ಸಾಧನೆ ಮಾಡಿ ಪಾಲಕರಿಗೆ ಕೀರ್ತಿ ತನ್ನಿ :ಶಿವಶಾಂತವೀರ ಶ್ರೀಗಳು
Achieve success and bring glory to your parents: Shivashanthaveera Sri
ಕೊಪ್ಪಳ 02: ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಹ ಶೈಕ್ಷಣಿಕ ಸಾಧನೆ ಮಾಡಿ ಪಾಲಕರಿಗೆ ಕೀರ್ತಿ ತರಬೇಕು ಎಂದು ಕಡಲಬಾಳು ಗವಿಮಠ ಶಾಖಾ ಮಠದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ಹೇಳಿದರು. ನಗರದ ಶ್ರೀ ರೇಣುಕಾಚಾರ್ಯ ಮಂದಿರದ ಭವನದಲ್ಲಿ ನಡೆದ ಜಂಗಮ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅರಿವು ಆಚಾರ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಕಾರ್ಯವನ್ನು ಜಂಗಮ ಸಮಾಜ ಪ್ರತಿ ವರ್ಷವೂ ಮಾಡುತ್ತಿದ್ದು, ಮಕ್ಕಳು ಮುಂದಿನ ತಮ್ಮ ಶೈಕ್ಷಣಿಕ ದಿನಗಳಲ್ಲಿ ಸತತ ಅಧ್ಯಯನ ನಡೆಸಿ ಹೆತ್ತವರಿಗೆ ಹಾಗೂ ಕಳಿಸಿದ ಗುರುಗಳಿಗೆ ಕೀರ್ತಿ ತನ್ನರಿ ಎಂದರು. ಇದೇ ವೇಳೆ ಮೈನಳ್ಳಿ- ಬಿಕನಳ್ಳಿ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಜಂಗಮ ಸಮಾಜದ ಹಂಪಯ್ಯ ಮೆತಗಲ್ಲ, ಚಂದ್ರಶೇಖರಯ್ಯ ಸೊಪ್ಪಿಮಠ, ವಿಕೆ ಜಾಗಟಗೇರಿ, ಗವಿಸಿದ್ದಯ್ಯ ಸಸಿಮಠ, ಬಾಲಚಂದ್ರಯ್ಯ, ಶಂಕರಯ್ಯ ಹಿರೇಮಠ, ಶಂಕರಯ್ಯ ಸಾಲಿಮಠ, ಸದಾಶಿವಯ್ಯ ಹಿರೇಮಠ, ಮಂಜು ಸಾಲಿಮಠ, ವೀರೇಶ್ ಮಹಾಂತಯ್ಯನಮಠ, ಜಗದೀಶ್ ಹಿರೇಮಠ, ಡಾ.ಗೀರೀಶ ನವಲಿಹಿರೇಮಠ ಸೇರಿದಂತೆ ಜಂಗಮ ಸಮಾಜದ ಅನೇಕರು ಭಾಗವಹಿಸಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 