ಕಾರವಾರ

ಪೊಲೀಸರಿಗೆ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದ ಆರೋಪಿ ತಜಗಾಂವ್ ನಲ್ಲಿ ಬಂಧನ

ಪೊಲೀಸರಿಗೆ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದ ಆರೋಪಿ ತಜಗಾಂವ್ ನಲ್ಲಿ ಬಂಧನ

ಕಾರವಾರ 22 : ಹಳಿಯಾಳದಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ , ಧಮ್ಕಿ ಹಾಕಿ ಪರಾರಿಯಾಗಿದ್ದ ಆರೋಪಿ  ಮಂಜುನಾಥ್ ಅಲಿಯಾಸ್ ಮಚ್ಚ ಮಂಜಾ  ಮಹಾರಾಷ್ಟ್ರದ ಸಾಂಗ್ಲಿಯ ತಜಗಾಂವ್ ಬಳಿ ಬಂಧಿಸಿದ್ದಾರೆ.  ಆರೋಪಿಯನ್ನು ಹಳಿಯಾಳ ನ್ಯಾಯಾಧೀಶರ ಎದುರು ಹಾಜರುಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಳಿಯಾಳ ಮೌರ್ಯ ಬಾರ್ ಎದುರು ಪೊಲೀಸರಿಗೆ ಜೀವ  ಬೆದರಿಕೆ ಹಾಕಿ, ಹಲ್ಲೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿ,  ತಲೆಮರೆಸಿಕೊಂಡಿದ್ದ.  ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಿದ್ದ, ಅವಾಚ್ಯ ಶಬ್ದದಿಂದ ಬೈದಿದ್ದ ವಿಡಿಯೋ ರಾಜ್ಯದ ಬಹುತೇಕ ಕಡೆ ವೈರಲ್ ಆಗಿತ್ತು. ನಂತರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹಳಿಯಾಳ ಪಿಎಸ್ ಐ ಒಬ್ಬರನ್ನು ಅಮಾನತ್ ಮಾಡಿ, 8 ಜನ ಸಿಬ್ಬಂದಿಗಳನ್ನು ಭಟ್ಕಳ, ಮುರುಡೇಶ್ವರ ಠಾಣೆಗಳಿಗೆ ವರ್ಗಾವಣೆ ಮಾಡಿದ್ದರು.  


ಸುದ್ದಿ ಓದಿ