ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ಮಹಾಪುರಾಣ ಸಂಪನ್ನ

ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ಮಹಾಪುರಾಣ ಸಂಪನ್ನ  Adavisiddheshwara Jatra Festival and Mahapurana Sampanna


ನೇಸರಗಿ 08 : ಸಮೀಪದ ಮೇಕಲಮರಡಿ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ   ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ   ಅಡವಿಸಿದ್ದೇಶ್ವರ ಮಹಾಪುರಾಣ ಕಾರ್ಯಕ್ರಮವು ಸೆ. 3ರಿಂದ 7ರವರೆಗೆ ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು. ತೋಂಟದಾರ್ಯ ವಿರಕ್ತಮಠ ಅರಳಿಕಟ್ಟಿಯ ಶಿವಮೂರ್ತಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮಹಾಪುರಾಣ ಕಾರ್ಯಕ್ರಮ ನೆರವೇರಿತು. ಮಲ್ಲಾಪುರ ಕೆ.ಎನ್‌. ಗಾಳೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು, ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗೇಂದ್ರ ಮಹಾಸ್ವಾಮಿಗಳು ಹಾಗೂ ಅನಗವಾಡಿಯ ಮಾತೋಶ್ರೀ ಅನುಶ್ರೀ ಅಮ್ಮನವರು ಪುರಾಣ ಪ್ರವಚನದ ಸಾನಿಧ್ಯ ವಹಿಸಿದ್ದರು. ಪ್ರತಿದಿನ ಪುರಾಣ ಪ್ರವಚನದ ಸಂದರ್ಭದಲ್ಲಿ ವಿವಿಧ ಸಂಘ-ಸಂಸ್ಥೆಗಳು, ನೌಕರರು, ಕುಟುಂಬಸ್ಥರು ಹಾಗೂ ಗ್ರಾಮದ ಸರ್ವ ಜನತೆಯ ಸಹಕಾರದಿಂದ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಜಾತ್ರಾ ಮಹೋತ್ಸವ ಹಾಗೂ ಪುರಾಣ ಕಾರ್ಯಕ್ರಮದಲ್ಲಿ ಮೇಕಲಮರಡಿ ಗ್ರಾಮದ ಅಂಕಲಗಿ ಅಡವಿಸಿದ್ದೇಶ್ವರ ಶರಣರ ಬಳಗದ ಸದಸ್ಯರಾದ ಬಸಯ್ಯ ಹಿರೇಮಠ, ಕಾರ್ಷಿಕ ತ. ಹಿರೇಮಠ, ಮಹಾಂತೇಶ ದು. ಹಿರೇಮಠ, ಬಸಯ್ಯ ಕ. ಪೂಜೇರಿ, ಬಸವರಾಜ ಮ. ಬಡಿಗೇರ, ಬಸವರಾಜ ಚ. ಕುರಗುಂದ, ಯಲ್ಲಿನಗೌಡ ಹ. ಮಾಳನಾಯ್ಕರ, ಮಹಾಂತೇಶ ಗಿ. ಬಡಿಗೇರ, ರಮೇಶ ಚ. ಬಡಿಗೇರ, ಈರ​‍್ಪ ಬ. ಕಲ್ಲನವರ, ಬಸಲಿಂಗಪ್ಪ ಶಿ. ನೇಸರಗಿ, ರುದ್ರ​‍್ಪ ಅ. ಕಲ್ಲನವರ, ನಿಂಗಪ್ಪ ಬ. ನಾವಿ, ಫಕೀರಗೌಡ ಸೂ. ಪಾಟೀಲ, ನಾರಾಯಣ ಮೀರಜ್ಕರ, ಗಂಗಪ್ಪ ರು. ಕಂಬಾರ, ಗಂಗನಾಯಕ ಪ. ಪಾಟೀಲ, ಜಗದೀಶ ಮ. ಪಾಟೀಲ, ಲಕ್ಷ್ಮಣ ಬಿ. ನಡಟ್ಟಿ, ಸಿದ್ಧಾರೂಢ ಚ. ಕುರಗುಂದ, ಸಂಜು ಬ. ಕಮತಗಿ, ಸೋಮನಿಂಗ ನಾ. ಕುರಗುಂದ, ಮಹಾಂತೇಶ ಈ. ಮಡಿವಾಳ, ಕಿರಣ ಬ. ಕಡಪನವರ ಸೇರಿದಂತೆ ಶರಣ ಬಳಗದ ಸದಸ್ಯರು, ಗ್ರಾಮಸ್ಥರು ಹಾಗೂ ಗುರು-ಹಿರಿಯರು ಉಪಸ್ಥಿತರಿದ್ದರು.