ಜಿ.ಕನ್ನಡ ಧಾರವಾಹಿಗಳ ಪ್ರಮುಖ ನಟರ ಆಗಮನ : 16ಕ್ಕೆ ಸರಿಗಮ ಸ್ಪರ್ಧಿಗಳ ಹಾಡುಗಾರಿಕೆ
Arrival of leading actors of G. Kannada serials: Singing of Sarigama contestants at 16
ಲೋಕದರ್ಶನ ವರದಿ
ಗಂಗಾವತಿ 12: ಜಿ ಕನ್ನಡ ಚಾನಲ್ಲಿನ ಜನ ಮೆಚ್ಚಿನ ಧಾರವಾಹಿ ಅಣ್ಣಯ್ಯ 500 ಸಂಚಿಕೆ ಪೂರೈಸುತ್ತಿರುವ ಹಿನ್ನಲೆಯಲ್ಲಿ ಸಂಭ್ರಮಾಚರಣೆಯ ಪ್ರಯುಕ್ತ ಬತ್ತದ ನಾಡು ಗಂಗಾವತಿಯಲ್ಲಿ “ಜೀ ಕನ್ನಡ ಜಾತ್ರೆ'' ಯನ್ನು ನಗರದ ತಾಲೂಕು ಕ್ರೀಡಾಂಗಣದಲ್ಲಿ ನಾಳೆ ಜೂನ್ 14 ರಂದು ರವಿವಾರ ಸ0ಜೆ 5-30ಕ್ಕೆ ಆಯೋಜಿಸಲಾಗುತ್ತಿದ್ದು ಜಿ.ಕನ್ನಡ ಧಾರವಾಹಿಗಳ ಅನೇಕ ನಟನಟಿಯರು ಆಗಮಿಸಲಿದ್ದಾರೆ. ಈ ಸಂಭ್ರಮಾಚರಣೆಯಲ್ಲಿ ಅಣ್ಣಯ್ಯ ಧಾರಾವಾಹಿಯ ಶಿವಣ್ಣ ಪಾತ್ರಾಧಾರಿ ವಿಕಾಸ್ ಉತ್ತಯ್ಯ'' ಹಾಗು “ಪಾರು ಆಗಿ ನಟಿಸ್ತಿರೋ ನಿಶಾ ಕೃಷ್ಣನ್'' ಇವ್ರ ಜೊತೆ “ಜಿಮ್ ಸೀನ, ವೀರಭದ್ರ, ಶಾರದಮ್ಮ, ಪೆದ್ದ ಮನು ಹಾಗು ಅಣ್ಣಯ್ಯನ ತಂಗಿಯರಾದ ರತ್ನ, ರಶ್ಮಿ, ರಾಣಿ, ರಮ್ಯ'' ಸೇರಿದಂತೆ “ಆದಿಲಕ್ಷಿ-್ಮ ಪುರಾಣ'' ಧಾರವಾಹಿಯ ನಟನಟಿಯರು ಪಾಲ್ಗೊಳ್ಳುತ್ತಿದ್ದಾರೆ,
ನಿರೂಪಣೆಯನ್ನ “ಅನುಶ್ರೀ'' ನಡೆಸಿಕೊಡುತ್ತಿದ್ದು, ಕಾರ್ಯಕ್ರಮಕ್ಕಾಗಿ “ಮಧ್ಯಾಹ್ನ 2 ಗಂಟೆಯಿಂದ ರಂಗೋಲಿ ಸ್ಪರ್ಧೆ''ಯಲ್ಲಿ ಭಾಗವಹಿಸಲು ಅವಕಾಶವಿದೆ. ಅದೇ ಸಮಯದಲ್ಲಿ “ಅಣ್ಣಯ್ಯ ಮತ್ತು ಆದಿಲಕ್ಷಿ-್ಮ ಪುರಾಣ ಧಾರಾವಾಹಿಗಳ ತಾರೆಗಳೊಂದಿಗೆ ಆಟಗಳಾದ ಹಗ್ಗ ಜಗ್ಗಾಟ, ತೆಂಗಿನಕಾಯಿ ಸುಲಿಯೋದು, ಮಡಕೆ ಒಡೆಯೋದು, ಗೋಣಿ ಚೀಲ ಓಟ, ನಿ0ಬೆ ಚಮಚ ರೇಸ್ ಇತರೆ ಆಟೋಟಗಳು ಜರುಗಲಿವೆ. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುತ್ತಿದೆ.
‘ಜೂನ್ 16 ರಂದು ಸರಿಗಮಪ ಲಿಟಲ್ ಚಾಂಪ್ಸ್ ಸ್ಪರ್ಧಿಗಳ ಹಾಡುಗಾರಿಕೆ ಸಂಜೆ 5.30ಕ್ಕೆ ತಾಲೂಕಾ ಕ್ರೀಡಾಂಗಂಣದಲ್ಲಿ ಜರುಗಲಿದ್ದು, ಜನಪ್ರೀಯ ಗಾಯಕರಾದ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್, ಆಸ್ಕರ್ ಪ್ರಶಸ್ತಿ ವಿಜೇತ, ಕಂಚಿನ ಕಂಠದ ಗಾಯಕ ವಿಜಯ ಪ್ರಕಾಶ್ ಮತ್ತು ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ'' ಆಗಮಿಸಲಿದ್ದು ಕಾರ್ಯಕ್ರಮದ ನಿರೂಪಣೆ ಅನುಶ್ರೀ ನೆರವೇರಿಸಿಕೊಡಲಿದ್ದಾರೆ. ನಿಮ್ಮ ನೆಚ್ಚಿನ ಜೀ ಕನ್ನಡದ ತಾರೆಯರನ್ನು ಭೇಟಿಯಾಗಲು ಹಾಗು ಅವರ ಜೊತೆಗೆ ಸ್ಪರ್ಧೆಯಲ್ಲಿ ಪಾಲ್ಗೊಂಡು ಕುಣಿದು ಮನರಂಜಿಸಲು 'ಜೀ ಕನ್ನಡ ಜಾತ್ರೆ' ಯಲ್ಲಿ ಭಾಗವಹಿಸಿ. ಪ್ರವೇಶ ಉಚಿತವಾಗಿದ್ದು, ಪಾಸ್ ನೀಡಲಾಗುತ್ತಿದೆ ಮೊದಲು ಆಗಮಿಸಿದವರಿಗೆ ಆದ್ಯತೆ ನೀಡಲಾಗುವುದು ಎಂದು ಜಿ.ವಾಹಿನಿ ತಿಳಿಸಿದೆ.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 