ಮಧ್ಯಾಹ್ನದ ಬಿಸಿಯೂಟ ಮಕ್ಕಳಲ್ಲಿ ಸಮಾನತೆ ಬೆಳೆಸುವ ಯೋಜನೆ ಬಿಆರ್ಟಿ ಅಧಿಕಾರಿ
BRT officer plans to promote equality among children with midday hot meals
ಲೋಕದರ್ಶನ ವರದಿ
ಹಾವೇರಿ 1: ಮಧ್ಯಾಹ್ನದ ಬಿಸಿಯೂಟ ಯೋಜನೆಯು ಜಾತಿ, ಧರ್ಮ, ಭೇದಭಾವವಿಲ್ಲದೆ ಎಲ್ಲ ಮಕ್ಕಳನ್ನು ಒಂದೇ ಸಾಲಿನಲ್ಲಿ ಕುಳಿತು ಸಂತೋಷದಿಂದ ಊಟ ಮಾಡುವಂತೆ ಮಾಡುತ್ತಿದ್ದು, ಇದು ಮಕ್ಕಳಲ್ಲಿ ಸಾಮಾಜಿಕ ಸಮಾನತೆ ಹಾಗೂ ರಾಷ್ಟ್ರೀಯ ಏಕತೆಯ ಮನೋಭಾವ ಬೆಳೆಸುವ ಅತ್ಯುತ್ತಮ ಯೋಜನೆಯಾಗಿದೆ ಎಂದು ಬಿಆರ್ಟಿ ತಾಲೂಕು ಶಿಕ್ಷಣಾಧಿಕಾರಿ ಸಿ.ವೈ. ಹೊಸಮನಿ ಹೇಳಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಸಿಯೂಟ ಯೋಜನೆಯ ಮಹತ್ವವನ್ನು ವಿವರಿಸಿದರು. ಮುಖ್ಯ ಅಡುಗೆದಾರರಿಗೆ ಸನ್ಮಾನ ಹಿ ಶಾಲಾ ಸಂಸತ್ತಿಗೆ ಚಾಲನೆ ಕಾರ್ಯಕ್ರಮದಲ್ಲಿ ಮುಖ್ಯ ಅಡುಗೆದಾರರಾದ ಶ್ರೀಮತಿ ಕಮಲವ್ವ ಕೇಶಪ್ಪ ಕೋಣನವರ ಅವರಿಗೆ ನಿವೃತ್ತಿ ಪ್ರಯುಕ್ತ ಬೀಳ್ಕೊಡುಗೆ ನೀಡಿ ಸನ್ಮಾನಿಸಲಾಯಿತು. ಇದೇ ವೇಳೆ ಶಾಲೆಯ ನೂತನ ಶಾಲಾ ಸಂಸತ್ತಿಗೆ ಅಧಿಕೃತ ಚಾಲನೆ ನೀಡಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 