ಬಹುಕೋಟಿ ವಂಚನೆ ಆರೋಪ : ಆದಿತ್ಯರಾಜ ಕ್ಯಾಪಿಟಲ್ ಮೇಲೆ ದಾಳಿ
Adityaraja Capital raided for alleged multi-crore fraud
ಲೋಕದರ್ಶನ ವರದಿ
ಬೆಳಗಾವಿ 04: ಬೆಳಗಾವಿಯಲ್ಲಿ ಬಹುಕೋಟಿ ವಂಚನೆ ಆರೋಪದ ಹಿನ್ನಲೆಯಲ್ಲಿ ಶಿವಂ ಅಸೆಟ್ಸಿಯೆಟ್ ಸಂಸ್ಥೆಯ ಮೇಲೆ ನಡೆದ ದಾಳಿಯು ಮಾಸುವ ಮುನ್ನವೇ ಹೆಚ್ಚಿನ ಬಡ್ಡಿ ನೀಡುವ ಆಸೆ ತೋರಿಸಿ ಹಣ ಸಂಗ್ರಹಸುತ್ತಿದ್ದ ಮತ್ತೊಂದು ಕಂಪನಿ ಮೇಲೆ ಬೆಳಗಾವಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಗುರುವಾರ ದಾಳಿ ನಡೆದಿದೆ.
ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ರೂ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಶಿವಂ ಅಸೋಸಿಯೇಟ್ನ ಮಾಲಿಕ ಶಿವಾನಂದ ನೀಲಣ್ಣವರ್ ಮಾದರಿಯಲ್ಲೇ ಮತ್ತೊಂದು ವಂಚನೆ ಪ್ರಕರಣ ಹೊರಬಂದಿದೆ. ನೆರೆಯ ಮಹಾರಾಷ್ಟ್ರ ಮೂಲದ ಬಲರಾಮ್ ಮಾನೆ ಎಂಬುವರ ಒಡೆತನಕ್ಕೆ ಸೇರಿದ ಆದಿತ್ಯರಾಜ ಕ್ಯಾಪಿಟಲ್ ಪ್ರೈ ಲಿ. ಕಂಪನಿ ಇದಾಗಿದ್ದು, ಈ ಕಂಪನಿಯು ಬಹುಕೋಟಿ ರೂಪಾಯಿ ಹಣ ಠೇವಣಿ ಸಂಗ್ರಹದ ಆರೋಪದ ಹಿನ್ನಲೆಯಲ್ಲಿ ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ ಅವರ ನೇತೃತ್ವದಲ್ಲಿ ಸಹಕಾರ ಇಲಾಖೆ ಹಾಗೂ ಪೊಲೀಸ ಇಲಾಖೆಗಳು ಈ ದಾಳಿ ನಡೆಸಿವೆ. ದಾಳಿ ವೇಳೆ ಸಂಸ್ಥೆಯ ವೆಬ್ ಸೈಟ್ ಶೆಡ್ ಡೌನ್ ಮಾಡಲಾಗಿದೆ.
ಆದಿತ್ಯರಾಜ ಕ್ಯಾಪಿಟಲ್ ಪ್ರೈ ಲಿ. ಕಂಪನಿಯು ಹೆಚ್ಚಿನ ಬಡ್ಡಿ ನೀಡುವ ಆಮೀಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಠೇವಣಿ ಸಂಗ್ರಹ ಮಾಡಿರುವದು ಬೆಳಕಿಗೆ ಬಂದಿದೆ. ಕಂಪನಿಯ ಮೇಲೆ ಎಸಿ ಶ್ರವಣ್ ನಾಯಕ್ ನೇತೃತ್ವದಲ್ಲಿ ಸಹಕಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿ ಭಾಗ್ಯನಗರದ ಐದನೇ ಕ್ರಾಸ್ನಲ್ಲಿ ಇರುವ ಆದಿತ್ಯರಾಜ್ಯ ಕ್ಯಾಪಿಟಲ್ ಪ್ರಾವೆಟ್ ಲಿಮಿಟೆಡ್ ಮೇಲೆ ದಾಳಿ ನಡೆಸಿದ್ದಾರೆ.
ಸಂಸ್ಥೆಯ ಮಾಲೀಕ ಮಾಹಾರಾಷ್ಟ್ರ ಮೂಲದ ಬಾಲರಾಜ್ ಮಾನೆ ಈತ ಪ್ರತಿ ತಿಂಗಳಿಗೆ ಶೇಕಡಾ 5ರಷ್ಟು ಬಡ್ಡಿ ನೀಡುವ ಆಮೀಷವೊಡ್ಡಿರುವ ಆರೋಪ ಇವರ ಮೇಲೆ ಇದೆ. ಇವರ ಸಂಸ್ಥೆ ಆರ್ಬಿಐ ಸೇರಿ ಯಾವುದೇ ಸಂಸ್ಥೆಯಿಂದ ಅನುಮತಿ ಪಡೆದಿಲ್ಲ. ಜನರಿಂದ ಈಗಾಗಲೇ ಕೋಟ್ಯಾಂತರ ರೂಪಾಯಿ ಸಂಗ್ರಹ ಮಾಡಾಲಾಗಿದೆ. ಹೂಡಿಕೆ ಸಂಗ್ರಹ ಹೆಚ್ಚಿಸಲು ಹಲವು ಪ್ರಚಾರ ಕಾರ್ಯಕ್ರಮ ಮಾಡಿ, ವೆಬ್ ಸೈಟ್ ಮೂಲಕ ಹೂಡಿಕೆಗೆ ಜನರನ್ನು ಆಕರ್ಷಿಸಲಾಗಿತ್ತು. ಸಧ್ಯ ದಾಳಿ ವೇಳೆ ಸಂಸ್ಥೆಯ ವೆಬ್ ಸೈಟ್ ಶೆಡ್ ಡೌನ್ ಮಾಡಲಾಗಿದೆ. ಆದರೂ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 