ಚಿಕ್ಕೋಡಿ

ಮಜಲಟ್ಟಿ ಸರಕಾರಿ ಕಾಲೇಜು ಅಭಿವೃದ್ಧಿಗೆ ಸದಾ ಸಿದ್ಧ: ಶಾಸಕ ಐಹೊಳೆ

ಮಜಲಟ್ಟಿ ಸರಕಾರಿ ಕಾಲೇಜು ಅಭಿವೃದ್ಧಿಗೆ ಸದಾ ಸಿದ್ಧ: ಶಾಸಕ ಐಹೊಳೆ

ಲೋಕದರ್ಶನ ವರದಿ 

ಮಾಂಜರಿ 08: ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಸರಕಾರಿ ಕಾಲೇಜು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಶ್ರೇಯ ಇಲ್ಲಿನ ಶಿಕ್ಷಕರು ಹಾಗು ಪ್ರಾಂಶುಪಾಲರಿಗೆ ಸಲ್ಲಿತ್ತದೆ. ದಿ. ಬಿ ಆರ್ ಸಂಗಪ್ಪಗೋಳ ಹಾಕಿ ಕೊಟ್ಟ ಭದ್ರ ಬುನಾದಿಯೊಂದಿಗೆ ರಾಜ್ಯದಲ್ಲಿ ವಿಶೇಷ ಛಾಪು ಮೂಡಿಸುತ್ತಿರುವ ಮಜಲಟ್ಟಿ ಸರಕಾರಿ ಕಾಲೇಜು ಅಭಿವೃದ್ಧಿಗೆ ಸದಾ ಸಿದ್ಧ ಎಂದು  ರಾಯಬಾಗ ಶಾಸಕ ಡಿ ಎಮ್ ಐಹೊಳೆ ಹೇಳಿದರು. 

ಇಂದು  ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಲಾದ ಪಿಯುಸಿಯಲ್ಲಿ ಸಾಧನೆ ಗೈದ ವಿಧ್ಯಾರ್ಥಿಗಳಿಗೆ ಶಾಸಕರಿಂದ ಲ್ಯಾಪ್‌ಟಾಪ್ ವಿತರಣೆ, ಕಾಲೇಜಿ ಪ್ರಾಂಶುಪಾಲರಾದ ಆನಂದ ಕೊಳಿ ಸೇವಾ ನಿವೃತ್ತಿ ಸನ್ಮಾನ ಹಾಗು  ಪ್ರಥಮ ವರ್ಷದ ವಿಧ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ  ಅವರು ಮಾತನಾಡಿದರು, ಪ್ರತಿವರ್ಷ ಪಿಯುಸಿಯಲ್ಲಿ ರಾಜ್ಯ ಮಟ್ಟಕ್ಕೆ ರಾ​‍್ಯಂಕ್ ಬಂದ ಮಕ್ಕಳಿಗೆ ಲ್ಯಾಪ್ ಟಾಪ್ ನೀಡಿ ಗೌರವಿಸಲಾಗುವದು ಎಂದರು.ಸ್ಥಳಿಯರ ಸಹಕಾರ, ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಶ್ರಮದಿಂದಗಿ ಕಾಲೇಜು ಗುಣ ಮಟ್ಟದ ಶಿಕ್ಷಣಕ್ಕೆ ರಾಜ್ಯಾದ್ಯಂತ ಗುರುತಿಸುವಂತಾಗಿದೆ. ಮತ್ತಷ್ಟು ಅನುದಾನ ನೀಡಲು ನಾನು ಸಿದ್ದ, ಆ ನಿಟ್ಟಿನಲ್ಲಿ ಕಾಲೇಜು ದೇಶಾದ್ಯಂತ ಹೆಸರು ಮಾಡಲಿ ಎಂದು ಹಾರೈಸಿದರು. 

ನಿವೃತ್ತ ಪ್ರಾಂಶುಪಾಲರಾದ ಆನಂದ ಕೊಳಿ ಸನ್ಮಾನ ಸ್ವಿಕರಿಸಿ ಮಾತನಾಡಿ, ಕಾಲೇಜಿನ ಯಶಸ್ಸಿ ಪ್ರತಿಯೋಬ್ಬರು ಕಾರಣೀಕರ್ತರಾಗಿರುತ್ತಾರೆ.  ಶಾಸಕರು ಕಾಲೇಜಿನ ಎಲ್ಲ ಅಭಿವೃದ್ಧಿಕಾರ್ಯಕ್ಕೆ  ಅನುದಾನದ ಹೊಳೆ ಹರಿಸಿದ ಶಾಸಕರ ಕಾರ್ಯ ಶ್ಲಾಘನೀಯ. ದಿ. ಸಂಗಪ್ಪಗೋಳ ಅವರ ಹಾಕಿ  ಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರು ನಡೆಯೋಣ. ಬಿಡುವಿನ ಸಂಧರ್ಭದಲ್ಲಿ ಕಾಲೇಜಿಗೆ ಬೇಟಿ ನೀಡಿ ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತೇನೆ ಎಂದರು. 

