ಧಾರವಾಡ - ಹುಬ್ಬಳ್ಳಿ

ಜೆಎಸ್‌ಎಸ್ ಸಂಸ್ತೆ - ಸುಕೃತಿ ಮಂತ್ರ ಸಂಸ್ಥೆ ನಡುವೆ ಒಪ್ಪಂದ

ಜೆಎಸ್‌ಎಸ್ ಸಂಸ್ತೆ - ಸುಕೃತಿ ಮಂತ್ರ ಸಂಸ್ಥೆ ನಡುವೆ ಒಪ್ಪಂದ

ಲೋಕದರ್ಶನ ವರದಿ 

ಧಾರವಾಡ ಜು 1: ಧಾರವಾಡದ ವಿದ್ಯಾಗಿರಿಯ ಜೆ.ಎಸ್‌.ಎಸ್‌. ಮಂಜುನಾಥೇಶ್ವರ ಪದವಿ ಹಾಗೂ ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಮತ್ತು ಸುಕೃತಿ ಮಂತ್ರ ಸಂಸ್ಥೆಯ ನಡುವೆ ಮಹಿಳಾ ಸಬಲೀಕರಣ ಹಾಗೂ ಉದ್ಯೋಗಮೇಳಗಳ ಆಯೋಜನೆಗೆ ಸಂಬಂಧಿಸಿದಂತೆ ಒಪ್ಪಂದ (ಎಂಒಯು) ಮಾಡಿಕೊಳ್ಳಲಾಯಿತು.  

ಒಪ್ಪಂದದ ಮೂಲಕ ಮಹಿಳೆಯರ ಕೌಶಲಾಭಿವೃದ್ಧಿ, ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ವಿವಿಧ ಉದ್ಯೋಗಮೇಳಗಳ ಆಯೋಜನೆಗೆ ಉಭಯ ಸಂಸ್ಥೆಗಳು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ.  

ಈ ಸಂದರ್ಭದಲ್ಲಿ ಜೆ.ಎಸ್‌.ಎಸ್‌. ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್, ಆಡಳಿತಾಧಿಕಾರಿಗಳಾದ ಅರಿಹಂತ ಪ್ರಸಾದ್, ಮಾಲವಿಕಾ ಕಡಕೋಳ, ಮಹಾವೀರ ಉಪಾಧ್ಯೆ ಹಾಗೂ ಸ್ನೇಹಾ ದೇಶಪಾಂಡೆ ಉಪಸ್ಥಿತರಿದ್ದರು. 


ಸುದ್ದಿ ಓದಿ