ಮಾನವೀಯತೆ ಮೆರೆದ ಸಮಾಜ ಸೇವಕ ಅಸ್ಕಿ
Aski, a social worker with a humanitarian bent
ತಾಳಿಕೋಟಿ 09: ಪಟ್ಟಣದ ಭೂಮಿಕಾ ಹೋಟೆಲದಲ್ಲಿ ಇತ್ತೀಚಿಗೆ ಸಿಲೆಂಡರ್ ಗ್ಯಾಸ್ ಸೋರಿಕೆಯಿಂದಾಗಿ ತೀವ್ರವಾಗಿ ಗಾಯಗೊಂಡ ಕಟ್ಟಡ ಕಾರ್ಮಿಕರಾದ ಶಕೀಲ್ ಕುಂಬಾರವಾಡಿ ಹಾಗೂ ಬಶೀರ ಕಡದರಾಳ ಇವರು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಅಸ್ಕಿ ಫೌಂಡೇಶನ್ ಕೊಣ್ಣೂರ ಅಧ್ಯಕ್ಷ ಸಿ.ಬಿ.ಅಸ್ಕಿ ಅವರು ಸಾಂತ್ವನ ತಿಳಿಸಿ ಎರಡೂ ಕುಟುಂಬಗಳಿಗೆ ತಲಾ ರೂ.50,000 ಸಾವಿರ ಆರ್ಥಿಕ ಸಹಾಯ ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ. ಸೋಮವಾರ ಪಟ್ಟಣದ ಬಿಸ್ತಿ ಓಣಿಯಲ್ಲಿರುವ ಸಮುದಾಯ ಭವನದಲ್ಲಿ ಸಮಾಜದ ಗಣ್ಯರ ಸಮ್ಮುಖದಲ್ಲಿ ಅವರು ಅಗ್ನಿ ಅವಘಡದಲ್ಲಿ ಮೃತಪಟ್ಟ ಶಕೀಲ ಕುಂಬಾರವಾಡಿ ಹಾಗೂ ಬಸೀರ ಖಡದರಾಳ ಇವರ ಕುಟುಂಬದ ಸದಸ್ಯರಿಗೆ ತಲಾ ರೂ.50,000 ಸಾವಿರ ಆರ್ಥಿಕ ಸಹಾಯವನ್ನು ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಮೃತಪಟ್ಟ ಕಟ್ಟಡ ಕಾರ್ಮಿಕರ ಎರಡೂ ಕುಟುಂಬಗಳು ಕಡು ಬಡತನದ ಸ್ಥಿತಿಯಲ್ಲಿವೆ. ಅವರಿಗೆ ಸಣ್ಣ ಸಣ್ಣ ಮಕ್ಕಳಿದ್ದಾರೆ ಅವರ ಸ್ಥಿತಿ ನೋಡಿದರೆ ಕರುಳು ಕಿತ್ತಿ ಬಾಯಿಗೆ ಬರುತ್ತದೆ ಇದು ವಿಧಿ ಲಿಖಿತ ಆದರೆ ಅವರನ್ನು ಅವಲಂಬಿಸಿದ ಕುಟುಂಬದ ಸದಸ್ಯರಿಗೆ ಎಲ್ಲ ರೀತಿಯಿಂದಲೂ ಸಹಕರಿಸುವುದು ನಮ್ಮ ಕರ್ತವ್ಯವಾಗಿದೆ ಇದನ್ನು ನಾನು ಇಲ್ಲಿ ನಿರ್ವಹಿಸುತ್ತಿದ್ದೇನೆ ಇವರು ಕಟ್ಟಡ ಕಾರ್ಮಿಕರಾಗಿರುವುದರಿಂದ ಕಾರ್ಮಿಕ ಇಲಾಖೆಯಿಂದ ಇವರಿಗೆ ಆರ್ಥಿಕ ನೆರವು ಸಿಗುತ್ತದೆ ಇದಕ್ಕಾಗಿ ಸಮಾಜದ ಪ್ರಮುಖರು ಪ್ರಯತ್ನಿಸಬೇಕು, ನಾನು ಸಹ ಶಾಸಕ ಅಪ್ಪಾಜಿ ನಾಡಗೌಡರಿಗೆ ಈ ನಿಟ್ಟಿನಲ್ಲಿ ಮಾತನಾಡಿ ವಿನಂತಿಸಿಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ಈ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನನ್ನಿಂದ ಸಾಧ್ಯವಾದಷ್ಟು ಸಹಕಾರವನ್ನೂ ನೀಡುತ್ತೇನೆ. ಭಗವಂತ ಈ ಸಂಕಷ್ಟವನ್ನು ಸಹಿಸುವ ಶಕ್ತಿಯನ್ನು ಕುಟುಂಬದ ಸದಸ್ಯರಿಗೆ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದರು.
ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಶಕೀಲ್ ಅಹ್ಮದ್ ಖಾಜಿ ಅವರು ಮಾತನಾಡಿ ಸಮಾಜ ಸೇವಕ ಸಿ.ಬಿ.ಅಸ್ಕಿ ಅವರು ಈಗಾಗಲೇ ತಮ್ಮ ಫೌಂಡೇಶನ್ ದಿಂದ ಸಮಾಜದಲ್ಲಿರುವ ಸಾಕಷ್ಟು ಬಡವರಿಗೆ ಜಾತಿ ಮತ ಭೇದವಿಲ್ಲದೆ ತಮ್ಮಿಂದಾದಷ್ಟು ಆರ್ಥಿಕ ಸಹಾಯವನ್ನು ನೀಡುತ್ತಿದ್ದಾರೆ ಅವರೊಬ್ಬ ಹೃದಯ ಶ್ರೀಮಂತಿಕೆ ಹೊಂದಿದ ವ್ಯಕ್ತಿಯಾಗಿದ್ದಾರೆ ಅವರ ಈ ನಿಸ್ವಾರ್ಥ ಸೇವೆ ಸಮಾಜದಲ್ಲಿರುವ ಇತರರಿಗೂ ಅನುಕರಣೀಯವಾಗಿದೆ ಎಂದರು. ಈ ಸಮಯದಲ್ಲಿ ಪ್ರಮುಖರಾದ ಆದಮಸಾಬ ಕೊಡೆಕಲ್ಲ, ಮೋದಿನಸಾ ನಗಾರ್ಚಿ, ಮೆಹಬೂಬಶಾ ಮಕಾಂದಾರ,ಗೌಸ ನಾಸರ್, ರಾಜಅಹಮದ್ ಕಲಬುರ್ಗಿ,ಬಾಬುಸಾಬ ಮುದ್ನಾಳ,ಕಾಸೀಮ ಅಬಾಲೆ, ಮೊಹಮ್ಮದ್ ಶಫೀಕ ಇನಾಮದಾರ, ಅಬ್ದುಲ್ ರಜಾಕ ಕೊಡೆಕಲ್ಲ,ಬಸೀರ ಯಕ್ಕೇಲಿ, ಉಮರಸಿಂಗ್ ದೇವಿ,ಗೋಪಾಲ ಕಟ್ಟಿಮನಿ, ದೀಲೀಪ ಹಜೇರಿ, ದಸ್ತಗೀರ ಕಲಬುರ್ಗಿ, ಮುರ್ತುಜಾ ಕುಂಬಾರವಾಡಿ, ರಜಾಕ್ ಕುಂಬಾರವಾಡಿ ಮತ್ತಿತರರು ಇದ್ದರು.
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ 