ಕ್ರೀಡೆಯಲ್ಲಿ ಎಸ್.ಆರ್.ಎಮ್ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ
Achievements of SRM College students in sports
ಯಮಕನಮರಡಿ 01: ಸ್ಥಳೀಯ ಎಸ್.ಆರ್.ಎಮ್ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚಿಗೆ ಹುಕ್ಕೇರಿಯಲ್ಲಿ ನಡೆದ ತಾಲೂಕಾ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾಗಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಕ್ಕಾಗಿ ಕಾಲೇಜಿನ ಪರವಾಗಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಯಿತು.
ತಾಲೂಕಾ ಮಟ್ಟದ ಕ್ರೀಡೆಗಳಲ್ಲಿ 100 ಮೀಟರ ಓಟದಲ್ಲಿ ಕೌಶಲ್ಯ ನಾಯಿಕ ಪ್ರಥಮ ಸ್ಥಾನ,200 ಮೀಟರ ಓಟದಲ್ಲಿ ಕೋಮಲ ನಾಯ್ಕ ಪ್ರಥಮ ಹಾಗೂ ಶ್ರೀದೇವಿ ನಾಯ್ಕ ದ್ವಿತೀಯ ಸ್ಥಾನ, 3000 ಮೀಟರ ಓಟದಲ್ಲಿ ಸಾನಿಕಾ ನಾಯ್ಕ ದ್ವಿತೀಯ ಸ್ಥಾನ, 3000 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ಪ್ರಿಯಾಂಕಾ ಪ್ರಧಾನ ಪ್ರಥಮ ಸ್ಥಾನ, ಐಚ್ಛಿಕ ಯೋಗ ಸ್ಪರ್ಧೆಯಲ್ಲಿ ಭರಮಾ ಪಾಟೀಲ ಪ್ರಥಮ ಸ್ಥಾನ ಹಾಗೂ 100x400 ರಿಲೇ ಓಟದಲ್ಲಿ ಸಾನಿಕಾ ನಾಯ್ಕ ಕೌಸಲ್ಯ ನಾಯ್ಕ ಶ್ರೀದೇವಿ ನಾಯ್ಕ ಹಾಗೂ ಲಕ್ಷ್ಮೀ ಪಾಟೀಲ ದ್ವಿತೀಯ ಸ್ಥಾನ ಗಳಿಸಿ ಕಾಲೇಜಿಗೆ ಕೀರ್ತಿ ತಂದು ಕೊಟ್ಟು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಆದಕಾರಣ ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ವೀರಣ್ಣ ಬಿಸಿರೊಟ್ಟಿ ಸದಸ್ಯರಾದ ಸಿದ್ದಪ್ಪ ಶಿಳ್ಳಿ, ಅಸ್ಲಂ ಪಕಾಲಿ ಹಾಗೂ ಈಶ್ವರ ಮಾರ್ಯಾಳಿ ಅವರು ಹಾಜರಾಗಿ ವಿದ್ಯಾರ್ಥಿಗಳ ಸಾಧನೆ ಕೊಂಡಾಡಿ ಅಭಿನಂದನೆ ಸಲ್ಲಿಸಿದರು. ಅಭಿನಂದನಾ ಕಾರ್ಯಕ್ರಮದಲ್ಲಿ ಎಸ್.ಆರ್ ತಬರಿ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳ ಸಾಧನೆ ತಿಳಿಸಿದರು.
ಕ್ರೀಡಾ ಮುಖ್ಯಸ್ಥ ಬಿ.ಬಿ.ಕೊಡ್ಲಿ ಮಾತನಾಡಿ ವಿಜೇತರ ಮುಂದಿನ ಹಂತಕ್ಕೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎಸ್.ಎ.ರಾಮನಕಟ್ಟಿ ಉಪಸ್ಥಿತರಿದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 