ಪೋಕ್ಸೋ ಪ್ರಕರಣ ಹೆಚ್ಚಳ ತಡೆಗಟ್ಟಲು ಅರಿವು ಅಗತ್ಯ

Awareness is necessary to prevent increase in POCSO cases

ಲೋಕದರ್ಶನ ವರದಿ 

ಪೋಕ್ಸೋ ಪ್ರಕರಣ ಹೆಚ್ಚಳ ತಡೆಗಟ್ಟಲು ಅರಿವು ಅಗತ್ಯ 

ಕೊಪ್ಪಳ 15: ನಗರದ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಎನ್‌.ಎಸ್‌.ಎಸ್‌. ಘಟಕ ಮತ್ತುಲೈಂಗಿಕ ಕಿರುಕುಳ ದೂರು ಮತ್ತುತಡೆಗಟ್ಟುವಿಕೆ ಸಮಿತಿಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕೊಪ್ಪಳ ಇವರ ಸಹಯೋಗದಲ್ಲಿ ‘ಪೋಕ್ಸೋ ಕಾಯ್ದೆ ಅರಿತು ಸುರಕ್ಷಿತ ನಾಳೆಗೋಸ್ಕರ’ (ಗಟಿಜಜಢಿಣಚಿಟಿಜಟಿರ ಣಜ ಕಓಅಖಓ ಂಛಿಣ: ಖಿಠಚಿಡಿ ಛಿಚಿಜಿಜಡಿ ಣಠಠಡಿಠ)ಎಂಬ ವಿಷಯದ ಮೇಲೆ ಒಂದು ದಿನದರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ಈ ವಿಚಾರಣ ಸಂಕಿರಣವನ್ನು ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಸಂಗಪ್ಪದರಗದ ಅವರು ಉದ್ಘಾಟಿಸಿದರು. ತಮ್ಮ ಭಾಷಣದಲ್ಲಿ ಪೋಕ್ಸೋಕಾಯ್ದೆಯ ಅರಿವು ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತುಂಬಾಅಗತ್ಯ. ಈ ಕಾಯ್ದೆ ಮಕ್ಕಳ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಿದೆ ಎಂದರು.  

ಈ ವಿಚಾರ ಸಂಕಿರಣದ ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕರ್ನಾಟಕರಾಜ್ಯ ಮಹಿಳಾ ಬರಹಗಾರರ ಕಾರ್ಯದರ್ಶಿಗಳಾದ ಸಾವಿತ್ರಿ ಮುಜುಮದಾರಅವರು ಮಾತನಾಡುತ್ತಾ ಪೋಕ್ಸೊ ಪ್ರಕರಣಗಳಿಂದ ಕುಟುಂಬ ಸಮಾಜದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ವಿವರಿಸಿ ಯುವಜನತೆ ಸಮಾಜವನ್ನುತಿದ್ದುವ ಮತ್ತುಘನತೆಯನ್ನು ಹೆಚ್ಚಿಸುವಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂದರು. ಕೊಪ್ಪಳ ಜಿಲ್ಲೆಯಲ್ಲಿ ಪೋಕ್ಸೊ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. 

ಈ ವಿಚಾರ ಸಂಕಿರಣದಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದಡಾ. ಚನ್ನಬಸವ ವಹಿಸಿದ್ದರು. ಕಾರ್ಯಕ್ರಮದಲ್ಲಿಆಯೋಜಕರಾದಎನ್‌.ಎಸ್‌.ಎಸ್‌. ಕಾರ್ಯಕ್ರಮಾಧಿಕಾರಿಗಳಾದ ಶರಣಪ್ಪಚೌವ್ಹಾಣ, ಡಾ. ಜಾಲಿಹಾಳ ಶರಣಪ್ಪ, ಲೈಂಗಿಕ ಕಿರುಕುಳ ದೂರು ಮತ್ತುತಡೆಗಟ್ಟುವಿಕೆ ಸಮಿತಿ ಸಂಯೋಜಕರಾದ ಶ್ರೀದೇವಿ, ಐಕ್ಯೂಎಸಿ ಸಂಯೋಜಕರಾದಡಾ. ಅರುಣಕುಮಾರ, ಉಪಪ್ರಾಚಾರ್ಯರಾದಡಾ. ಕರಿಬಸವೇಶ್ವರ ಬಿ, ಸಹಪ್ರಾಧ್ಯಾಪಕರಾದ ಶರಣಬಸಪ್ಪ ಬಿಳಿಎಲಿ, ಡಾ. ಶಶಿಕಾಂತ ಉಮ್ಮಾಪುರೆ, ಡಾ. ಪ್ರಶಾಂತ ಕೊಂಕಲ, ಮಹೇಶ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.