ಬೀದಿ ನಾಯಿಗಳ ಅಟ್ಟಹಾಸ ಆಕಳು ಕರು ಸಾವು

ಬೀದಿ ನಾಯಿಗಳ ಅಟ್ಟಹಾಸ ಆಕಳು ಕರು ಸಾವು Cow and calf die due to attack by stray dogs

ಲಕ್ಷ್ಮೇಶ್ವರ " 25 : ತಾಲ್ಲೂಕಿನ ಗೊಜನೂರ ಗ್ರಾಮದ ರೈತ ಮುಖಂಡರು ಹಾಗೂ ಕೃಷಿಕ ಸಮಾಜ ನವದೆಹಲಿ ಲಕ್ಷ್ಮೇಶ್ವರ ತಾಲೂಕ ಅಧ್ಯಕ್ಷರು ಆದ ಚನ್ನಪ್ಪ ಷಣ್ಮುಖಿ ಎಂಬುವ ರೈತರು ತಮ್ಮ ಮನೆಯಲ್ಲಿ ಜೋಪಾನ ಮಾಡಿದ ಆಕಳು ಕರುವಿನ ಮೇಲೆ ಬುಧುವಾರ ಬೀದಿ ನಾಯಿಗಳು ಅಟ್ಟಹಾಸ ಮೆರೆದಿವೆ ಕರುವಿಗೆ ಎಲ್ಲೆಂದರಲ್ಲಿ ಕಚ್ಚಿ ಮಾಸ ತಿಂದು ಗಾಯ ಗೊಳಿಸಿ ಕೊನೆಗೂ ಜೀವ ತೆಗೆದ ಘಟನೆ ನಡೆದಿದ್ದು ಆಕಳು ಜೋಪಾನ ಮಾಡಿದ್ದ ರೈತ ಕುಟುಂಬದ ಮನೆಯವರು ಕಣ್ಣೀರು ಸುರಿಸುವಂತೆ ಆಗಿದೆ ಇದಕ್ಕೆಲ್ಲ ಕಾರಣ ಗ್ರಾಮದ ಹತ್ತಿರ ಇರುವ ಚಿಕನ್ ಸೆಂಟರ್ , ಆ ಚಿಕನ್ ಸೆಂಟರ್ ಇರುವುದರಿಂದ ಗ್ರಾಮದಲ್ಲಿ ಬೀದಿ ನಾಯಿಗಳು ಹಾವಳಿ ಹೆಚ್ಚಾಗಿದ್ದು ಕಳೆದ ಕೆಲವು ದಿನಗಳ ಹಿಂದೆ ಬೀದಿ ನಾಯಿಗಳ ಹಾವಳಿಗೆ ಕೆಲವು ದನಕರುಗಳು ಗಾಯಗೊಂಡು ಘಟನೆಗಳು ನಡೆದಿದ್ದವು ಈಗ ಆಕಳ ಕರು ಸಾವು ಕಂಡಿದ್ದು ಇದೇ ರೀತಿ ಮುಂದೆ ಯಾವ ಪ್ರಾಣಿ ಪಕ್ಷಿಗಳಿಗೆ ದನ ಕರುಗಳಿಗೆ ಮಕ್ಕಳಿಗೆಮನುಷ್ಯ ಆಗಬಾರದು ಎಂಬ ಉದ್ದೇಶದಿಂದ ಪಂಚಾಯತಿಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಚಿಕ್ಕನ್ ಅಂಗಡಿಯನ್ನು ತೆರೆವು ಗೂಳಿಸಬೇಕು ಎಂದು ಆಕಳುಕರು ಕಳೆದುಕೊಂಡ ರೈತ ಕುಟುಂಬದವರು ಪಂಚಾಯಿತಿಗೆ ಮತ್ತು ಪೊಲೀಸ್ ಠಾಣೆಗೆ ದೂರು ಸಹ ಸಲ್ಲಿಸಿದ್ದು ಅಧಿಕಾರಿಗಳು ಚಿಕನ್ ಅಂಗಡಿಯನ್ನು ತೆರುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುವುದು ಗ್ರಾಮಸ್ಥರ ಹಾಗೂ ಸಮಗ್ರ ರೈತ ಹೋರಾಟಗಾರರು ಸಹ ಆಗ್ರಹಿಸಿದ್ದಾರೆ.