ಬಕ್ರೀದ್ ಆಚರಣೆ : ಸಾಮೂಹಿಕ ಪ್ರಾರ್ಥನೆಯಲ್ಲಿ ಮೆಹಬೂಬ್ ಖಾನ್ ಭಾಗಿ

ಬಕ್ರೀದ್ ಆಚರಣೆ : ಸಾಮೂಹಿಕ ಪ್ರಾರ್ಥನೆಯಲ್ಲಿ ಮೆಹಬೂಬ್ ಖಾನ್ ಭಾಗಿ Bakrid celebrations: Mehboob Khan participates in mass prayers

ಕೊಪ್ಪಳ 28: ಮುಸ್ಲಿಂ ಸಮುದಾಯದ ಪವಿತ್ರ ತ್ಯಾಗ ಬಲಿದಾನದ ಪ್ರತೀಕ ಬಕ್ರೀದ್ ಹಬ್ಬದ ಪ್ರಯುಕ್ತ ನಗರದ ಈದ್ಗಾ ಮೈದಾನದಲ್ಲಿ ಗುರುವಾರ ಬೆಳಿಗ್ಗೆ ಜರುಗಿದ ಸಾಮೂಹಿಕ ವಿಶೇಷ ಪ್ರಾರ್ಥನೆಯಲ್ಲಿ ಬಿ ಎಸ್ ಪಿ ಪಕ್ಷದ ಕೊಪ್ಪಳ ಜಿಲ್ಲಾ ಉಸ್ತುವಾರಿ ಯಾಗಿರುವ ಮುಖಂಡ ಮೆಹಬೂಬ್ ಖಾನ್ ರವರು ಭಾಗಿಯಾಗಿ ಸಾಮೂಹಿಕ ವಿಶೇಷ ಪ್ರಾರ್ಥನೆ ನಡೆಸಿಕೊಟ್ಟ ಧರ್ಮ ಗುರು ಖಾಜಿ ಆಸಿಫ್ ರವರನ್ನು ಭೇಟಿ ಮಾಡಿ ಸನ್ಮಾನಿಸಿ ಶುಭ ಕೋರಿ ಪರಸ್ಪರ ಹಬ್ಬದ ಶುಭಾಶಯಗಳು ವಿನಿಮಯ ಮಾಡಿಕೊಂಡರು,

ಹಬ್ಬಗಳು ಭಾವೈಕ್ಯತೆಯ ಸಂಕೇತವಾಗಿದೆ ಎಲ್ಲರೂ ಪರಸ್ಪರ ಕೂಡಿಕೊಂಡು ಹಬ್ಬಗಳ ಆಚರಣೆ ಮಾಡುವುದರ ಜೊತೆಗೆ ಸಹೋದರತ್ವ ಭಾವನೆಯನ್ನು ಪ್ರತಿಯೊಬ್ಬರಲ್ಲಿ ಮೂಡಿಸುವಂತಹ ಕೆಲಸ ಮಾಡಬೇಕು ಎಂದು ಬಿಎಸ್ಪಿ ಪಕ್ಷದ ಕೊಪ್ಪಳ ಜಿಲ್ಲಾ ಉಸ್ತುವಾರಿ ಮಹಬೂಬ್ ಖಾನ್ ಅಭಿಪ್ರಾಯಪಟ್ಟರು,ಈ ಸಂದರ್ಭದಲ್ಲಿ ಅನೇಕ ಜನ ಸಮಾಜದ ಮುಖಂಡರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು