ಸಸಿ ನೆಡುವ ಜೊತೆಗೆ ಸಂರಕ್ಷಣೆಯೂ ಅಗತ್ಯ
Along with planting saplings, conservation is also necessary.
ಬ್ಯಾಡಗಿ 06 : ಸಸಿ ನೆಡುವ ಜತೆಗೆ ಅವುಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿಯೂ ಅಗತ್ಯವಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು. ಶುಕ್ರವಾರ ಅವರು ಪಟ್ಟಣದ ಶ್ರೀ ಅಂಬೇಡ್ಕರ ಕಲಾ ಭವನದ ಹತ್ತಿರದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.ಸಸಿಗಳನ್ನು ನೆಪಕ್ಕೆ ಮಾತ್ರ ನೆಟ್ಟು ಬಿಡುವಂತ ಕಾರ್ಯವಾಗಬಾರದು. ಶಾಲೆ, ಸಾರ್ವಜನಿಕ ವಲಯದಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಕಾರ್ಯವಾಗಬೇಕು.ಗಿಡಗಳನ್ನು ಪೋಷಿಸುವುದರ ಜತೆಗೆ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಸಸಿ ನೆಡುವುದು ಹಾಗೂ ಪೋಷಿಸುವುದು ಕೇವಲ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಕೆಲಸ ಎಂದು ಭಾವಿಸದೆ ಜನಸಾಮಾನ್ಯರು ಪರಿಸರವನ್ನು ಉಳಿಸಿ ಬೆಳೆಸುವ ಕೆಲಸದಲ್ಲಿ ತೊಡಗಬೇಕು.
ನಾವು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸಸಿ ಬೆಳೆಸುವುದರ ಜತೆಗೆ ಪರಿಸರದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿಕೊಡಬೇಕಾಗಿದೆಇದರಿಂದ ನೆಟ್ಟ ಸಸಿಗಳು ಬೆಳೆಯಲು ಸಹಾಯವಾಗುತ್ತದೆ. ಪ್ರತಿಯೊಬ್ಬ ಮನುಷ್ಯ ನಿತ್ಯ ಕೆಲ ಸಮಯ ಪರಿಸರ ಬೆಳೆಸುವಲ್ಲಿ ನಿರತರಾದಾಗ ಉತ್ತಮ ಆರೋಗ್ಯದ ಜತೆಗೆ ಪರಿಶುದ್ಧ ವಾತಾವರಣ ನಿರ್ಮಿಸಲು ಸಾಧ್ಯವಾಗಲಿದೆ ಎಂದರು.ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ ಪರಿಸರ ಉಳಿಸಿ, ಬೆಳೆಸುವ ಹೊಣೆ ಹೊರಬೇಕಾಗಿದೆ. ಪರಿಸರ ರಕ್ಷಿಸಿದರೆ ಮಾತ್ರ ನಾವು ಆರೋಗ್ಯವಾಗಿ ಬದುಕಲು ಸಾಧ್ಯ. ನಮ್ಮ ಮುಂದಿನ ಪೀಳಿಗೆಗೂ ಅರಣ್ಯ ಬೆಳೆಸಬೇಕು. ಪ್ರತಿಯೊಂದು ಮಗು ತಮ್ಮ ಹಿರಿಯರ ಹೆಸರಿನಲ್ಲಿ ಒಂದೊಂದು ಸಸಿ ನೆಟ್ಟು ಮರವಾಗುವಂತೆ ನೋಡಿಕೊಳ್ಳಬೇಕು.
ಗಿಡಗಳನ್ನು ಕಡಿಯುವ ಮನುಷ್ಯರು ಅವುಗಳನ್ನು ಪುನಃ ಬೆಳೆಸುವ ಕಾರ್ಯ ಮಾತ್ರ ಮಾಡುತ್ತಿಲ್ಲ. ಚಿಕ್ಕ ಮಕ್ಕಳಿಗೆ ಆರಂಭದಿಂದಲೇ ಪರಿಸರದ ಬಗ್ಗೆ, ಗಿಡ-ಮರಗಳನ್ನು ಬೆಳೆಸುವುದರ ಬಗೆಗೆ ಅರಿವು ಮೂಡಿಸುವ ಕಾರ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಪರಿಸರ ಉಳಿಸುವ ಕೆಲಸ ಮಾಡಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದಾನಪ್ಪ ಚೂರಿ, ನಾಗರಾಜ್ ಆನ್ವೇರಿ, ಡಿ,ಹೆಚ್ ಬುಡ್ಡನಗೌಡ,ಡಾ,ಎ,ಎಮ್,ಸೌದಾಗರ್, ಅಬ್ದುಲ್ ಮುನಾಫ್ ಎರಸಿಮಿ, ಗಂಗಣ್ಣ ಯಲಿ, ತಹಸಿಲ್ದಾರ್ ಚಂದ್ರಶೇಖರ ನಾಯ್ಕ,ತಾ,ಪಂ, ಕಾರ್ಯನಿರ್ವಾಹಕ ಅಧಿಕಾರಿ ಕೆ ಎಮ್ ಮಲ್ಲಿಕಾರ್ಜುನ್, ಪುರಸಭೆ ಮುಖ್ಯಾಧಿಕಾರಿ ವಿನಯ್ ಕುಮಾರ ಹೊಳೆಪ್ಪಗೋಳ, ಅರಣ್ಯ ಇಲಾಖೆ ಅಧಿಕಾರಿ ಲೋಕೇಶ ಚೌಹಾಣ್,ಪ್ರವಿಣ, ಸೇರಿದಂತೆ ಇನ್ನಿತರರಿದ್ದರು,
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 