ಚಂದರಗಿ ಕ್ರೀಡಾ ಶಾಲೆಯ ಉಪಾಧ್ಯಕ್ಷರಾದ ಮಹೇಶ ಬಾತೆ ಮಾತನಾಡಿ, ಕಾರ್ಯಕ್ರಮಗಳು ಇತರರಿಗೆ ಮಾದರಿ ಯಾಗಬೇಕು ವಿಧ್ಯರ್ಥಿಗಳಿಗೆ ಪ್ರೋತ್ಸಾಹದಾಯಕ ವಾಗಿರಬೇಕು.ಶಿಕ್ಷಣದ ಸಸಿ ನಟ್ಟು ಬಡ ಮಕ್ಕಳಿಗೆ ಶಿಕ್ಷಣಕಲ್ಪಿಸುವ ಮಹದಾಸೆ ಹೊಂದಿದ್ದ ದಿ. ಬಿ ಆರ್ ಸಂಗಪ್ಪಗೊಳ ಅವರ ಕಾರ್ಯ ಮಾದರಿಯಾಗಿದೆ. ಆ ನಿಟ್ಟನಲ್ಲಿ ಸರಕಾರದಿಂದ ಅನುದಾನ ತಂದು ಅಭಿವೃದ್ದಿಗೆ ನಾಂದಿ ಹಾಡಿದ ಶಾಸಕರ ಶ್ಲಾಘನೀಯ.ಇನ್ನೂ ನಾವೇಲ್ಲರು ಸೇರಿ ಕಾಲೇಜು ಹೆಮ್ಮರವಾಗಿ ಬೆಳೆಸೋಣ ಎಂದರು. 

ದ್ವಿತಿಯ ಪಿಯುಸಿ ಯಲ್ಲಿ ರಾಜ್ಯ ಮಟ್ಟಕ್ಕೆ ರಾ​‍್ಯಂಕ್ ಪಡೆದ ಮಜಲಟ್ಟಿ ಕಾಲೇಜಿನ 5 ವಿಧ್ಯಾರ್ಥಿನಿಯರಿಗೆ ಲಾಪ್ ಟಾಪ್ ವಿತರಿಸಿ ಗೌರವಿಸಲಾಯಿತು. ಪ್ರಾಂಶುಪಾಲರಾಗಿ ಸೇವಾ ನೀವೃತ್ತಿ ಹೊಂದಿದ ಆನಂದ ಕೋಳಿ ದಂಪತಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.  ವಿಶ್ವನಾಥ ಚೌಹಲಾ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು, ರವೀಂದ್ರ ಕಾಗಲೆ ಪ್ರಾಸ್ತಾವಿಕ  ಮಾತನಾಡಿದರು,ಹನಂಮತ ಟಕ್ಕನ್ನವರ ನಿರೂಪಿಸಿದರು, ಉಪನ್ಯಾಸಕ ಜಿ ಆರ್ ಬಿರಾದಾರ ಸ್ವಾಗತಿಸಿದರು, ವಿಜಯ ಶೆಟ್ಟಿ ವಂದಿಸಿದರು. 

ಈ ಸಂಧರ್ಭದಲ್ಲಿಪ್ರಭಾರ ಡಿಡಿಪಿಯು ಬಸವರಾಜ ಹಾದಿಮನಿ, ನಿವೃತ್ತ ಡಿಡಿಪಿಐ ಪಿ ಆಯ್ ಭಂಡಾರೆ,  ವಿ ಎನ್ ಶಿರಗಾಂವಕರ್, ಸದಾಶಿವ ಘೊರೆ​‍್ಡ, ಚಿಕ್ಕೋಡಿ ಜಿಲ್ಲಾ ಸರಕಾರಿ ನೌಕರ ಸಂಘದ ಅಧ್ಯಕ್ಷ ಬಿ ಎ ಕುಂಬಾರ, ಕೆ ಪಿ ತಂಗಡಿ,ವಿಜಯ ಕೋಠಿವಾಲೆ,  ದುಂಡಪ್ಪಾ ಉಪ್ಪಾರ ಸೇರಿ ಹಲವರು ಇದ್ದರು. 


ಸುದ್ದಿ ಓದಿ