ್ಯಕ್ಷ ಬಸವರಾಜ ಘಟ್ನಟ್ಟಿ ಈಶ್ವರ ಬಿದರಿ, ಬಸವರಾಜ ಢಪಳಾಪುರ, ಮಹಾದೇವಪ್ಪ ಅಂಗಡಿ, ರಾಚಪ್ಪ ಕುಳ್ಕೊಳ್ಳಿ, ಬಸವರಾಜ ರಾಯರ,ಮಲ್ಲು ಕುಳ್ಳೋಳಿ,ಪ್ರವೀಣ, ಮಹಾಲಿಂಗಪ್ಪ ಅವರಾದಿ, ಚನಬಸಪ್ಪ ಹೊಸೂರ,ವಿ.ಎಸ್‌.ಅಂಗಡಿ, ಮಹಾಂತೇಶ ಫನಸಲ್ಕರ್,ಗಂಗಾಧರ ಸಕ್ರಿ,ಅಶೋಕ.ಜ.ಅಂಗಡಿ,ಶಿವು ಪಟ್ಟೆದ, ಬಸವರಾಜ ಕರೆಹೊನ್ನ,ಶಿವಾನಂದ ಗೋಕಾವಿ, ಕುಮಾರ ವಾಲಿ,ಬಸು ಕಲಾದಗಿ, ಮಹಾಲಿಂಗಪ್ಪ ಹೊಸೂರ,ಮಹಾಂತೇಶ ಘಟ್ನಟ್ಟಿ, ಸುರೇಶ ಕಡಕೋಳ, ಶೇಖರ ಬಂಡಿ, ಶ್ರೀಕಾಂತ ಬಂಡಿ, ಬಸವರಾಜ ಮುಂಗರವಾಡಿ, ಪ್ರಕಾಶ ಸಗರಿ, ವಿರೇಂದ್ರ ಜಿರಲಿ, ಮಹಾದೇವ ತಡಸಲ,ಅಶೋಕ ಕೆರೂರ,ಶಶಿಕಲಾ ಅವರಾದಿ, ಶೈಲಾ ಶೆಟ್ಟರ, ಸ್ನೇಹಲ್ ಅಂಗಡಿ,ಪಲ್ಲವಿ ಘಟ್ನಟ್ಟಿ, ಮಹಾದೇವಿ ಹುಕ್ಕೇರಿ,ರಂಜನಾ ವಜ್ಜರ್ಮಟ್ಟಿ, ಪ್ರೀತಿ ಕಲ್ಯಾಣಿ, ಶಿವಲೀಲಾ ವಜ್ಜರ್ಮಟ್ಟಿ, ಶಾಂತಾಬಾಯಿ ಗೋಕಾವಿ ಇದ್ದರು.