ಬಿಜೆಪಿ ಅವನತಿಯ ಯುಗ ಇಂದಿನದಲೇ ಪ್ರಾರಂಭ: ಡಿ ಕೆ ಶಿವಕುಮಾರ
BJP's era of decline begins today: DK Shivakumar
ಬೆಳಗಾವಿ ಸುವರ್ಣ ಸೌಧ 17: ಬಿಜೆಪಿ ಕೆಟ್ಟ ಹಾದಿ ತುಳಿದು, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ ಗಾಂಧಿ ಹಾಗೂ ಅವರ ಕುಟುಂಬದ ಮೇಲೆ ಮತ್ತು ವಿರೋಧ ಪಕ್ಷಗಳ ಮೇಲೆ ಅಕ್ರಮ ಇಡಿ ಕೇಸ್ ದಾಖಲಿಸಿ ಸರ್ಕಾರಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ನಮ್ಮ ಪಕ್ಷದ ಪ್ರಮುಖರ ಮೇಲೆ ಕೊಟ್ಟಿ ಕೇಸ್ ದಾಖಲಿಸಿ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸಲು ವಾಮ ಮಾರ್ಗ ಅನುಸರಿಸಿ ನಿನ್ನೆ ದೆಹಲಿ ವಿಶೇಷ ನ್ಯಾಯಾಲಯ ನ್ಯಾಷನಲ್ ಹೆರಾಲ್ಡ್ ಕೇಸ್‌ನ್ನು ಸರಿಯಾದ ದಾಖಲೆ ನೀಡದ ಕಾರಣ ವಜಾಗೊಳಿಸಿದ್ದು ಇದು ಇಂದಿನಿಂದಲೇ ಬಿಜೆಪಿ ಪಕ್ಷದ ಅವನತಿಯ ಆರಂಭ ಆಗಲಿದೆ ಎಂದು ರಾಜ್ಯದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಹೇಳಿದರು.
ಅವರು ಸುವರ್ಣ ಸೌಧದ ಮುಂದೆ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆ ಮುಂದೆ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವೇಳೆ ಪತ್ರಕರ್ತರನ್ನು ಉದ್ದೇಸಿಸಿ ಮಾತನಾಡಿ ಮಹಿಳಾ ಮತ್ತು ಮಕ್ಕಳ ಸಚಿವೆ ಗ್ರಹಲಕ್ಷ್ಮಿ ಯೋಜನೆಯನ್ನು ಸರಿಯಾಗಿ ಮಹಿಳೆಯರಿಗೆ ತಲುಪಿಸಿದ್ದಾರೆ. ಅವರೇನು ಗ್ರಹಲಕ್ಷ್ಮಿ ದುಡ್ಡನ್ನು ಮನೆಗೆ ಒಯ್ದಿದ್ದಾರೆ? ಬನ್ನಿ ಸದನದಲ್ಲಿ ಇದರ ಬಗ್ಗೆ ಮಾತಾಡೋಣ. ಲಕ್ಷ್ಮೀ ಈ ಜಿಲ್ಲೆಯ ಶಾಸಕಿ ಮತ್ತು ಸಚಿವೆ ಅವರ್ಯಾಕೆ ಸಿಗತ್ತಾ ಇಲ್ಲಾ ಅಂತಾ ಕೇಳತೀರಾ ಇವರು ಇಲ್ಲೇ ಇದ್ದಾರೆ ಉತ್ತರ ಕೊಡ್ತಾರೆ ಎಂದರು.
ಇಡಿ ಬಳಸಿ ನನ್ನ ಮೇಲೆ ಕೇಸ್ ಹಾಕಿದ್ದಾರೆ ಹೆದರಿಸಲು ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 